ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್ | ವಿದ್ಯುತ್ ಸ್ಪರ್ಶ: ಕಾಡಾನೆ ಸಾವು

Published 8 ಮೇ 2024, 22:53 IST
Last Updated 8 ಮೇ 2024, 22:53 IST
ಅಕ್ಷರ ಗಾತ್ರ

ಆನೇಕಲ್: ಸಮೀಪದ ತಮಿಳುನಾಡಿನ ಡೆಂಕಣಿಕೋಟೆ ಸಮೀಪದ ಚಂದನಪಲ್ಲಿಯಲ್ಲಿ ಮಂಗಳವಾರ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಕಾಡಾನೆಗಳ ಹಿಂಡಿನ ಸಲಗವೊಂದು ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿದೆ.

ಸುಮಾರು ಹತ್ತು ವರ್ಷದ ಗಂಡಾನೆ ಮೃತಪಟ್ಟಿದೆ. ಡೆಂಕಣಿಕೋಟೆ ಅರಣ್ಯ ಇಲಾಖೆಯ ಸಿಬ್ಬಂದಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನಡೆಸಿದರು.

ಡೆಂಕಣಿಕೋಟೆ, ಜವಳಗೆರೆ ಅರಣ್ಯ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಕಾಡಾನೆಗಳ ಹಿಂಡಿದ್ದು ಪ್ರತಿದಿನ ಕಾಡಿನಿಂದ ಗ್ರಾಮಗಳತ್ತ ಬರುತ್ತಿವೆ. ಹಾಗಾಗಿ ರೈತರು ಆತಂಕದಿಂದ ಜೀವನ ಸಾಗಿಸಬೇಕಾದ ಪರಿಸ್ಥಿತಿಯಿದೆ. ತೋಟದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT