ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಸೂಕ್ತ ಕಾರ್ಯ ನಿರ್ವಹಣೆಗೆ ಒತ್ತಾಯ

Last Updated 9 ಫೆಬ್ರುವರಿ 2020, 13:23 IST
ಅಕ್ಷರ ಗಾತ್ರ

ಸೂಲಿಬೆಲೆ: ‘ಪಟ್ಟಣದಲ್ಲಿ ಟ್ರಾನ್ಸಫಾರ್ಮರ್ ಸುಟ್ಟು ಹೋಗಿದೆ ಎಂದು ಶನಿವಾರ ದೂರು ನೀಡಲಾಗಿದೆ. ಎರಡು ದಿನದಿಂದ ವಿದ್ಯುತ್ ಇಲ್ಲದೆ ಬೆಳೆಗಳು ಒಣಗುತ್ತಿರುವುದರಿಂದ, ಕಚೇರಿಗೆ ಭೇಟಿ ನೀಡಿ ವಿಚಾರಿಸಲು ಬಂದರೆ ಬೆಸ್ಕಾಂ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಸಿಬ್ಬಂದಿಯೇ ಇಲ್ಲ’ ಎಂದು ಸೂಲಿಬೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮರವೆ ಕೃಷ್ಣಪ್ಪ ಆರೋಪಿಸಿದ್ದಾರೆ.

‘ಸೂಲಿಬೆಲೆ ಹೋಬಳಿ ಕೇಂದ್ರದಲ್ಲಿರುವ ಬೆಸ್ಕಾಂ ಕಚೇರಿ ದಿನದ 24 ಗಂಟೆಗಳು ಕಾರ್ಯ ನಿರ್ವಹಿಸಬೇಕು. ಯಾವ ಸಮಯದಲ್ಲಾದರೂ ಅವಘಡ ಸಂಭವಿಸಬಹುದು. ಹಾಗಾಗಿ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು ಕಚೇರಿಗೆ ಬಂದರೆ ಯಾರನ್ನು ಸಂಪರ್ಕಿಸುವುದು. ಯಾರಿಗೆ ದೂರು ನೀಡುವುದು’ ಎಂದು ಪ್ರಶ್ನಿಸಿದ್ದಾರೆ.

‘ಜನಪ್ರತಿನಿದಿಗಳು ಕಚೇರಿಗೆ ಭೇಟಿ ನೀಡಿದರೇ ಕೇಳುವವರಿಲ್ಲ. ಇನ್ನು ಸಾಮಾನ್ಯ ಜನರ ಸಮಸ್ಯೆಗಳಿಗೆ ಸಿಬ್ಬಂದಿ ಹೇಗೆ ಸ್ಪಂದಿಸುತ್ತಾರೆ. ಕೂಡಲೇ ಬೆಸ್ಕಾಂ ಹಿರಿಯ ಅಧಿಕಾರಿಗಳು ಗಮನಹರಿಸಿ ಸಾರ್ವಜನಿಕರ ಸಂಪರ್ಕಕ್ಕೆ ದಿನದ 24 ಗಂಟೆ ಸಿಬ್ಬಂದಿ ಕಚೇರಿಯಲ್ಲಿ ಇರುವಂತೆ ವ್ಯವಸ್ಥೆ ಮಾಡಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಘವೇಂದ್ರ ಮೇಲಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

‘ಸೂಲಿಬೆಲೆ ಬೆಸ್ಕಾಂ ಕಚೇರಿ ಸಿಬ್ಬಂದಿ ಬೆಳಿಗ್ಗೆ ಬಂದು ಬಯೋಮೆಟ್ರಿಕ್ ಲಾಗ್ ಇನ್ ನೀಡಿ ಹೋಗುತ್ತಾರೆ. ಮತ್ತೆ ಸಂಜೆ ಬಂದು ಬಯೋಮೆಟ್ರಿಕ್ ಲಾಗ್ ಔಟ್ ನೀಡಿ ಹಾಜರಾತಿಯಲ್ಲಿ ಮಾತ್ರ ಇರುತ್ತಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT