ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ | ಶಾಸಕ ಶರತ್‌ ಬಚ್ಚೇಗೌಡ ಮೇಲಿದೆ ಹಲವು ನಿರೀಕ್ಷೆಗಳು

ಪೂರ್ಣಾವಧಿ ಶಾಸಕರಾಗಿರುವ ಶರತ್ ಬಚ್ಚೇಗೌಡರು ಜನರ ಭರವಸೆ ಈಡೇರಿಸುತ್ತಾರಾ?
Published 24 ಮೇ 2023, 4:06 IST
Last Updated 24 ಮೇ 2023, 4:06 IST
ಅಕ್ಷರ ಗಾತ್ರ

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರಗಳಲ್ಲಿ ಒಂದಾಗಿರುವ ಹೊಸಕೋಟೆಯು, ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿದ್ದ ಕ್ಷೇತ್ರಗಳಲ್ಲಿ ಒಂದು.

ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಕಾಂಗ್ರೆಸ್‌ನ ಶರತ್ ಬಚ್ಚೇಗೌಡ ಜಯಭೇರಿ ಸಾಧಿಸಿದ್ದಾರೆ. ಮೊದಲ ಬಾರಿ ಶಾಸಕರಾಗಿದ್ದಾಗ ಕಡಿಮೆ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲು ಆಗಿರಲಿಲ್ಲ ಎಂಬುದು ಇತ್ತು. ಆದರೆ ಇದೀಗ ಪೂರ್ಣ ಅವಧಿಗೆ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿರುವ ಶರತ್ ಬಚ್ಚೇಗೌಡ ಅವರ ಮೇಲೆ ಕ್ಷೇತ್ರದ ಜನತೆ ಅಪಾರವಾದ ಭರವಸೆಗಳನ್ನು ಇಟ್ಟುಕೊಂಡಿದ್ದಾರೆ.

ಸ್ಯಾಟಲೈಟ್ ನಗರ ಮತ್ತು ಮೆಟ್ರೊ ರೈಲು
ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ಇಬ್ಬರೂ ಮುಖ್ಯಮಂತ್ರಿಗಳು ಹೊಸಕೋಟೆಗೆ ಒಂದೊಂದು ಪ್ರಮುಖ ಘೋಷಣೆ ಮಾಡಿದ್ದರು. ಯಡಿಯೂರಪ್ಪ ಅವರು ಹೊಸಕೋಟೆಗೆ ಮೆಟ್ರೊ ಸಂಪರ್ಕ ಕಲ್ಪಿಸುವುದಾಗಿ ಹೇಳಿದ್ದರೆ, ಬಸವರಾಜ ಬೊಮ್ಮಾಯಿ ಅವರು ಹೊಸಕೋಟೆಯನ್ನು ಸ್ಯಾಟಲೈಟ್ ನಗರವನ್ನಾಗಿ ಮಾಡುವುದಾಗಿ ಘೋಷಣೆ ಮಾಡಿದ್ದರು. ಈ ಎರಡು ಕನಸುಗಳನ್ನು ಹಾಲಿ ಶಾಸಕ ಶರತ್ ಬಚ್ಚೇಗೌಡರದು ಆಗಿತ್ತು ಎನ್ನಲಾಗಿದೆ. ಶಾಸಕರ ಆಸೆಗೆ ಪೂರಕವೆಂಬಂತೆ ರಾಜ್ಯದಲ್ಲಿಯೂ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ. ಈ ಸಂದರ್ಭವನ್ನು ಸದ್ಬಳಕೆ ಮಾಡಿಕೊಂಡು ಹೊಸಕೋಟೆಯನ್ನು ಸ್ಯಾಟಲೈಟ್ ನಗರ ಹಾಗೂ ಮೆಟ್ರೊ ಸಂಪರ್ಕ ಕಲ್ಪಿಸುವ ಕೆಲಸವನ್ನು ಶಾಸಕರು ಮಾಡಬೇಕೆನ್ನುವುದು ಜನರ ನಿರೀಕ್ಷೆಯಾಗಿದೆ.
ಹೊಸಕೋಟೆ ನಗರಕ್ಕೆ ಕಾವೇರಿ ನೀರು ತರಬೇಕೆಂಬ ಜನತೆಯ ಬಹು ದಿನಗಳ ಬೇಡಿಕೆಯನ್ನು ನನಸು ಮಾಡಬೇಕಾದ ಹೊಣೆ ಹೊಸ ಶಾಸಕರ ಮೇಲಿದೆ. ಹೊಸಕೋಟೆಯಿಂದ ಕೇವಲ 10 ಕಿ.ಮೀ. ದೂರವಿರುವ ಕೆ.ಆರ್.ಪುರಂಗೆ ಕಾವೇರಿ ನೀರು ಬಂದಿದೆ. ಅಲ್ಲಿಂದ ಹೊಸಕೋಟೆಗೆ ಕಾವೇರಿ ನೀರು ತರುವುದು ಕಷ್ಟದ ಕೆಲಸವೇನಲ್ಲ. ಇದು ಶಾಸಕರ ಇಚ್ಛಾಶಕ್ತಿ  ಅಗತ್ಯವಾಗಿದೆ. ಚುನಾವಣೆ ಸಂದರ್ಭದಲ್ಲಿ ಶರತ್‌ ಬಚ್ಚೇಗೌಡರು ಹೊಸಕೋಟೆಗೆ ಕಾವೇರಿ ನೀರು ತರುವ ಕುರಿತು ಭರವಸೆ ನೀಡಿದ್ದು, ಅದನ್ನು ಈಡೇರಿಸುವ ನಿರೀಕ್ಷೆಯಲ್ಲಿ ಜನರು ಕಾಯುತ್ತಿದ್ದಾರೆ.ನಿರುದ್ಯೋಗ ಸಮಸ್ಯೆ ಬಗೆಹರಿಸಲಿ ಹೊಸಕೋಟೆಗೆ ಮುಖ್ಯವಾಗಿ ಬೇಕಿರುವುದು ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಮತ್ತು ಉತ್ತಮ ಕೈಗಾರಿಕೆಗಳು. ತಾಲ್ಲೂಕಿನ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿರುವ ಬಹುತೇಕ ಕೈಗಾರಿಕೆಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತಿರುವುದರಿಂದ ಪಟ್ಟದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ. ಹಾಗಾಗಿ ಆ ಜಾಗಕ್ಕೆ ಬೃಹತ್ ಕೈಗಾರಿಕೆಗಳಿಗೆ ಅವಕಾಶ ನೀಡಿ ತಾಲ್ಲೂಕಿನ ಜನತೆಗೆ ಉದ್ಯೋಗ ಕಲ್ಪಿಸಿ ನಿರುದ್ಯೋಗ ಸಮಸ್ಯೆಗೆ ಅಂತ್ಯವಾಡಲಿ. ಅಷ್ಟೇ ಅಲ್ಲದೆ  ನಗರದಲ್ಲಿ ಹೆಚ್ಚುತ್ತಿರುವ ಟ್ರಾಪಿಕ್ ಸಮಸ್ಯೆ ನಿವಾರಿಸಬೇಕು. ಕೆಸಿ‌ ವ್ಯಾಲಿ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ಜನರಿಗೆ ತೊಂದರೆಯಾಗದಂತೆ‌ ನೋಡಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಕಲ್ಪಿಸಲಿ.
-ಜಯರಾಜ ನಂಜಪ್ಪ, ಸಮಾಜ ಸೇವಕ
ಶರತ್ ಬಚ್ಚೇಗೌಡ
ಶರತ್ ಬಚ್ಚೇಗೌಡ
ಹೊಸಕೋಟೆಗೆ ಮುಖ್ಯವಾಗಿ ಬೇಕಿರುವುದು ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಮತ್ತು ಉತ್ತಮ ಕೈಗಾರಿಕೆಗಳು. ತಾಲ್ಲೂಕಿನ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿರುವ ಬಹುತೇಕ ಕೈಗಾರಿಕೆಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತಿರುವುದರಿಂದ ಪಟ್ಟದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ. ಹಾಗಾಗಿ ಆ ಜಾಗಕ್ಕೆ ಬೃಹತ್ ಕೈಗಾರಿಕೆಗಳಿಗೆ ಅವಕಾಶ ನೀಡಿ ತಾಲ್ಲೂಕಿನ ಜನತೆಗೆ ಉದ್ಯೋಗ ಕಲ್ಪಿಸಿ ನಿರುದ್ಯೋಗ ಸಮಸ್ಯೆಗೆ ಅಂತ್ಯವಾಡಲಿ. ಅಷ್ಟೇ ಅಲ್ಲದೆ  ನಗರದಲ್ಲಿ ಹೆಚ್ಚುತ್ತಿರುವ ಟ್ರಾಪಿಕ್ ಸಮಸ್ಯೆ ನಿವಾರಿಸಬೇಕು. ಕೆಸಿ‌ ವ್ಯಾಲಿ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ಜನರಿಗೆ ತೊಂದರೆಯಾಗದಂತೆ‌ ನೋಡಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಕಲ್ಪಿಸಲಿ
ಜಯರಾಜ, ನಂಜಪ್ಪ ಸಮಾಜ ಸೇವಕ

ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಬೇಕಿದೆ:

ಐದು ಹೋಬಳಿ ಕೇಂದ್ರಗಳನ್ನು ಒಳಗೊಂಡಿರುವ ಹೊಸಕೋಟೆ ತಾಲ್ಲೂಕು ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಕಾಯುತ್ತಿದೆ. ಅನುಗೊಂಡನಹಳ್ಳಿ, ಜಡಿಗೇನಹಳ್ಳಿ, ನಂದಗುಡಿ, ಸೂಲಿಬೆಲೆ ಮತ್ತು ಕಸಬಾ ಹೋಬಳಿಗಳನ್ನು ಹೊಂದಿರುವ ಹೊಸಕೋಟೆಯ ಹೃದಯದ ಮೇಲೆ ಬೆಂಗಳೂರು–ಚೆನ್ನೈ ಹೆದ್ದಾರಿ ಹಾದು ಹೋಗಿದೆ. ಉಳಿದಂತೆ ತಾಲ್ಲೂಕಿನ ಬಹುತೇಕ ರಸ್ತೆಗಳು ಸಾರ್ವಜನಿಕರ ಪ್ರಯಾಣಕ್ಕೆ ಅನಾನುಕೂಲವಾಗಿವೆ. ಹೊಸಕೋಟೆ ಸೂಲಿಬೆಲೆ ರಸ್ತೆ, ಹೊಸಕೋಟೆ ಜಂಗಮಕೋಟೆ ರಸ್ತೆ, ಮಾಲೂರು ರಸ್ತೆ ಸೇರಿದಂತೆ ಬಹತೇಕ ಗ್ರಾಮೀಣ ರಸ್ತೆಗಳು ತೀವ್ರವಾಗಿ ಹದಗೆಟ್ಟಿದ್ದು ಆದಷ್ಟು ಬೇಗ ಈ ರಸ್ತೆಗಳತ್ತ ಶಾಸಕರು ಗಮನಿಸಬೇಕಾಗಿದೆ.

ಹೆದ್ದಾರಿಯ ಪಕ್ಕದಲ್ಲಿಯೇ ಕಸ ಸುರಿದಿರುವುದು
ಹೆದ್ದಾರಿಯ ಪಕ್ಕದಲ್ಲಿಯೇ ಕಸ ಸುರಿದಿರುವುದು
ನಗರ ಸ್ವಚ್ಛತೆ ಕಾಮಗಾರಿ ಅಪೂರ್ಣ ಹೊಸಕೋಟೆ ನಗರಸಭೆ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ದೊಡ್ಡದಾಗಿ ಕಾಡುತ್ತಿದೆ. ರಾಷ್ಟ್ರೀಯ  ಹೆದ್ದಾರಿ ಪಕ್ಕದಲ್ಲಿಯೇ ಕಸದ ರಾಶಿ ಸುರಿಯುತ್ತಿರುವ ಜನತೆ ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದ್ದಾರೆ. ಹಾಗಾಗಿ ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವ ಜವಾಬ್ದಾರಿ ಶಾಸಕರ ಮೇಲಿದೆ. ಅಲ್ಲದೆ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ದುರಸ್ತಿ ಮತ್ತು ಹೊಸ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿದೆ. ಇದರಿಂದ ನಗರ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು ಬೇಗ ಈ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಕಿರಿಕಿರಿಯಿಂದ ಮುಕ್ತಿಗೊಳಿಸಬೇಕಾಗಿದೆ.
ಸ್ಥಳೀಯರಿಗೆ ಉದ್ಯೋಗ ಮೀಸಲಿರಿಸಿ ಹೊಸಕೋಟೆ ತಾಲ್ಲೂಕಿನ ಕೈಗಾರಿಕಾ ವಲಯಗಳಲ್ಲಿ ಸ್ಥಾಪಿಸಲಾಗಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದೆ ಹೊರ ರಾಜ್ಯಗಳಿಂದ ಬರುವವರಿಗೆ ಕಡಿಮೆ ಸಂಬಳ ನೀಡಿ ದುಡಿಸಿಕೊಂಡು ಸ್ಥಳೀಯರನ್ನು ಕಡೆಗಣಿಸುತ್ತಿದ್ದಾರೆ. ಆದ್ದರಿಂದ ಎಲ್ಲಾ ಕಂಪನಿ ಮತ್ತು ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಗಳನ್ನು ಮೀಸಲಿರಿಸಬೇಕೆಂದು ನೂತನ ಶಾಸಕರು ಸೂಚನೆ ನೀಡಬೇಕು. ಜೊತೆಗೆ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ತೆರೆಯುವ ಕುರಿತು ಶಾಸಕರು ಗಂಭೀರವಾಗಿ ಚಿಂತನೆ ನಡೆಸಬೇಕು.
– ಎಚ್.ಎನ್.ಮೋಹನ್ ಬಾಬು, ಹೊಸಕೋಟೆಯ ಸಿಐಟಿಯು ತಾಲ್ಲೂಕು ಕಾರ್ಯದರ್ಶಿ
ಹೊಸಕೋಟೆ ರೈತರ ಬೆಲೆಗಳಿಗೆ ಬೆಂಬಲ ಬೆಲೆ ನೀಡಲಿ ತಾಲ್ಲೂಕಿನಲ್ಲಿ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರು ಬೆಳೆದ ಬೆಲೆಗಳಿಗೆ ಸೂಕ್ತ ಬೆಲೆ ಸಿಗದೆ ನಷ್ಟವನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ರೈತರು ಬೆಳೆದ ಬೆಲೆಗೆ ಸೂಕ್ತ ಬೆಲೆ ನಿಗಧಿ ಮಾಡಿ ಮತ್ತು  ಬೆಂಬಲ ಬೆಲೆ‌ ನೀಡಬೇಕು. ಜೊತೆಗೆ ಕೃಷಿ ಯಂತ್ರೋಪಕರಣ ಮತ್ತು ರಸಗೊಬ್ಬರ ಔಷಧಿಗಳ ಹೆಸರಲ್ಲಿ ರೈತರ ಸುಲಿಗೆ ತಡೆಯಲು ಸರ್ಕಾರದ ಮೇಲೆ ಒತ್ತಡ ತರಬೇಕು. ಯು.ಹರೀಶ್ ರೈತ ಹಳೆಯೂರು ಮೂಲಭೂತ ಸೌಕರ್ಯಕ್ಕೆ ಕ್ರಮ ಕೈಗೊಳ್ಳಲಿ ಶೈಕ್ಷಣಿಕವಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಒಂದು ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಕ್ಯಾಂಪಸ್ ಅಗತ್ಯವಿದೆ. ಜೊತೆಗೆ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಕಾಲೇಜುಗಳ ಸಮಸ್ಯೆಗಳನ್ನು ಪರಿಹರಿಸಿ ಎಲ್ಲರಿಗೂ ಸಮಾನ ಶಿಕ್ಷಣ ದೊರಕುವಂತೆ ಮಾಡಬೇಕು. ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ದೊರಕಿಸಿ ಕೊಡಲು ಕ್ರಮ ವಹಿಸಬೇಕಿದೆ.
– ಪವನ್, ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT