ಶನಿವಾರ, ಮೇ 15, 2021
24 °C
ಹೊಸದುಡುಕು ಕುರಿ, ಮೇಕೆ ಸಂತೆ

ರೈತನಿಗೆ ಸಿಗದ ನಿರೀಕ್ಷೆಯ ಬೆಲೆ: ಹೊಸದುಡುಕು ಕುರಿ, ಮೇಕೆ ಸಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಲಿಬೆಲೆ: ನಂದಗುಡಿ ಹೋಬಳಿಯ ಹಿಂಡಿಗನಾಳ ಗ್ರಾಮದಲ್ಲಿ ನಡೆಯುವ ವಾರದ ಸಂತೆಯಲ್ಲಿ ಯುಗಾದಿಯ ಹೊಸದುಡುಕು ಪ್ರಯುಕ್ತ ಕುರಿ ಮೇಕೆಗಳನ್ನು ಮಾರಾಟ ಮಾಡಲು ವಿವಿಧ ಜಿಲ್ಲೆಗಳಿಂದ ಮತ್ತು ಪಕ್ಕದ ಆಂಧ್ರಪ್ರದೇಶದಿಂದ ಅನೇಕ ರೈತರು ಬಂದಿದ್ದರು.

ಒಂದು ವರ್ಷದಲ್ಲಿ ಕೊರೊನಾ ತಂದಿಟ್ಟ ಸಂಕಷ್ಟ ಮತ್ತು ಚೇತರಿಕೆಯಾಗದ ಆರ್ಥಿಕ ಪರಿಸ್ಥಿತಿಯಿಂದಾಗಿ ಸಂತೆಯಲ್ಲಿ ಕುರಿ ಮೇಕೆಗಳನ್ನು ಕೊಳ್ಳುವ ವ್ಯಾಪಾರಿಗಳು ವಿರಳವಾಗಿ ಕಂಡರು. ಹೊಸ ವರ್ಷದ ಹೊಸದುಡುಕು ಸಂತೆಯಲ್ಲಿ ಕುರಿ ಮೇಕೆಗಳನ್ನು ಮಾರಾಟ ಮಾಡಲು ವರ್ಷ ಪೂರ್ತಿ ಕಾಯುವ ರೈತರ ಮೊಗದಲ್ಲಿ ನಿರಾಸೆ ಛಾಯೆ ಕಾಣಿಸಿತು.

ನೆರೆಯ ಆಂಧ್ರಪ್ರದೇಶದಿಂದ ಕುರಿಗಳನ್ನು ಮಾರಲು ತಂದಿದ್ದ ರೈತರೊಬ್ಬರು, ನಿರೀಕ್ಷೆಯ ಬೆಲೆ ದೊರೆಯಲಿಲ್ಲ ಎಂದು ಕುರಿಗಳನ್ನು ಮಾರಾಟ ಮಾಡದೆ, ಬೆಲೆ ಸಿಗುವ ನಿರೀಕ್ಷೆಯಲ್ಲಿ ಇರುವುದಾಗಿ ತಿಳಿಸಿದರು.

ಸಮೀಪದ ಚೊಕ್ಕಹಳ್ಳಿಯಿಂದ ಮೇಕೆಗಳನ್ನು ಮಾರಲು ಬಂದಿದ್ದ ರೈತರೊಬ್ಬರು, ಒಂದು ಮೇಕೆ ಮಾರಾಟವಾಗಿದೆ. ಮತ್ತೊಂದು ಮಾರಾಟವಾಗಬೇಕಾಗಿದೆ ಎನ್ನುತ್ತಾ, ಯುಗಾದಿ ಹೊಸ ದುಡುಕು ಸಂತೆಯಲ್ಲಿ 10ರಿಂದ 15 ಕೆಜಿ ಅಸುಪಾಸಿನ ಕುರಿ. ಮೇಕೆಗಳು ಮಾತ್ರ ಮಾರಾಟವಾಗುತ್ತದೆ. ಬಕ್ರೀದ್ ಹಬ್ಬದ ಸಂತೆಯಲ್ಲಿ ಕುರಿ ಮೇಕೆಗಳಿಗೆ ಹೆಚ್ಚಿನ ಬೇಡಿಕೆ ಇರುತ್ತೆ ಮತ್ತು ಒಳ್ಳೆ ಬೆಲೆಯೂ ಸಿಗುತ್ತದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.