ಮಂಗಳವಾರ, ಆಗಸ್ಟ್ 3, 2021
28 °C

ಅಭಿವೃದ್ಧಿಯಲ್ಲಿ ಅಂಗವಿಕಲರ ಪಾತ್ರವು ಇದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಹಲವಾರು ಕ್ಷೇತ್ರಗಳಲ್ಲಿ ಅಂಗವಿಕಲರ ಪಾತ್ರವು ಇದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ಶಾಸಕರ ಅನುದಾನದಲ್ಲಿ ಮೀಸಲು ಇರುವ ಅಂಗವಿಕಲರ ಶೇ 5ರಷ್ಟು ಅನುದಾನದಲ್ಲಿ ಅಂಗವಿಕಲರಿಗೆ ನಾಲ್ಕು ಚಕ್ರದ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರಸ್ತುತ ವಿಧಾನಸಭಾ ಕ್ಷೇತ್ರದಲ್ಲಿ 13 ಅರ್ಹ ಅಂಗವಿಕಲರಿಗೆ ವಿತರಿಸಲಾಗುತ್ತಿದ್ದು ಶೇ 75ರಷ್ಟು ವಿಕಲತೆಯ ವೈದ್ಯಕೀಯ ದೃಢೀಕೃತ ಪ್ರಮಾಣಪತ್ರ ಪಡೆದುಕೊಂಡು ಅರ್ಜಿ ಸಲ್ಲಿಸುವವರೆಲ್ಲರೂ ಫಲಾನುಭವಿಗಳಗುತ್ತಾರೆ. ಅಂಗವಿಕಲರು ಸ್ವಾಭಿಮಾನಿಯಾಗಿ ಸ್ವಾವಲಂಬನೆ ಜೀವನ ನಡೆಸಲು ಪ್ರೊತ್ಸಾಹ ನೀಡಬೇಕೇ ಹೊರತು ಅನುಕಂಪವನ್ನು ತೋರಿಸುವುದಲ್ಲ’ ಎಂದರು.

ದೇವನಹಳ್ಳಿ ತಾಲ್ಲೂಕು ಆಡಳಿತ ಕಚೇರಿ ಮೊದಲ ಅಂತಸ್ತಿನಲ್ಲಿರುವ ಉಪನೋಂದಣಿ ಕಚೇರಿಯನ್ನು ನೆಲ ಅಂತಸ್ತಿಗೆ ಸ್ಥಳಾಂತರ ಮಾಡುವಂತೆ ತಹಶೀಲ್ದಾರ್‌ಗೆ ಸೂಚಿಸಿದ್ದೇನೆ. ಈಗಿರುವ ಕಚೇರಿಯಿಂದ ಅಂಗವಿಕಲರಿಗೆ ಮತ್ತು ವಯೋವೃದ್ಧರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.

ಅಂಗವಿಕಲರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಸುರೇಶ್ ಅಯ್ಯರ್ ಮಾತನಾಡಿ, ‘ಶಾಸಕರ ಅನುದಾನದಿಂದ ಕಳೆದ ಎರಡು ವರ್ಷಗಳಿಂದ ಅನೇಕ ಅಂಗವಿಕಲರಿಗೆ ಹಲವಾರು ಸೌಲಭ್ಯ ಒದಗಿಸಿಕೊಟ್ಟಿದ್ದಾರೆ’ ಎಂದು ಹೇಳಿದರು .
ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಎ.ಪಿ.ಎಂ.ಸಿ.ಎಸ್ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರವೀಂದ್ರ, ಜೆಡಿಎಸ್ ಪ್ರಚಾರ ಸಮಿತಿ ತಾಲ್ಲೂಕು ಘಟಕ ಅಧ್ಯಕ್ಷ ನರಗನಹಳ್ಳಿ ಶ್ರೀನಿವಾಸ್, ಪುರಸಭೆ ಸದಸ್ಯ ಎಸ್.ನಾಗೇಶ್, ಮುಖಂಡ ಎಸ್.ಎಲ್.ಎನ್ ಮುನಿರಾಜು, ಎಂ.ಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು