ಸೋಮವಾರ, ಜೂಲೈ 13, 2020
28 °C

ಚಾಲಕನ ಮೇಲೆ ಟೋಲ್‌ ಸಿಬ್ಬಂದಿ ಹಲ್ಲೆ ಆರೋಪ: 9 ಮಂದಿ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಇಲ್ಲಿನ ಅತ್ತಿಬೆಲೆ ಫಾಸ್ಟ್‌ಟ್ಯಾಗ್‌ ಸ್ಕ್ಯಾನ್‌ ಆಗದ ಕಾರಣ ಹಣ ನೀಡುವಂತೆ ಒತ್ತಾಯಿಸಿದ ಟೋಲ್‌ ಸಿಬ್ಬಂದಿ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ 9 ಮಂದಿಯನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ. 

ಹಲ್ಲೆಗೊಳಗಾದ ಚಾಲಕನನ್ನು ಆನೇಕಲ್‌ನ ಜಗದೀಶ್‌ (30) ಎಂದು ಗುರುತಿಸಲಾಗಿದೆ.

ಮಂಗಳವಾರ ಆನೇಕಲ್‌ನಿಂದ ಕೃಷ್ಣಗಿರಿಗೆ ಸರಕು ಸಾಗಾಣೆ ವಾಹನದಲ್ಲಿ ‌ತೆರಳುತ್ತಿದ್ದಾಗ ಅತ್ತಿಬೆಲೆ ಟೋಲ್‌ನಲ್ಲಿ ಫಾಸ್ಟ್‌ಟ್ಯಾಗ್‌ ಸ್ಕ್ಯಾನ್‌ ಆಗಲಿಲ್ಲ. ಈ ಸಂದರ್ಭದಲ್ಲಿ ಹಣವಿದೆ. ಆದರೆ, ಸ್ಕ್ಯಾನ್‌ ಆಗುತ್ತಿಲ್ಲ ಎಂದು ಹೇಳಿದೆ. ಆದರೂ, ಟೋಲ್‌ ಸಿಬ್ಬಂದಿ ಹಣ ನೀಡುವಂತೆ ಒತ್ತಾಯ ಮಾಡಿದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಹಲ್ಲೆ ನಡೆಸಿದ್ದಾರೆ ಎಂದು ಚಾಲಕ ದೂರು ನೀಡಿದ್ದಾರೆ. 

‘ಟೋಲ್‌ನ ಕಚೇರಿಗೆ ಎಳೆದುಕೊಂಡು ಹೋಗಿ ರಾಡ್‌, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಜೊತೆಗಿದ್ದ ಸ್ನೇಹಿತ ಹುಸೇನ್‌ ಮೇಲೆ ಸಹ ಹಲ್ಲೆ ನಡೆಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ಘಟನೆಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ದೂರಿನನ್ವಯ ಪೊಲೀಸರು ಟೋಲ್‌ ಸಿಬ್ಬಂದಿ ರಾಜೇಶ್‌, ನಾಗೇಶ್‌, ದೇವೇಂದ್ರ, ಮನೋಹರ್‌, ದಾಮೋಧರ್‌, ಪೂವಯ್ಯ, ವಿನೋದ್‌, ಕೇಶವ, ಮಂಜು ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು