ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಸಗೊಬ್ಬರ ಮಾರಾಟ ಮಳಿಗೆ ಆರಂಭ

Published 7 ಜುಲೈ 2024, 14:21 IST
Last Updated 7 ಜುಲೈ 2024, 14:21 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನ ಸಾತನೂರಿನಲ್ಲಿರುವ ರೈತರ ಸೇವಾ ಸಹಕಾರ ಸಂಘ ಆರಂಭಿಸಿರುವ ರಸಗೊಬ್ಬರ ಮಾರಾಟ ಮಳಿಗೆಯನ್ನು ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಡಿ.ವಿಜಯದೇವು ಭಾನುವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಹಲವು ವರ್ಷಗಳಿಂದ ಸೊಸೈಟಿಯಲ್ಲಿ ರಸಗೊಬ್ಬರ ಮಾರಾಟ ಆರಂಭಿಸಬೇಕೆಂದು ಸದಸ್ಯರು ಒತ್ತಾಯಿಸಿದ್ದರು. ಅವರ ಕೋರಿಕೆ ಮೇರೆಗೆ ಈಗ ಸೊಸೈಟಿಯಿಂದ ರಸಗೊಬ್ಬರ ಮಾರಾಟ ಆರಂಭಿಸಲಾಗಿದೆ. ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಹೇಳಿದರು.

ಸಹಕಾರ ಇಲಾಖೆಯ ಅಧಿಕಾರಿ ಆಶಾ, ಬಿಡಿಸಿಸಿ ಬ್ಯಾಂಕ್‌ ಮೇಲ್ವಿಚಾರಕ ಆನಂದ್‌, ಸೊಸೈಟಿ ಮುಖ್ಯ ಕಾರ್ಯ ನಿರ್ವಾಹಕ ಅಭಿಷೇಕ್‌, ಎಸ್‌.ಎಸ್‌.ಶಂಕರ್‌, ಜೆ.ರಾಮು, ಎಸ್‌.ಜೆ.ನಾಗರಾಜು, ಕಾಂತರಾಜು, ರಮೇಶ್‌, ಸೊಸೈಟಿ ಅಧ್ಯಕ್ಷ ರೇಣುಕಪ್ಪ, ಉಪಾಧ್ಯಕ್ಷೆ ಲಕ್ಷ್ಮಮ್ಮ, ನಿರ್ದೇಶಕರಾದ ಮಹದೇವಸ್ವಾಮಿ, ರಾಮಲಿಂಗೇಗೌಡ, ರವಿ, ಸುರೇಶ್‌, ಚಿಕ್ಕನಾಗಣ್ಣ, ಹೊಂಬಾಳಮ್ಮ, ಮುನಿಯಮ್ಮ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT