ಶನಿವಾರ, ಜನವರಿ 18, 2020
27 °C
‘ಹಿತ್ತಲ ಕೋಳಿ ಸಾಕಾಣಿಕೆಗೆ ನಾಟಿ ಕೋಳಿ ಮರಿಗಳ ವಿತರಣೆ’ ಕಾರ್ಯಕ್ರಮ

ಉಪಕಸುಬುಗಳಿಂದ ಆರ್ಥಿಕ ಸ್ವಾವಲಂಬನೆ ಸಾಧ್ಯ: ಲಕ್ಷ್ಮೀನಾರಾಯಣಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಭಾರತ ಕೃಷಿ ಪ್ರಧಾನ ರಾಷ್ಟ್ರ. ಈಚೆಗೆ ಈ ಕ್ಷೇತ್ರ ಪ್ರಗತಿ ಸಾಧಿಸುತ್ತಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸುವ ಸಲುವಾಗಿ ಸರ್ಕಾರ ಸಣ್ಣ ಉದ್ಯಮ ಮತ್ತು ವ್ಯಾಪಾರ ವಲಯಕ್ಕೆ ಆರ್ಥಿಕ ನೆರವು ನೀಡುತ್ತಿದ್ದು ಇಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ಗಂಗವಾರ-ಚೌಡಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ದೇವನಹಳ್ಳಿ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ಬೆಂಗಳೂರು ಇವರ ಸಹಯೋಗದಲ್ಲಿ ಬಡಕುಟುಂಬಗಳ ಆರ್ಥಿಕ ಸಬಲೀಕರಣ ಮತ್ತು ಸಾರ್ವಜನಿಕರಿಗೆ ಪೌಷ್ಟಿಕ ಆಹಾರ ಪೂರೈಕೆ ಯೋಜನೆಯಡಿ ‘ಹಿತ್ತಲ ಕೋಳಿ ಸಾಕಾಣಿಕೆಗೆ ನಾಟಿ ಕೋಳಿ ಮರಿಗಳ ವಿತರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶದಲ್ಲಿ ರೈತರು ಕಸುಬಿನ ಜೊತೆಗೆ ಉಪಕಸುಬಾಗಿ ಕುರಿ, ಮೇಕೆ, ಕೋಳಿ ಸಾಕಾಣಿಕೆ ಅಳವಡಿಸಿಕೊಳ್ಳಬೇಕು. ಈಚೆಗೆ ಆಧುನಿಕತೆ ಕಡೆಗೆ ಹೊರಳುತ್ತಿದ್ದಂತೆ ರೈತರ ಮನೆಗಳಲ್ಲೆ ಇಂತಹ ಉಪಕಸುಬು ಕಡಿಮೆಯಾಗುತ್ತಿವೆ. ಕುರಿ, ಮೇಕೆ, ಕೋಳಿ ರೈತರ ಪಾಲಿಗೆ ಖಜಾನೆಯಾಗಿದ್ದವು. ಕಷ್ಟ ಬಂದಾಗ ಅವುಗಳನ್ನು ಮಾರಾಟ ಮಾಡಿ ಪಾರಾಗುತ್ತಿದ್ದರು. ಕಾಂಕ್ರೀಟ್ ಮನೆಗಳಲ್ಲಿ ಕೋಳಿ ಸಾಕಾಣಿಕೆ ಮಾಡುವುದರಿಂದ ಮನೆಯ ಆವರಣ ಸ್ವಚ್ಛವಾಗಿರುವುದಿಲ್ಲ ಎಂದು ಸಾಕಾಣಿಕೆಯನ್ನೆ ಕೈ ಬಿಟ್ಟಿದ್ದಾರೆ’ ಎಂದರು.

‘ಕೋಳಿ ಸಾಕಾಣಿಕೆಗೆ ಹೆಚ್ಚಿನ ಬಂಡವಾಳ ಹೂಡುವ ಅಗತ್ಯವಿಲ್ಲ. ಪ್ರತ್ಯೇಕ ಆಹಾರವನ್ನೂ ನೀಡಬೇಕಿಲ್ಲ. ಹಿತ್ತಲಿನಲ್ಲಿ ಬಿಟ್ಟರೂ ಬೆಳೆಯುತ್ತವೆ. ರೈತರು ಇದರತ್ತ ಗಮನ ಹರಿಸಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಭಾರತಿ ಲಕ್ಷ್ಮಣಗೌಡ ಮಾತನಾಡಿ, ‘ನಾಟಿ ಕೋಳಿಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ಮಾರಾಟದ ಜೊತೆಗೆ ಕುಟುಂಬದ ಸದಸ್ಯರಿಗೆ ಪೌಷ್ಟಿಕ ಆಹಾರವನ್ನಾಗಿಯೂ ಉಪಯೋಗ ಮಾಡಿ, ಆರೋಗ್ಯ ಸುಧಾರಣೆ ಮಾಡಿಕೊಳ್ಳಬಹುದು. ಸರ್ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದರು. ‌

ಮುಖಂಡರಾದ ಜಯರಾಮೇಗೌಡ, ಶಂಕರಪ್ಪ, ರಾಜಣ್ಣ, ಶಂಕರ್, ಲೋಕೇಶ್, ಮುನೇಗೌಡ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು