ಶ್ರೀಕಾಂತ್ ಅವರ ತೋಟಕ್ಕೆ ಭೇಟಿ ನೀಡಿರುವ ಹಾಲ್ಯಾಂಡ್ ದೇಶದ ಹೂವು ಬೆಳೆಗಾರರು
ಶ್ರೀಕಾಂತ್ ಅವರಿಗೆ ಸಂದಿರುವ ಪ್ರಶಸ್ತಿಗಳು
ಶ್ರೀಕಾಂತ್ ಅವರಿಗೆ ಸಂದಿರುವ ಪ್ರಶಸ್ತಿಗಳು
ಹಸಿರು ಮನೆ ತೋಟದಲ್ಲಿ ಬೆಳೆಯಲಾಗಿರುವ ವಿದೇಶಿ ತಳಿಯ ಹೂವುಗಳೊಂದಿಗೆ ಬಿ.ಶ್ರೀಕಾಂತ್
ಶ್ರೀಕಾಂತ್ ಅವರ ತೋಟಕ್ಕೆ ಭೇಟಿ ನೀಡಿರುವ ಭಾರತದ ವಿವಿಧ ರಾಜ್ಯಗಳ ಹೂವು ಬೆಳೆಗಾರ ರೈತರು
ಹಸಿರು ಮನೆ ತೋಟದಲ್ಲಿ ಬೆಳೆಯಲಾಗಿರುವ ವಿದೇಶಿ ತಳಿಯ ಹೂವುಗಳೊಂದಿಗೆ ಬಿ.ಶ್ರೀಕಾಂತ್

ನಮ್ಮ ದೇಶದ ಅದ್ಭುತ ಹವಾಮಾನದಲ್ಲಿ ಯೂರೋಪ್ ದೇಶಗಳನ್ನು ಮೀರಿಸುವಂತಹ ವಿದೇಶಿ ತಳಿಯ ಹೂವುಗಳನ್ನು ಬೆಳೆಯಬಹುದು. ಭಾರತದ ರೈತರು ಹೂವು ಬೆಳೆಯಲ್ಲಿ ಸ್ವಾವಲಂಬಿಯಾಗಬೇಕು ಹಾಗೂ ರಫ್ತು ಮಾಡುವ ಹಂತಕ್ಕೆ ಬೆಳೆಯಬೇಕು ಎನ್ನುವುದೇ ನನ್ನ ಕನಸು. ಇದಕ್ಕಾಗಿ ನಮ್ಮ ತೋಟಕ್ಕೆ ಯಾವುದೇ ಸಂದರ್ಭದಲ್ಲಿ ರೈತರು, ಕೃಷಿ ವಿದ್ಯಾರ್ಥಿಗಳು ಬಂದರೆ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತೇನೆ.
ಬಿ.ಶ್ರೀಕಾಂತ್, ಹೂವು ಬೆಳೆಗಾರ
ನಮ್ಮೂರಿನ ಸಮೀಪ 2010ರಲ್ಲಿ ಶ್ರೀಕಾಂತ್ ಹೂವು ಬೆಳೆಯಲು ಪ್ರಾರಂಭಿಸಿದರು. ಇಂದು ದೇಶ, ವಿದೇಶದ ನೂರಾರು ಜನ ಬಂದು ನೋಡಿ ಅಚ್ಚರಿ ಪಡುವಂತಹ ಹೂವುಗಳು ಇಲ್ಲಿ ಬೆಳೆದಿದ್ದಾರೆ. ಈ ಹೂವಿನ ತೋಟಕ್ಕೆ ಹೋಗಿ ನೋಡಲು ಯಾವುದೇ ಅನುಮತಿ ಬೇಕಿಲ್ಲ. ಇವರ ತೋಟಕ್ಕೆ ಗೇಟ್ ಇಲ್ಲ
ಓಂ ಪ್ರಕಾಶ್,ಸ್ಥಳೀಯ ರೈತ, ಕಾರನಾಳಹೂವಿನ ತಳಿಗೆ ಮಗಳ ಹೆಸರು
ಹಾಲೆಂಡ್‌ನಲ್ಲಿ ಬೆಳೆಯಲಾಗದ ಹೂವನ್ನು ನಾರಸಿಂಹನಹಳ್ಳಿ ಜಮೀನಿನಲ್ಲಿ ಬೆಳೆದ ಶ್ರೀಕಾಂತ್ ಅವರ ಪ್ರಯತ್ನ ಮೆಚ್ಚಿಕೊಂಡ ಹಾಲೆಂಡ್ ಹೂ ತಳಿ ಸಂಧೋಕರು ನಾಲ್ಕು ವರ್ಷಗಳ ಹಿಂದೆ ಹೂವಿನ ತಳಿಯೊಂದಕ್ಕೆ ಶ್ರೀಕಾಂತ್ ಮಗಳು ಮೋಕ್ಷಶ್ರೀ ಹೆಸರು ಇಟ್ಟಿದ್ದಾರೆ.
ಹಾಲೆಂಡ್ ತಳಿ ಸಂಧೋಕರು ಅಭಿವೃದ್ಧಿಪಡಿಸಿರುವ ಹೊಸ ಹೂವಿನ ತಳಿಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಹೂವನ್ನು ಭಾರತ ಸೇರಿದಂತೆ ಪ್ರಪಂಚದ ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತಿದೆ.
ಬೆಂಗಳೂರು ಗಾಂಧಿ ಕೃಷಿ ವಿಶ್ವವಿದ್ಯಾಲಯದಲ್ಲಿ ಆರಂಭವಾಗಿರುವ ಕೃಷಿ ಮೇಳದಲ್ಲಿ ಜಿಲ್ಲಾ ಮಟ್ಟದ ಪ್ರಗತಿಪರ ಕೃಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವ ಶ್ರೀಕಾಂತ್, ಬೆಂಗಳೂರಿನ ಹೆಬ್ಬಾಳದಲ್ಲಿನ ಅಂತರರಾಷ್ಟ್ರೀಯ ಹೂವು ಹರಾಜು ಮಾರುಕಟ್ಟೆ ಸಮಿತಿಯ ನಿರ್ದೇಶಕರೂ ಆಗಿದ್ದಾರೆ.