ಹೆಚ್ಚಿನ ಕಪ್ಪೆ ಪ್ರಭೇದಗಳು ನೀರಲ್ಲಿ ಮೊಟ್ಟೆ ಇಟ್ಟರೆ, ಕೆಲವು ನೀರಿಗೆ ಹೊಂದಿಕೊಂಡಿರುವ ಮರದ ಎಲೆ ಅಥವಾ ಕಲ್ಲಿನ ಮೇಲೆ ಮೊಟ್ಟೆ ಇಡುತ್ತವೆ. ಕುಂಬಾರ ಕಪ್ಪೆ ಎಂಬ ಪ್ರಭೇದದಲ್ಲಿ ಹೆಣ್ಣು ಕಪ್ಪೆ ನೀರು ಇರುವ ಕಲ್ಲಿನ ಮೇಲೆ ಮೊಟ್ಟೆ ಇಟ್ಟು ಹೋದ ನಂತರ ಗಂಡು ಕಪ್ಪೆ ಮೊಟ್ಟೆಗಳಿಗೆ ಮಣ್ಣಿನ ಲೇಪನ ಬಳಿದು ಇತರೆ ಭಕ್ಷಕ ಜೇವಿಗಳಿಂದ ರಕ್ಷಿಸುತ್ತದೆ.