ಮಂಗಳವಾರ, ಜುಲೈ 5, 2022
27 °C

ಆನೇಕಲ್: ಗಡಿನಾಡು ರಂಗೋತ್ಸವ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್: ತಾಲ್ಲೂಕಿನ ಮೆಣಸಿಗನಹಳ್ಳಿ ಬಸವೇಶ್ವರ ಕಲಾ ಮಂಡಳಿಯಿಂದ ಸಂಗೀತ ವಿದ್ವಾನ್‌ ಮಲ್ಲೇಶಾರಾಧ್ಯರ ಸ್ಮರಣಾರ್ಥ ಮಾರ್ಚ್‌ 10ರಂದು ಗಡಿನಾಡು ರಂಗೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ಆನೇಕಲ್‌ ಸಮೀಪದ ಬಿಳಿನೀರ ಕುಂಟೆ ಬಳಿಯ ಸಾಯಿರುಕ್ಮಿಣಿ ಕಲ್ಯಾಣ ಮಹಲ್‌ ಆವರಣದಲ್ಲಿ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿಯ ಎಂ. ಚಂದ್ರಪ್ಪ ತಿಳಿಸಿದ್ದಾರೆ.

ಎಂ.ಸಿ. ಯೋಗಾನಂದೀಶಾರಾಧ್ಯ ಅವರ ನಿರ್ದೇಶನದಲ್ಲಿ ನಾಟಕ ನಡೆಯುತ್ತಿದ್ದು ರಾಜಾಪುರ ಸ್ವಾಮೀಜಿ, ಗುಮ್ಮಳಾಪುರ ಶ್ರೀ, ಬೆಳ್ಳಾವಿ ಶ್ರೀ, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಶಾಸಕರಾದ ಬಿ. ಶಿವಣ್ಣ, ವೈ. ಪ್ರಕಾಶ್‌, ಪುರಸಭಾ ಅಧ್ಯಕ್ಷ ಎನ್‌.ಎಸ್. ಪದ್ಮನಾಭ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು