ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

ಹೊಸಕೋಟೆ | ಪಾತಾಳಕ್ಕೆ ಕುಸಿದ ಶುಂಠಿ: ರೈತ ಕಂಗಾಲು

ಡಿ.ಎನ್.ವೆಂಕಟೇಶ್
Published : 28 ಏಪ್ರಿಲ್ 2025, 4:24 IST
Last Updated : 28 ಏಪ್ರಿಲ್ 2025, 4:24 IST
ಫಾಲೋ ಮಾಡಿ
Comments
ತಾಲ್ಲೂಕಿನಲ್ಲಿ ಶುಂಠಿ ಕೊಯ್ಲು ಮುಕ್ತಾಯವಾಗಿದೆ. ಈಗ ಮುಂದಿನ ಕೊಯ್ಲಿಗೆ ಹೊಸದಾಗಿ ಬೆಳೆ ನಾಟಿ ಮಾಡುತ್ತಿದ್ದಾರೆ. ಪ್ರಸ್ತುತ ಶುಂಠಿ ಕ್ವಿಂಟಾಲ್‌ಗೆ ₹1000 ದಿಂದ ₹1200 ಇದ್ದು. ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಇದು 8 ರಿಂದ 10 ತಿಂಗಳ ಬೆಳೆಯಾಗಿರುವುದರಿಂದ ಜನವರಿಯಿಂದ ಮಾರ್ಚ್‌ವರೆಗೆ ನಾಟಿ ಮಾಡಿ ನವೆಂಬರ್ ನಂತರದಲ್ಲಿ ಕೊಯ್ಲು ಮಾಡಲಾಗುತ್ತದೆ.
ಸೋಮಶೇಖರಗೌಡ ಸಹಾಯಕ ನಿರ್ದೇಶಕ ತೋಟಗಾರಿಕಾ ಇಲಾಖೆ ಹೊಸಕೋಟೆ.  
ಹೊಸಕೋಟೆ ತಾಲ್ಲೂಕಿನಲ್ಲಿ ಶುಂಠಿ ಘಮ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಈಚೆಗೆ ಹೆಚ್ಚಿಗೆ ಶುಂಠಿ ಬೆಳೆಯುತ್ತಿದ್ದಾರೆ. ಅದರಲ್ಲಿ ಹೊಸಕೋಟೆಯೇ ಅತಿ ಹೆಚ್ಚು ಶುಂಠಿ ಉತ್ಪಾದಿಸುವ ತಾಲ್ಲೂಕು. ಹೊಸಕೋಟೆ ತಾಲ್ಲೂಕಿನಲ್ಲಿ 217.76 ಹೆಕ್ಟೇರಿನಲ್ಲಿ ಶುಂಠಿ ಬೆಳೆಯಲಾಗುತ್ತಿದೆ.  ನೆಲಮಂಗಲ ತಾಲ್ಲೂಕಿನಲ್ಲಿ 7.06 ಹೆಕ್ಟೇರ್‌ ದೊಡ್ಡಬಳ್ಳಾಪುರ 54.98 ಹೆಕ್ಟೇರ್‌ ದೇವನಹಳ್ಳಿ 118.83 ಹೆಕ್ಟೇರ್ ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 217 ಹೆಕ್ಟೇರಿನಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ತಾಲ್ಲೂಕಿನ ಒಟ್ಟು ಐದು ಹೋಬಳಿ ಕೇಂದ್ರಗಳಲ್ಲಿ ಹೆಚ್ಚಾಗಿ ಸೂಲಿಬೆಲೆ ಹೋಬಳಿಯಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಕಸಬಾ 14.18 ಹೆಕ್ಟೇರ್ ಅನುಗೊಂಡನಹಳ್ಳಿ ಹೋಬಳಿಯಲ್ಲಿ 5.39 ಹೆಕ್ಟೇರ್ ಜಡಿಗೇನಹಳ್ಳಿ ಹೋಬಳಿಯಲ್ಲಿ 28.13 ಹೆಕ್ಟೇರ್ ಸೂಲಿಬೆಲೆ ಹೋಬಳಿಯಲ್ಲಿ 143.57 ಹೆಕ್ಟೇರ್ ಮತ್ತು ನಂದಗುಡಿ ಹೋಬಳಿಯಲ್ಲಿ 26.50 ಹೆಕ್ಟೇರ್‌ ಶುಂಠಿ ಬೆಳೆಯಾಗುತ್ತಿದೆ.
ಶುಂಠಿ ಖರೀದಿ ಕೇಂದ್ರ
ಹೊಸಕೋಟೆ ಮತ್ತು ದೇವನಹಳ್ಳಿ ಶುಂಠಿ ಬೆಳೆಗಾರರ ಅನುಕೂಲಕ್ಕಾಗಿ ಹೊಸಕೋಟೆಯಲ್ಲಿ ಶುಂಠಿ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಹೊಸಕೋಟೆ ತಾಲ್ಲೂಕು ಅತಿ ಹೆಚ್ಚು ಶುಂಠಿ ಉತ್ಪಾದಿಸುವ ತಾಲ್ಲೂಕಾಗಿದ್ದು ನಂತರದ ಸ್ಥಾನ ದೇವನಹಳ್ಳಿಗೆ ಇದೆ. ಆದ್ದರಿಂದ ಈ ಎರಡೂ ತಾಲ್ಲೂಕುಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೊಸಕೋಟೆಯಲ್ಲಿ ಖರೀದಿ ಕೇಂದ್ರ ಸ್ಥಾಪನೆ ಮಾಡುವಂತೆ ಶಾಸಕ ಶರತ್ ಬಚ್ಚೇಗೌಡ ಇತ್ತೀಚೆಗೆ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT