ಎಫ್‌ಎಕ್ಯೂ ಗುಣಮಟ್ಟದ ಹಸಿ ಶುಂಠಿಯನ್ನು ಖರೀದಿಸಲು ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ ₹2445 ದರ ನಿಗದಪಡಿಸಿದೆ. ಬೆಳೆ ಸಮೀಕ್ಷೆಯಲ್ಲಿ ಆರ್‌ಟಿಸಿಯಲ್ಲಿ ಹಸಿ ಶುಂಠಿ ಬೆಳೆ ನಮೂದಿಸಿರುವ ಬೆಳೆಗಾರರು ಶುಂಠಿ ಮಾರಾಟ ಮಾಡಬಹುದು. ಈ ಯೋಜನೆ ಅಡಿ ಎಕರೆಗೆ 30 ಕ್ವಿಂಟಲ್ ಹಾಗೂ ಪ್ರತಿ ರೈತರಿಂದ 60 ಕ್ವಿಂಟಲ್ ಎಫ್‌ಎಕ್ಯೂ ಗುಣಮಟ್ಟದ ಹಸಿ ಶುಂಠಿ ಖರೀದಿಸಲಾಗುತ್ತದೆ. ಆಧಾರ್ ಸಂಖ್ಯೆಗೆ ಜೋಡಣೆಯಾದ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆಯಾಗಲಿದೆ. ನೋಂದಣಿ ಪ್ರಕ್ರಿಯೆ ಹೇಗೆ? ಫ್ರುಟ್ ತಂತ್ರಾಂಶದ ಮೂಲಕ ಬೆಳೆಗಾರರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿ ಪ್ರಕ್ರಿಯೆಗೆ ರೈತರು ಪಹಣಿ ಆಧಾರ್ ಮತ್ತು ಬ್ಯಾಂಕ್ ಖಾತೆ ನಕಲು ಪ್ರತಿ (ಆಧಾರ್ ಜೋಡಣೆಯಾಗಿರಬೇಕು) ಭಾವಚಿತ್ರ ಹಾಗೂ ಫ್ರುಟ್ ತಂತ್ರಾಂಶದ ರೈತ ನೋಂದಣಿ ಸಂಖ್ಯೆ(ಎಫ್‌ಐಡಿ)ಯನ್ನು ಕಡ್ಡಾಯವಾಗಿ ಹೊಂದಿರಬೇಕು. ಫ್ರುಟ್ ತಂತ್ರಾಶದ ರೈತ ನೋಂದಣಿ ಸಂಖ್ಯೆ(ಎಫ್‌ಐಡಿ)ಯನ್ನು ಆಯಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕಿನ ಕೃಷಿ ಇಲಾಖೆಯಿಂದ ಪಡೆಯಬಹುದು. ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 082 26223358 ಸಂಪರ್ಕಿಸಬಹುದು.