ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲುಷಿತ ನೀರು: 18 ಮೇಕೆಗಳು ಸಾವು

6 ಮೇಕೆಗಳಿಗೆ ಚಿಕಿತ್ಸೆ * ಸೂಕ್ತ ಪರಿಹಾರಕ್ಕಾಗಿ ಆಗ್ರಹ
Published 14 ಜೂನ್ 2023, 16:43 IST
Last Updated 14 ಜೂನ್ 2023, 16:43 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಯಲಿಯೂರು ಗ್ರಾಮದ ಹೊರವಲಯದಲ್ಲಿ ಕಲುಷಿತ ನೀರು ಕುಡಿದು ಮೇಕೆಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಕ್ಕಳಂತೆ ಮೇಕೆಗಳನ್ನು ಪೋಷಿಸಿದ್ದ ದೊಡ್ಡತತ್ತಮಂಗಲ ಗ್ರಾಮದ ರೈತ ಮುನಿಶಾಮಪ್ಪ ಅವರ ಮುಂದೆಯೇ ಮೇಕೆಗಳು ಅಸ್ವಸ್ಥಗೊಂಡು, ಸಾವನ್ನಪ್ಪಿದ್ದನ್ನು ಕಂಡು ಬಾವುಕರಾದರು.

ಮುನಿಶಾಮಪ್ಪ ಅವರು ಅಂಗವಿಕಲನಾದರೂ ಯಾರ ಬಳಿಯೂ ಅಂಗಲಾಚದೆ 30 ವರ್ಷಗಳಿಂದ ಮೇಕೆ ಸಾಕಾಣಿಕೆ ಮೂಲಕ ಸ್ವಾಭಿಮಾನಿ ಜೀವನ ಕಟ್ಟಿಕೊಂಡಿದ್ದರು. ಅದರಲ್ಲಿ ಬಂದ ಹಣದಲ್ಲಿಯೇ ತಮ್ಮ 5 ಜನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಬದುಕು ರೂಪಿಸಿಕೊಟ್ಟಿದ್ದರು. ಇಂತಹ ಬುಧವಾರ ನಡೆದ ಘಟನೆ ಆಘಾತಕಾರಿಯಾಗಿದೆ.

ಎಂದಿನಂತೆ ಮೇಕೆಗಳನ್ನು ಅರಣ್ಯ ಪ್ರದೇಶಕ್ಕೆ ಮೇಯಿಸಲು ಹೊಡೆದುಕೊಂಡು ಹೋಗಿ ಬರುವಾಗ, ಅಲ್ಲೆ ಇದ್ದ ತೊಟ್ಟಿಯಲ್ಲಿ ಮೇಕೆಗಳು ನೀರು ಕುಡಿದಿವೆ. ನೀರು ಕುಡಿದು ಸ್ವಲ್ಪ ಹೊತ್ತಲ್ಲೇ ಮೇಕೆಗಳು ಅಸ್ವಸ್ಥಗೊಂಡು ಕುಡಿದು ಬಿದ್ದಿವೆ.

ಇದ್ದಕ್ಕಿದ್ದಂತೆ ಮೇಕೆಗಳು ಕುಸಿದು ಬೀಳುತ್ತಿದ್ದಂತೆ, ಅಕ್ಕಪಕ್ಕದವರು ಬಂದು ಮೇಕೆಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲಿ ₹4 ಲಕ್ಷ ಬೆಲೆ ಬಾಳುವ 18 ಮೇಕೆಗಳು ಸಾವನ್ನಪ್ಪಿವೆ. ಮೇಕೆಗಳು ಕುಡಿದ ನೀರಿನ ತೊಟ್ಟಿಯನ್ನು ಆಸೀಡ್‌ನಿಂದ ತೊಳೆದಿದ್ದು, ಹೊಸ ನೀರು ಬಿಟ್ಟಾಗ ಕೆಮಿಕಲ್ ಮಿಶ್ರಣದ ನೀರಿನಿಂದ ಸಂಭವಿಸರಬಹುದು ಎಂದು ಶ‌ಂಕಿಸಲಾಗಿದೆ.

ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ದೇವನಹಳ್ಳಿ ತಹಶೀಲ್ದಾರ್ ಶಿವರಾಜ್ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರೀಕ್ಷೆಗಾಗಿ ಒಂದು ಸಾವನ್ನಪ್ಪಿರುವ ಮೇಕೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ರೈತನಿಗೆ ಸೂಕ್ತ ಪರಿಹಾರ ಒದಗಿಸಿಕೊಡುವ ಭರವಸೆಯನ್ನು ತಹಶೀಲ್ದಾರ್ ನೀಡಿದ್ದಾರೆ.

ಮೇಕೆಗಳು ಸಾವನ್ನಪ್ಪಿರುವ ಸ್ಥಳಕ್ಕೆ ಪೊಲೀಸ್‌ ಇಲಾಖೆ ಪಶು ವೈದ್ಯಕೀಯ ಹಾಗೂ ತಹಶೀಲ್ದಾರ್‌ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು
ಮೇಕೆಗಳು ಸಾವನ್ನಪ್ಪಿರುವ ಸ್ಥಳಕ್ಕೆ ಪೊಲೀಸ್‌ ಇಲಾಖೆ ಪಶು ವೈದ್ಯಕೀಯ ಹಾಗೂ ತಹಶೀಲ್ದಾರ್‌ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು

Quote - ನಿತ್ಯ ಮೇಕೆಗಳನ್ನು ಮೇಯಿಸಿಕೊಂಡು ಬಂದು ತೊಟ್ಟಿಯಲ್ಲಿ ನೀರು ಕುಡಿಸುತ್ತಿದ್ದೆ ಅದೇ ರೀತಿ ಇಂದು ಸಹ ಮೇಕೆಗಳು ನೀರು ಕುಡಿದು ಸ್ವಲ್ಪ ದೂರ ಸಾಗಿದ ನಂತರ ಕಣ್ಣ ಮುಂದೆಯೇ ಅಸ್ವಸ್ಥಗೊಂಡು ಸಾವನ್ನಪ್ಪಿವೆ ಮುನಿಶಾಮಪ್ಪ ರೈತ

Cut-off box - ಪರಿಹಾರದ ಬಗ್ಗೆ ಪರಿಶೀಲನೆ 18 ಮೇಕೆಗಳು ಸಾವನ್ನಪ್ಪಿದ್ದು 6 ಮೇಕೆಗಳಿಗೆ ಹೆಚ್ಚುವರಿ ಚಿಕಿತ್ಸೆ ನೀಡಲಾಗುತ್ತಿದೆ. ನಿತ್ಯ ನೀರು ಕುಡಿಯುವ ತೊಟ್ಟಿಯಲ್ಲಿಯೇ ನೀರು ಕುಡಿದು ಸ್ವಲ್ಪ ದೂರು ಸಾಗುವುದರಲ್ಲಿಯೇ ಮೇಕೆಗಳು ಅಸ್ವಸ್ತಗೊಂಡು ಸಾವನ್ನಪ್ಪಿದೆ. ಯಾವ ಕಾರಣಕ್ಕೆ ಮೇಕೆಗಳು ಮರಣ ಹೊಂದಿದೆ ಎಂಬುದರ ಕುರಿತು ಪ್ರಯೋಗಾಲಯದ ವರದಿ ನಂತರ ತಿಳಿಯಲಿದೆ. ಇಂತಹ ಘಟನೆಗಳಿಂದಾಗಿ ಪರಿಹಾರ ನೀಡಲು ಅವಕಾಶವಿರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ವಿಚಾರಣೆ ನಂತರ ಪೊಲೀಸರು ಪಶು ವೈದ್ಯಕೀಯ ಇಲಾಖೆಯೂ ವರದಿ ಸಲ್ಲಿಸಿದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಶೀಲ್ದಾರ್‌ ಶಿವರಾಜ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT