ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಸ್ಕೆಟ್‌ಬಾಲ್‌: ಕರ್ನಾಟಕದ ಬಾಲಕಿಯರಿಗೆ ಪ್ರಶಸ್ತಿ

ಜೂನಿಯರ್‌ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌
Published 14 ಮೇ 2024, 16:12 IST
Last Updated 14 ಮೇ 2024, 16:12 IST
ಅಕ್ಷರ ಗಾತ್ರ

ಬೆಂಗಳೂರು: ಆದ್ಯಾ ನಾಗಲಿಂಗ ಮತ್ತು ಆದ್ಯಾ ಗೌಡ ಅವರ ಆಟದ ಬಲದಿಂದ ಕರ್ನಾಟಕದ ಬಾಲಕಿಯರ ತಂಡವು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ 74ನೇ ಜೂನಿಯರ್‌ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಮಂಗಳವಾರ ನಡೆದ ಬಾಲಕಿಯರ ಫೈನಲ್‌ ಹಣಾಹಣಿಯಲ್ಲಿ ಕರ್ನಾಟಕ ತಂಡವು 71–51 ಅಂತರದಿಂದ ಪಂಜಾಬ್‌ ತಂಡವನ್ನು ಮಣಿಸಿತು. ಮೊದಲಾರ್ಧದಲ್ಲಿ 33–23 ರಿಂದ ಮುನ್ನಡೆ ಪಡೆದಿದ್ದ ಕರ್ನಾಟಕದ ಬಾಲಕಿಯರು, ಉತ್ತರಾರ್ಧದಲ್ಲೂ ಪಾರಮ್ಯ ಮೆರೆದರು.

ಕರ್ನಾಟಕದ ಪರ ಆದ್ಯಾ ನಾಗಲಿಂಗ ಮತ್ತು ಆದ್ಯಾ ಗೌಡ ತಲಾ 16 ಮತ್ತು ಅದಿತಿ ಸುಬ್ರಹ್ಮಣ್ಯನ್‌ 12 ಪಾಯಿಂಟ್ಸ್‌ ಗಳಿಸಿದರು. ಚಂದಾ ಗೌತಮ್ 20 ಮತ್ತು ನಾದರ್ ಧಿಲ್ಲೋನ್ 15 ಅಂಕಗಳನ್ನು ಪಂಜಾನ್‌ ತಂಡಕ್ಕೆ ತಂದುಕೊಟ್ಟರು.

ಚಾಂಪಿಯನ್‌ ಮತ್ತು ರನ್ನರ್ಸ್‌ ಅಪ್‌ ತಂಡಗಳು ಕ್ರಮವಾಗಿ ₹ 4 ಲಕ್ಷ ಮತ್ತು ₹3 ಲಕ್ಷ ಬಹುಮಾನ ಪಡೆದವು. ಮಹಾರಾಷ್ಟ್ರ ತಂಡವು 69–66ರಿಂದ ಮಧ್ಯಪ್ರದೇಶ ತಂಡವನ್ನು ಸೋಲಿಸಿ ತೃತೀಯ ಸ್ಥಾನ ಗಳಿಸಿತು.

ಬಾಲಕರ ವಿಭಾಗದ ಪ್ರಶಸ್ತಿಯನ್ನು ರಾಜಸ್ಥಾನ ತಂಡವನ್ನು ಗೆದ್ದುಕೊಂಡಿತು. ಫೈನಲ್‌ನಲ್ಲಿ ರಾಜಸ್ಥಾನ ತಂಡವು 85–77ರಿಂದ ಪಂಜಾಬ್‌ ತಂಡವನ್ನು ಮಣಿಸಿತು. ಆತಿಥೇಯ ಮಧ್ಯಪ್ರದೇಶ ತಂಡವು 71–49ರಿಂದ ಉತ್ತರ ಪ್ರದೇಶ ತಂಡವನ್ನು ಮಣಿಸಿ ಮೂರನೇ ಸ್ಥಾನ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT