ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್: ಗಯಾನದಲ್ಲಿ ಎರಡನೇ ಸೆಮಿ

Published 14 ಮೇ 2024, 15:53 IST
Last Updated 14 ಮೇ 2024, 15:53 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ತಂಡವು ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದರೆ, ಜೂನ್ 27ರಂದು ಗಯಾನದಲ್ಲಿ ಆಡಲಿದೆ. 

‘ಭಾರತ ತಂಡವು ನಾಲ್ಕರ ಘಟ್ಟ ಪ್ರವೇಶಿಸಿದರೆ ಎರಡನೇ ಸೆಮಿಫೈನಲ್‌ನಲ್ಲಿ ಆಡಬೇಕಾಗುತ್ತದೆ. ಆ  ಪಂದ್ಯವು ಗಯಾನದಲ್ಲಿ ನಡೆಯಲಿದೆ’ ಎಂದು ಐಸಿಸಿ ಮೂಲಗಳು ಹೇಳಿವೆ. 

ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ಈ ಟೂರ್ನಿ ನಡೆಯಲಿದೆ. ಬಾರ್ಬಡೊಸ್‌ನಲ್ಲಿ  ನಡೆಯುವ ಫೈನಲ್ (ಜೂನ್ 29) ಪಂದ್ಯಕ್ಕೆ ಮಾತ್ರ ಒಂದು ಮೀಸಲು ದಿನವನ್ನು (ಜೂ 30) ಕಾಯ್ದಿರಿಸಲಾಗಿದೆ. 

ಟೂರ್ನಿಯ ಮೊದಲ ಸೆಮಿಫೈನಲ್ (ಜೂ 26) ಟ್ರಿನಿಡಾಡ್‌ನಲ್ಲಿ ನಡೆಯಲಿದೆ. ಗಯಾನದಲ್ಲಿ ನಡೆಯುವ ಸೆಮಿಫೈನಲ್‌ ಹಗಲು ಹೊತ್ತಿನ ಪಂದ್ಯವಾಗಿದೆ. ಭಾರತದಲ್ಲಿ ಟಿ.ವಿ. ನೇರಪ್ರಸಾರಗೊಳ್ಳುವ (ರಾತ್ರಿ 8.30) ಸಮಯಕ್ಕೆ ಹೊಂದಾಣಿಕೆ ಮಾಡಿ ನಿಗದಿಪಡಿಸಲಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT