ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ | ಆಡಳಿತ ಮಂಡಳಿ ಒಳಜಗಳ, ಬೀದಿಯಲ್ಲಿ ವಿದ್ಯಾರ್ಥಿಗಳು

Last Updated 3 ಜೂನ್ 2022, 4:36 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಆಡಳಿತ ಮಂಡಳಿಯಲ್ಲಿನ ಒಳ ಜಗಳದಿಂದಾಗಿ ಮಕ್ಕಳು ಬೀದಿಯಲ್ಲಿ ಕುಳಿತು ಪಾಠ ಕೇಳುವಂತಹ ಸ್ಥಿತಿ ನಗರದ ರೊಜೀಪುರದಲ್ಲಿನ ಸೇಂಟ್‌ ಮೀರಾ ಪ್ರಾಥಮಿಕ ಪಾಠ ಶಾಲಾ ವಿದ್ಯಾರ್ಥಿಗಳಿಗೆ ಬಂದಿದೆ.

1 ರಿಂದ 5ನೇ ತರಗತಿಯವರೆಗಿನ 80 ಜನ ವಿದ್ಯಾರ್ಥಿಗಳು ಇರುವ ಅನುದಾನಿತ ಸೇಂಟ್‌ ಮೀರ ಶಾಲೆ ರೊಜೀಪುರದಲ್ಲಿನ ಜಗಜ್ಯೋತಿ ಬಸವೇಶ್ವರ ಟ್ರಸ್ಟ್‌ ವತಿಯಿಂದ ನಡೆಯುತ್ತಿರುವ ಬಿಎಸ್‌ಎ ಪ್ರೌಢ ಶಾಲಾ ಕಟ್ಟಡದಲ್ಲಿಯೇ ಸುಮಾರು 15 ವರ್ಷಗಳಿಂದಲು ನಡೆಯುತ್ತಿದೆ. ಆದರೆ ಆಡಳಿತ ಮಂಡಳಿಯ ಕಾರ್ಯದರ್ಶಿ ಎಸ್‌.ದಯಾನಂದ ಹಾಗೂ ಇತರೆ ನಿರ್ದೇಶಕರು, ಅಧ್ಯಕ್ಷ ಮುನಿರಾಜು ಅವರ ನಡುವಿನ ಜಗಳದಿಂದಾಗಿ ಗುರುವಾರ ಪ್ರಾಥಮಿಕ ಶಾಲಾ ಮಕ್ಕಳು ಬೀದಿಯಲ್ಲಿ ಕುಳಿತು ಪಾಠ ಕೇಳುವಂತಾಗಿತ್ತು. ಇದಕ್ಕೆ ಪೋಷಕರು ಆಡಳಿತ ಮಂಡಳಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶುಭಮಂಗಳ ‘ಆಡಳಿತ ಮಂಡಳಿಯ ಯಾವುದೇ ರೀತಿಯ ಒಳಜಗಳ ಇದ್ದರೆ ಅದನ್ನು ನ್ಯಾಯಾಲಯದಲ್ಲಿ ಬಗಹರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕು ಮಕ್ಕಳು ಬೀದಿಯಲ್ಲಿ ಕುಳಿತು ಪಾಠ ಕೇಳುವಂತೆ ಆಗಬಾರದು. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ತರಗತಿಗಳು ನಡೆಯುವ ಕೊಠಡಿಗಳಿಗೆ ಬೀಗ ಹಾಕದಂತೆ, ಪಾಠ ನಡೆಯಲು ಅಡ್ಡಿಪಡಿಸದಂತೆ’ ಸೂಚನೆ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT