ಸಹೋದರತ್ವದ ಪ್ರತೀಕ ರಕ್ಷಾ ಬಂಧನ

7

ಸಹೋದರತ್ವದ ಪ್ರತೀಕ ರಕ್ಷಾ ಬಂಧನ

Published:
Updated:
Deccan Herald

ದೇವನಹಳ್ಳಿ: ರಕ್ಷಾ ಬಂಧನವು ಜಾತಿ, ಧರ್ಮಾತೀತವಾಗಿ ಪರಸ್ಪರ ಸಹೋದರತ್ವ ಬೆಸೆಯುವ ಸಂಭ್ರಮದ ಹಬ್ಬ ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿ ಪ್ರಾಂತೀಯ ಮಟ್ಟದ ಮಹಿಳಾ ಸಂಚಾಲಕಿ ದೀಪಾ ರಮೇಶ್‌ ತಿಳಿಸಿದರು.

ಸಮಿತಿ ವತಿಯಿಂದ ನಡೆದ ರಕ್ಷಾ ಬಂಧನ, ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮಹಿಳೆಯರಿಗೆ ಮಡಿಲು ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಣ್ಣಿರಲಿ ಗಂಡಿರಲಿ ಸಮಾಜದಿಂದ ಹೊರಬಂದು ನೋಡುವ ಭಾವನೆಗಳು ಉತ್ತಮವಾಗಿರಬೇಕು. ಮನಸ್ಸಿನಲ್ಲಿ ಅನೇಕ ಕೆಟ್ಟ ಆಲೋಚನೆಗಳು ಹದಿಹರೆಯದ ವಯಸ್ಸಿನಲ್ಲಿ ಮೂಡುವುದು ಸಹಜವಾದರೂ ಅದಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ. ಕ್ಷಣಿಕ ಭಾವನೆಯನ್ನು ಹತೋಟಿಗೆ ತರದಿದ್ದರೆ ವ್ಯಕ್ತಿತ್ವದ ಮೌಲ್ಯ ಮಣ್ಣು ಪಾಲಾಗುತ್ತದೆ ಎಂದರು.

ಜಿಲ್ಲಾ ಉತ್ತರ ವಲಯ ಸಂಚಾಲಕ ವೆಂಕಟೇಶ್‌ ಮಾತನಾಡಿ, ಪ್ರತಿಯೊಬ್ಬರೂ ಭಾವನೆಯಿಂದ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾರೆ. ಪರಸ್ಪರ ನಂಬಿಕೆ, ವಿಶ್ವಾಸ, ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ ಎಂದರು.

ಸಮಿತಿ ತಾಲ್ಲೂಕು ಘಟಕ ಅಧ್ಯಕ್ಷ ಮಂಜುನಾಥ್‌ ಪ್ರಸಾದ್‌ ಮಾತನಾಡಿ, ‘ತಾಲ್ಲೂಕು ಘಟಕ ಸಮಿತಿ ಅನೇಕ ವರ್ಷಗಳಿಂದ ಮಹಿಳೆಯರಿಗೆ ಮತ್ತು ಪುರುಷರಿಗೆ ಸಾಮೂಹಿಕ ಯೋಗ ತರಬೇತಿ ನೀಡುತ್ತಿದೆ. ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸಿ ವಿಶೇಷತೆಯ ಬಗ್ಗೆ ಮನವರಿಕೆ ಮಾಡುವುದು ಸಮಿತಿ ಉದ್ದೇಶವಾಗಿದೆ’ ಎಂದರು.

ಸಮಿತಿ ತಾಲ್ಲೂಕು ಘಟಕ ಕಾರ್ಯದರ್ಶಿ ಸತೀಶ್‌, ಖಜಾಂಚಿ ಸುರೇಶ್‌ ಇದ್ದರು. ಪ್ರಾಥಮಿಕ ಶಾಲಾ ಶಿಕ್ಷಕ ಶಿಕ್ಷಕರ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ಎಚ್‌.ಎನ್‌. ನಾಗೇಶ್, ಮುಖಂಡರಾದ ನರಗನಹಳ್ಳಿ ಶ್ರೀನಿವಾಸ್‌, ಪ್ರಕಾಶ್‌, ವಿನಯ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !