ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆನೇಕಲ್: ಉಚಿತ ಆರೋಗ್ಯ ತಪಾಸಣಾ ಶಿಬಿರ

Published 25 ಆಗಸ್ಟ್ 2024, 16:13 IST
Last Updated 25 ಆಗಸ್ಟ್ 2024, 16:13 IST
ಅಕ್ಷರ ಗಾತ್ರ

ಆನೇಕಲ್ : ‌ತಾಲ್ಲೂಕಿನ ಹೆನ್ನಾಗರ ಗ್ರಾಮದಲ್ಲಿ ಗಂಧದ ನಾಡು ಜನಪರ ವೇದಿಕೆ, ನಿಸರ್ಗ ಸೇವಾ ಸಂಸ್ಥೆ ಮತ್ತು ಹೆನ್ನಾಗರ ಗ್ರಾಮ ಪಂಚಾಯಿತಿ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಭಾನುವಾರ ಆಯೋಜಿಸಲಾಯಿತು.

ಆಕ್ಸ್‌ಫರ್ಡ್‌ ಆಸ್ಪತ್ರೆ, ಕಾವೇರಿ ಆಸ್ಪತ್ರೆ, ನಿಸರ್ಗ ದೃಷ್ಟಿಧಾಮ, ವೆಂಕಟೇಶ್ವರ ದಂತ ಮಹಾವಿದ್ಯಾಲಯ ಆಸ್ಪತ್ರೆಗಳ ವೈದ್ಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸಾಮಾನ್ಯ ತಪಾಸಣೆ, ಕಣ್ಣು, ದಂತ ಸೇರಿದಂತೆ ಇನ್ನಿತರ ಅಂಗಾಂಗಗಳ ತಪಾಸಣೆ ನಡೆಯಿತು. 

ಹೆನ್ನಾಗರ ಗ್ರಾಮ ಪಂಚಾಯಿತಿ ಸದಸ್ಯ ಎಚ್‌.ಜೆ.ಪ್ರಸನ್ನಕುಮಾರ್‌ ಮಾತನಾಡಿ, ಒತ್ತಡದ ಜೀವನದಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಉಚಿತ ಆರೋಗ್ಯ ತಪಾಸಣಾ ಶಿಬಿರ ವರದಾನವಾಗಿದೆ. ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರ ಆಯೋಜಿಸುವ ಗುರಿಯಿದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಕೇಶವರೆಡ್ಡಿ ಮಾತನಾಡಿ, ಹೆನ್ನಾಗರ ಗ್ರಾಮ ಪಂಚಾಯಿತಿಯು ಜಿಗಣಿ ಕೈಗಾರಿಕಾ ಪ್ರದೇಶದ ಸಮೀಪದಲ್ಲಿದೆ. ಈ ಭಾಗದಲ್ಲಿ ನೂರಾರು ಮಂದಿ ಕಾರ್ಮಿಕರಿದ್ದಾರೆ. ಕೆಲಸದ ನಡುವೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಆರೋಗ್ಯ ಶಿಬಿರವು ಕಾರ್ಮಿಕರಿಗೆ ಉಪಯುಕ್ತವಾಗಿದೆ ಎಂದರು.

ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ಲಕ್ಷ್ಮಿ ನಾಗೇಶ್‌, ಸದಸ್ಯರಾದ ಆರ್‌.ಕೆ.ಕೇಶವರೆಡ್ಡಿ, ರಾಮಸ್ವಾಮಿ, ಸತೀಶ್‌, ಶ್ರೀನಿವಾಸ್‌, ಅನಿತಾ, ಪುಷ್ಪ, ನಾಗರಾಜು, ಕುಮಾರ್, ಶಿವರಾಜ್‌, ಲಲಿತಾ, ನಿಸರ್ಗ ಸೇವಾ ಟ್ರಸ್ಟ್‌ನ ದೇವರಾಜ ನಾಯಕ್‌, ಗಂಧದ ನಾಡು ಜನಪರ ವೇದಿಕೆಯ ಸತೀಶ್, ಲಯನ್ಸ್‌ ಕ್ಲಬ್‌ನ ಪ್ರಭಾಕರರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT