ಸೋಮವಾರ, 19 ಜನವರಿ 2026
×
ADVERTISEMENT
ADVERTISEMENT

ಹೊಸಕೋಟೆ | ಕಾಲ ‘ಕಸ’ವಾದ ಸಮಸ್ಯೆ: ಜನರ ನೆಮ್ಮದಿಗೆ ‘ಬೆಂಕಿ’

ರವೀಶ್ ಜಿ.ಎನ್
Published : 19 ಜನವರಿ 2026, 5:14 IST
Last Updated : 19 ಜನವರಿ 2026, 5:14 IST
ಫಾಲೋ ಮಾಡಿ
Comments
ನಮ್ಮ ಅಂಗಡಿಗೆ 200 ಮೀ ದೂರದಲ್ಲಿ ರಾತ್ರಿ 3 ಗಂಟೆ ನಂತರ ಬೆಂಗಳೂರಿಂದ ಕಸ ತಂದು ಸುರಿದು ಹೋಗುತ್ತಾರೆ. ಆ ಕಸದ ವಾಸನೆಗೆ ಅಂಗಡಿಯಲ್ಲಿ ಇರಲು ಆಗುವುದಿಲ್ಲ. ವ್ಯಾಪಾರವು ಆಗುತ್ತಿಲ್ಲ. ಯಾರು ಕಸ ಸುರಿಯುತ್ತಾರೆ ಎಂದು ನೋಡಲು ಮಧ್ಯ ರಾತ್ರಿವರೆಗೂ ಕಾವಲು ಕಾಯುವ ಪರಿಸ್ಥಿತಿ ಬಂದಿದೆ 
ಮಂಜುನಾಥ್, ಸೊಣ್ಣದೇನಹಳ್ಳಿ
ಬೇರೆ ಸರ್ಕಾರಿ ಜಾಗ ಇದ್ದರೂ ದಲಿತರು ವಾಸಿಸುವ ಸೊಣ್ಣದೇನಹಳ್ಳಿ, ಸೊಂಪುರ, ಸಿದ್ದಾರ್ಥನಗರದ ಮಧ್ಯೆ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಿರುವುದು ಸರಿಯಲ್ಲ. ಬೆಂಗಳೂರಿನ ಕಸ ತಂದು ಇಲ್ಲಿ ಸುರಿದು ಬೆಂಕಿ ಹಚ್ಚುತ್ತಿದ್ದರೂ ನೋಡಿಯೂ ನೋಡದಂತಹ ಅಧಿಕಾರಿಗಳ ನಡೆ ಅನುಮಾನಗಳಿಗೆ ದಾರಿ ಮಾಡಿಕೊಡುತ್ತಿದೆ.
ಮುನಿರಾಜು, ಸೊಣ್ಣದೇನಹಳ್ಳಿ 
ಸೊಣ್ಣದೇನಹಳ್ಳಿ ಬಳಿಯ ತ್ಯಾಜ್ಯ ನಿರ್ವಹಣಾ ಘಟಕದ ಬಳಿ ಕಸಕ್ಕೆ ಬೆಂಕಿ ಹಚ್ಚುವುದರ ಪರಿ ಹೇಗಿರುತ್ತದೆ ಎಂದರೆ ಹಗಲು ಸಂದರ್ಭದಲ್ಲೇ ಹೆಡ್‌ಲೈಟ್ ಹಾಕಿಕೊಂಡು ವಾಹನ ಚಲಾಯಿಸಿಬೇಕು. ಇಲ್ಲವೆಂದರೆ ಮುಂದೆ ಬರುವ ವಾಹನ ಗೊತ್ತಾಗದಷ್ಟೂ ಹೊಗೆ ರಸ್ತೆ ತುಂಬಾ ಹರಡಿಕೊಂಡಿರುತ್ತೆ
ಗಣೇಶ್, ಹೊಸಕೋಟೆ
ತ್ಯಾಜ್ಯ ನಿರ್ವಹಣಾ ಘಟಕದ ಸುತ್ತಲೂ ರಾತ್ರಿ ಸಂದರ್ಭದಲ್ಲಿ ಕಸ ತಂದು ಸುರಿದು ಬೆಂಕಿ ಹಚ್ಚುವುದನ್ನು ತಡೆಯಲು ಸದ್ಯ ಕಬ್ಬಿಣದ ಗೇಟ್ ಅಳವಡಿಸಿದ್ದೇವೆ. ಆದರೂ ಘಟಕದ ಸುತ್ತಮುತ್ತಲಿನ ಖಾಲಿ ಜಾಗದಲ್ಲಿ ಕಸ ಸುರಿಯುತ್ತಿದ್ದಾರೆ. ಯಾರು ಕಸ ಸುರಿಯುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮೆರಾವನ್ನು ವಾರದಲ್ಲಿ ಅಳವಡಿಸುತ್ತೇವೆ. 15 ದಿನದೊಳಗೆ ಕಸ ವಿಂಗಡಣೆ ಯಂತ್ರಗಳನ್ನು ತರಿಸುತ್ತಿದ್ದವೆ
ರವಿಕುಮಾರ್, ಪಿಡಿಒ, ಚೊಕ್ಕಹಳ್ಳಿ ಗ್ರಾಮಪಂಚಾಯಿತಿ
ಇತ್ತೀಚಿಗೆ ನಡೆದ ಸಭೆಯಲ್ಲಿ ಸೊಣದೇನಹಳ್ಳಿ ತ್ಯಾಜ್ಯ ಘಟಕದಲ್ಲಿನ ಕಸ ನಿರ್ವಹಣೆಯನ್ನು ನಿಸರ್ಗ ಎಂಟರ್ ಪ್ರೈಸಸ್ ಕಂಪನಿಗೆ ವಹಿಸಲಾಗಿದೆ. ಇನ್ನೂ 15 ದಿನದೊಳಗೆ ಸಮಸ್ಯೆಗೆ ಪರಿಹಾರ ದೊರೆಯಲಿದೆ
ಆಶಾ, ಪಿಡಿಒ, ದೊಡ್ಡಹುಲ್ಲೂರು ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT