ಹೊಸಕೋಟೆ: ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರಿಯ ಹೆದ್ದಾರಿಗಳು ಹೊಸಕೋಟೆ ಮೂಲಕ ಹಾದು ಹೋಗುತ್ತವೆ. ಈ ಮೂರು ರಾಜ್ಯಗಳಿಂದ ದಿನನಿತ್ಯ ಓಡಾಡುವ ಸಾವಿರಾರು ವಾಹನ ಮತ್ತು ಪ್ರಯಾಣಿಕರಿಗೆ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಕಸದ ರಾಶಿ ಸ್ವಾಗತ ಕೋರುತ್ತದೆ.

ನಗರದಿಂದ ಚಿಂತಾಮಣಿ ಮಾರ್ಗ, ಕೋಲಾರ ಮಾರ್ಗ, ಮಾಲೂರು ಮಾರ್ಗ, ಸೂಲಿಬೆಲೆ ಮಾರ್ಗ, ಬೆಂಗಳೂರ ಮಾರ್ಗ ಪ್ರಮುಖ ರಸ್ತೆಗಳು. ನಗರದ ಒಳಭಾಗದಿಂದ ಕಣ್ಣೂರಹಳ್ಳಿ ರಸ್ತೆ, ದೊಡ್ಡಗಟ್ಟಿಗನಬ್ಬೆ ರಸ್ತೆ, ಕುಂಬಳಹಳ್ಳಿ ರಸ್ತೆ ಇಕ್ಕೆಲ್ಲ ಹಾಗೂ ಎಲ್ಲಾ ವಾರ್ಡ್ಗಳಲ್ಲಿಯೂ ಕಸದ ಸಮಸ್ಯೆ ತಾಂಡವವಾಡುತ್ತಿದೆ.

ಕಸದ ಸಮಸ್ಯೆ ನಿನ್ನೆ ಮೊನ್ನಯದ್ದ ಅಲ್ಲ. ಹಲವು ವರ್ಷಗಳಿಂದ ಬೇರೂರಿವ ಜಾಢ್ಯ. ಇದು ಇತ್ತೀಚಿನ ದಿನಗಳಲ್ಲಿ ಉಲ್ಬಣಗೊಂಡಿದ್ದು, ಎಲ್ಲಂದರಲ್ಲಿ ಕಸದ ರಾಶಿ ಕಾಣುತ್ತಿದೆ. ಈ ಸಮಸ್ಯೆ ಬಗೆಹರಿಸುವಲ್ಲಿ ಸ್ಥಳೀಯ ಆಡಳಿತಗಳು ವಿಫಲವಾಗಿದೆ. ರಸ್ತೆ ಬದಿ ಕಸ ಎಸೆಯಬಾರದು ಎಂಬ ವಿವೇಚನ ಸ್ಥಳೀಯರು, ವಿವಿಧ ಅಂಗಡಿ ಮತ್ತು ಹೋಟೆಲ್ ಮಾಲೀಕರಲ್ಲಿಯೂ ಇಲ್ಲವಾಗಿದೆ. ಹೀಗಾಗಿ ಕಾಂಗ್ರೆಸ್ ಕಳೆಯಂತೆ ಕಸದ ಸಮಸ್ಯೆ ಬೆಳೆಯುತ್ತಲೇ ಸಾಗಿದೆ.

ರಸ್ತೆಗಳ ಅಂಚಿನಲ್ಲಿ ಅಪಾಯಕಾರಿ ತ್ಯಾಜ್ಯವನ್ನು ಬೀಸಾಡುವುದಲ್ಲದೆ ಅದಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ರಸ್ತೆಗೆ ದಟ್ಟ ಹೊಗೆ ಆವರಿಸಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಹಲವು ಬಾರಿ ವಾಹನ ಸವಾರರಿಗೆ ರಸ್ತೆ ಕಾಣದ ಅಪಘಾತ ಆಗಿರುವ ಪ್ರಕರಣಗಳು ಉಂಟು. ಅಲ್ಲದೆ ಕಸದಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಸೇರಿ ವಿಷಕಾರಕ ವಸ್ತುಗಳು ಸುಡುವುದರಿಂದ ಬರುವ ಹೊಗೆಯಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣ ಆಗುತ್ತಿದೆ. ಅಸ್ತಮಾ ಮತ್ತು ಶ್ವಾಸಕೋಶ ಕಾಯಿಲೆ ಇರುವ ರೋಗಿಗಳಿಗೆ ಕಂಟಕ ಎದುರಾಗಿದೆ.

ಚಿಂತಾಮಣಿ ರಸ್ತೆಯಲ್ಲಿ ತಾಲ್ಲೂಕಿನ ಗಡಿಯುದ್ದಕ್ಕೂ ಕಸದ ಸಮಸ್ಯೆ ದಿನೇದಿನೇ ಹಚ್ಚಾಗುತ್ತಿದೆ. ಮುಖ್ಯವಾಗಿ ತಾಲ್ಲೂಕಿನ ಪ್ರಮುಖ ಕೈಗಾರಿಕಾ ಪ್ರದೇಶವಾದ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ ಬದಿ ಕಸ ಸುರಿಯುವ ಜಾಗವಾಗಿ ಪರಿಣಮಿಸಿದೆ.

ಅಲ್ಲದೆ ತಾಲ್ಲೂಕಿನಾದ್ಯಂತ ಇರುವ ಕೈಗಾರಿಕಾ ಪ್ರದೇಶಗಳಲ್ಲಿ ಸೂಕ್ತವಾಗಿ ತ್ಯಾಜ್ಯ ವಿಲೇವಾರಿ ಮಾಡಲು ಕೈಗಾರಿಕೆಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸೂಲಿಬೆಲೆ ರಸ್ತೆಯ ಚಿಕ್ಕ ಕೆರೆ ಕಟ್ಟೆ, ಕುಂಬಳಹಳ್ಳಿಗೆ ಹಾದು ಹೋಗುವ ಚಿಕ್ಕಕೆರೆ ಮದ್ಯದ ರಸ್ತೆಗಳು ಕಸವನ್ನು ಸುರಿಯುವವರಿಗೆ ಹಾಟ್ ಪೇವರೀಟ್ ಸ್ಥಳ. ಅಲ್ಲದೆ ಬೆಂಗಳೂರಿಗೆ ಹಾದು ಹೋಗುವ ರಸ್ತೆಯನ್ನೂ ಬಿಟ್ಟಿಲ್ಲ. ಆದ್ದರಿಂದ ವಿವಿಧ ಭಾಗಗಳಿಂದ ಬೆಂಗಳೂರು ನಗರಕ್ಕೆ ಬರುವ ಜನರಿಗೆ ಸ್ವಾಗತ ಕೋರುವಂತಿದೆ. ಈ ಸಮಸ್ಯೆ ನಗರಕ್ಕೆ ಬರುವ ಪ್ರವಾಸಿಗರಿಗೆ ಕೆಟ್ಟ ಅನುಭವ ನೀಡುತ್ತಿದೆ.

ಹೊರರಾಜ್ಯದಿಂದ ಬೆಂಗಳೂರಿಗೆ ಬರುವವರಿಗೆ ಹೊಸಕೋಟೆ ಹೆಬ್ಬಾಗಿಲಿನಂತೆ. ಹೊಸಕೋಟೆ ಮತ್ತು ಹೆದ್ದಾರಿ ಇಕ್ಕೆಲಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಗ್ರಾಮೀಣ ಭಾಗದಲ್ಲೇಕೆ ಸಮಸ್ಯೆ ?

ರಸ್ತೆಗಳ ಅಂಚಿನಲ್ಲಿ ಅಪಾಯಕಾರಿ ತ್ಯಾಜ್ಯವನ್ನು ಬೀಸಾಡುವುದಲ್ಲದೆ ಅದಕ್ಕೆ ಬೆಂಕಿ ಹಚ್ಚಿ ಸ್ಥಳೀಯರು ಅಜ್ಞಾನ ಮೂರ್ಖತನ ಪ್ರದರ್ಶಿಸುತ್ತಿದ್ದಾರೆ. ಅಲ್ಲದೆ ಕಸದ ಸಮಸ್ಯೆ ಬಗೆಹರಿಸಿ ಎಂದು ಕೂಗಾಡುತ್ತಾರೆ. ನಗರ ಪಟ್ಟಣ ಮತ್ತು ಗ್ರಾಮಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವುದು ಜನರ ಕೆಲಸವಾಗಿದೆ. ಸರ್ಕಾರ ಹೇಳಿದಂತೆ ಜನರ ಕಸ ವಿಂಗಡಿಸಿ ವಾಹನಗಳಿಗೆ ನೀಡಬೇಕು. ನಗರಸಭೆ ಪಂಚಾಯಿತಿಯೂ ಮನೆ ಮನೆಗಳಿಂದ ಕಸ ಸಂಗ್ರಹಿಸಿ ಸೂಕ್ತವಾಗಿ ವಿಲೇವಾರಿ ಮಾಡಬೇಕು. ಆದರೆ ಗ್ರಾಮೀಣ ಭಾಗದಲ್ಲಿ ಇವೆರಡು ಆಗುತ್ತಿಲ್ಲ. ಜನ ಆಡಳಿತಗಳನ್ನು ದೂರುತ್ತಲೇ ಕಸವನ್ನು ಎಲ್ಲಂದರಲ್ಲಿ ಸುರಿಯುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಮತ್ತು ಸ್ಥಳೀಯ ಆಡಳಿತ ಒಟ್ಟಾಗಿ ಕೆಲಸ ಮಾಡಿದರ ಸ್ವಚ್ಛ ಭಾರತ ಅಭಿಯಾನಕ್ಕೆ ಅರ್ಥ ಬರಲಿದೆ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.

ಬೀದಿನಾಯಿಗಳ ಹಾವಳಿ

ರಸ್ತೆಗಳ ಬದಿಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳನ್ನು ಸುರಿಯುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಚಿಕ್ಕ ಮಕ್ಕಳು ವೃದ್ಧರು ಓಡಾಡುವ ವೇಳೆ ಮೇಲೆ ಎರಗುವ ಭೀತಿ ಆವರಿಸಿದೆ. ರಸ್ತೆ ಬದಿಯಲ್ಲಿ ಕಸ ಸುರಿಯುವ ಕೆಟ್ಟ ಚಾಳಿಗೆ ಕಡಿವಾಣ ಹಾಕಬೇಕು. ಕಸದ ರಾಶಿಯನ್ನು ನಗರಸಭೆ ತೆರವುಗೊಳಿಸಿದರೂ ಮತ್ತೆ ಅಲ್ಲೇ ಕಸ ಸುರಿಯಲಾಗುತ್ತಿದೆ. ಕಠಿಣ ಕ್ರಮ ಕೈಗೊಳ್ಳುವ ಮೂಲಕ ಈ ರೂಢಿಯನ್ನು ನಿಲ್ಲಿಸಬೇಕೆಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದರು.

ನಮ್ಮ ನಗರ ಸ್ವಚ್ಛತೆ ನಮ್ಮ ಕೈಯಲ್ಲಿದೆ ಕಸ ಸಮಸ್ಯೆ ಬಗೆಹರಿಸಿ ಸ್ವಚ್ಛ ನಗರಕ್ಕೆ ಹಲವು ಕಾರ್ಯಕ್ರಮ ರೂಪಿಸಲಾಗಿದೆ. ನಗರಸಭೆ ಕ್ರಮಕ್ಕೇ ನಾಗರೀಕರ ಸಹಕಾರ ಅಷ್ಟೇ ಮುಖ್ಯ. ನಮ್ಮ ನಗರದ ಸ್ವಚ್ಛತೆ ನಮ್ಮ ಕೈಲಿದೆ. ಈ ನಿಟ್ಟಿನಲ್ಲಿ ನಾಗರೀಕರು ಸ್ಥಳೀಯ ನಗರಸಭೆಯ ಸ್ವಚ್ಛತೆ ನಿಯಮಗಳನ್ನು ಪಾಲಿಸಬೇಕು. ಹೆದ್ದಾರಿ ಮತ್ತು ರಸ್ತೆ ಬದಿ ಕಸ ಸುರಿಯುವುದಕ್ಕೆ ಕಡಿವಾಣ ಹಾಕಲು ಕ್ರಮವಹಿಸಲಾಗುವುದು. ಕಸಮುಕ್ತ ಹೊಸಕೋಟೆ ನಗರ ನಿರ್ಮಾಣ ನನ್ನ ಧ್ಯೇಯ.

–ನೀಲಾಲೋಚನ ಪ್ರಭು ಪೌರಾಯುಕ್ತ ನಗರಸಭೆ

ಸಮನ್ವಯ ಕೆಲಸದಿಂದ ಪರಿಹಾರ ಹೆದ್ದಾರಿ ಬದಿಯ ಕಸದ ಸಮಸ್ಯೆ ನಿರ್ವಹಿಸುವ ಜವಾಬ್ದಾರಿ ಹೆದ್ದಾರಿ ಪ್ರಾಧಿಕಾರದ್ದು. ಇವರು ನುಣುಚಿಕೊಳ್ಳುತ್ತಿರುವುದರಿಂದ ಸ್ಥಳೀಯವಾಗಿ ನಗರಸಭೆ ಮತ್ತು ಗ್ರಾಮ ಪಂಚಾಯಿತಿಗಳ ನಡುವೆ ವೈಮನಸ್ಸು ಏರ್ಪಡುತ್ತಿದೆ. ಆದ್ದರಿಂದ ವಾಹನ ಸವಾರರಿಗೆ ಮತ್ತು ಪ್ರಯಾಣಿಕರಿಗೆ ತೊಂದರೆಯಾಗದಂತೆ ಸ್ಥಳೀಯ ಆಡಳಿತ ಸಂಸ್ಥೆ ಮತ್ತು ಪ್ರಾಧಿಕಾರ ಕೆಲಸ ಮಾಡಬೇಕು

–ವರದಾಪುರ ನಾಗರಾಜ್ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.