ಹೊಸಕೋಟೆ: ತಾಲ್ಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾಲ್ಲೂಕಿನ ಚೊಕ್ಕಹಳ್ಳಿ ಚಿಕ್ಕಮುನಿಯಮ್ಮ, ಲಿಂಗಾಪುರದ ಅಂಗವಿಕಲರಾದ ತುಳಸಿ ಅವರನ್ನು ಕರ್ನಾಟಕ ಕಲಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅನಕ್ಷರಸ್ಥರಾದರೂ ಸೋಬಾನೆ ಮತ್ತು ವಸಗೆ ಪದಗಳನ್ನು ಲೀಲಾಜಾಲವಾಗಿ ಹಾಡುವ ತಾಲ್ಲೂಕಿನ ಚೊಕ್ಕಹಳ್ಳಿ ಚಿಕ್ಕಮುನಿಯಮ್ಮ ಮತ್ತು ಅಂಗವಿಕಲರಾದ ತುಳಸಿ ಅವರು ಕರ್ನಾಟಕ ಸರ್ಕಾರದ ಹಿರಿಯ ನಾಗರಿಕರ ಮತ್ತು ವಿಶೇಷ ಚೇತನ ಕಲ್ಯಾಣ ಇಲಾಖೆಯಿಂದ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಲಿಂಗಾಪುರದ ತುಳಸಿ ಅವರು ತಬಲ ಸೋಲೆಕ್ಸ್ ವಾದಕರಾಗಿ ಗಾಯಕರಾಗಿ ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲೂ ಹಲವು ಕಾರ್ಯಕ್ರಮ ನೀಡಿದ್ದಾರೆ.

ಇವರ ಸೇವೆ ಗುರುತಿಸಿದ ತಾಲ್ಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘವು ಗೌರವಿಸಿದೆ. ಈ ವೇಳೆ ಜಿಲ್ಲಾ ಕಲಾವಿದರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.