ನಂದಗುಡಿ(ಹೊಸಕೋಟೆ): ತಾಲ್ಲೂಕಿನ ನಂದಗುಡಿಯಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಂಪವರ್ ಮತ್ತು ಯುನೈಟೆಡ್ ವೇ ಬೆಂಗಳೂರು ಕಂಪನಿಯ ಸಿಎಸ್ಆರ್ ನಿಧಿ ₹56 ಲಕ್ಷ ವೆಚ್ಚದಲ್ಲಿ ಕಾಯಕಲ್ಪ ನೀಡಲಾಗಿದೆ.

ಟೈಲ್ಸ್, ಸುಣ್ಣ ಬಣ್ಣ, ಕಟ್ಟಡದ ಹೊರ ಮೇಲ್ಮೈ ಗೆ ಹೊಸ ರೂಪ ನೀಡಲಾಗಿದೆ. ಮೆಲ್ದರ್ಜೆಗೆರಿಸಿರುವ ಆಸ್ಪತ್ರೆಯನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.

ಬಳಿಕ ಮಾತನಾಡಿ, ಪ್ರತಿ ವ್ಯಕ್ತಿಗೆ ಗುಣಮಟ್ಟದ ಶಿಕ್ಷಣ ಜೊತೆ ಆರೋಗ್ಯ ಬೇಕು. ಉಚಿತ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆ ದೊರೆತರೆ ವ್ಯಕ್ಯಿಯ ಆರೋಗ್ಯದ ಜತೆ ಸಮಾಜ ಹಾಗೂ ದೇಶಸ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದ ಅನುದಾನ ಜೊತೆಗೆ ಸಿಎಸ್ ಆರ್ ನಿಧಿಯಡಿ ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳನ್ನು ಮೇಲ್ದರ್ಜೆಗೆರಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಅಮೆರಿಕದ ಎಂಪವರ್ ಕಂಪನಿ ಕಳೆದ ಎರಡೂ ವರ್ಷಗಳಲ್ಲಿ ನಂದಗುಡಿ ಹೋಬಳಿಗಾಗಿಯೇ ₹5 ಕೋಟಿಗೂ ಹೆಚ್ಚು ಅನುದಾನ ನೀಡಿದೆ. ₹56 ಲಕ್ಷ ವೆಚ್ಚದಲ್ಲಿ ನಂದಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೆಲ್ದರ್ಜೆಗೆರಿಸಲಾಗಿದೆ. ಈ ನೆರವು ವ್ಯರ್ಥವಾಗಬಾರದು. ಆರೋಗ್ಯ ಕೇಂದ್ರದ ಸಿಬ್ಬಂದಿ ಹೋಬಳಿಯ ಜನತೆಗೆ ಗುಣಮಟ್ಟದ ತಪಾಸಣೆ ಮತ್ತು ಚಿಕಿತ್ಸೆ ನೀಡುವಲ್ಲಿ ವೃತಿಪರತೆ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.

ಎಂಪವರ್ ಕಂಪನಿ ಸಿಎಸ್ಆರ್ ನಿಧಿ ಸದಸ್ಯೆ ವೈಷ್ಣವಿ, ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸಿಗುವಂತಾಗಬೇಕು. ಆಗ ಮಾತ್ರವೇ ನಮ್ಮ ಸಮಾಜ ಸುಸ್ಥಿರತೆ ಕಾಯ್ದುಕೊಂಡು ಹೋಗಲು ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲೆಂದು ಕಳೆದ ಎರಡು ವರ್ಷಗಳಿಂದ ನಂದಗುಡಿ ಹೋಬಳಿಯಲ್ಲಿ ಸಿಎಸ್ಆರ್ ನಿಧಿಯಡಿ ಸಕ್ರಿಯವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ನಂದಗುಡಿ ಹೋಬಳಿಯ ಮುಖಂಡ ಬಿ.ವಿ. ರಾಜಶೇಖರ್ ಗೌಡ, ಎಂಪವರ್ ಕಂಪನಿಯ ಸಿಎಸ್ ಆರ್ ತಂಡದ ಸದಸ್ಯರಾದ ರಶ್ಮಿ, ಯಶಸ್ವಿ, ವಿನೋದ, ತಾಲ್ಲೂಕು ಆರೋಗ್ಯ ಅಧಿಕಾರಿ ವೀಣಾ, ಯುನೈಟೆಡ್ ವೇ ಕಂಪನಿಯ ಸಿಎಸ್ಆರ್ನಿಧಿ ಪದಾಧಿಕಾರಿಗಳು, ಸದಸ್ಯರು ಹಾಗೂ ನಂದಗುಡಿ ಗ್ರಾ.ಪಂ ಅಧ್ಯಕ್ಷ ನಾರಾಯಣ ಗೌಡ, ರಮೇಶ್, ಬಸವರಾಜ್, ಮಹೇಶ್ ಇದ್ದರು.

ಕುಡಿವ ನೀರಿನ ವ್ಯವಸ್ಥೆ ಮಾಡಿ

ತಾಲ್ಲೂಕಿನಲ್ಲಿ ಬಹುತೇಕ ಕಡೆ ಫ್ಲೋರೇಡ್ ನೀರಿನ ಸಮಸ್ಯೆ ಇದೆ. ನಿಮ್ಮಲ್ಲಿ ಇನ್ನೂ ಸಿಎಸ್ಆರ್ ಹಣ ಬಾಕಿ ಇದ್ದರೆ ಅಂಗನವಾಡಿ ಪ್ರಾಥಮಿಕ ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಟ್ಟಡ ಜೀರ್ಣೋದ್ಧಾರದಂತಹ ಕಾರ್ಯಕ್ರಮ ಕೈಗೊಳ್ಳಿ ಎಂಪವರ್ ಕಂಪನಿಯ ಪದಾಧಿಕಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಮನವಿ ಮಾಡಿದರು. ಗ್ರಾಮಸ್ಥರ ಮನವಿಯಂತೆ ಮುಂದಿನ ದಿನಗಳಲ್ಲಿ ನಂದಗುಡಿಗೆ ಬಸ್ ನಿಲ್ದಾಣ ನಿರ್ಮಿಸಿಕೊಡುವುದಾಗಿ ಶಾಸಕ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.