ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಣೇನಹಳ್ಳಿ: ಹೆರಿಗೆ ಆಸ್ಪತ್ರೆ ಆರಂಭಕ್ಕೆ ಒತ್ತಾಯ

Last Updated 13 ಜೂನ್ 2019, 19:59 IST
ಅಕ್ಷರ ಗಾತ್ರ

ಹೆಸರಘಟ್ಟ: ಸೊಣೇನಹಳ್ಳಿ ಗ್ರಾಮದಲ್ಲಿ ಹತ್ತು ವರ್ಷಗಳ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಹೆರಿಗೆ ಆಸ್ಪತ್ರೆಯನ್ನು ಪುನರಾರಂಭಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹತ್ತು ವರ್ಷಗಳ ಹಿಂದೆ ಕೆಲಸ ನಿರ್ವಹಿಸುತ್ತಿದ್ದ ಹೆರಿಗೆ ಆಸ್ಪತ್ರೆಯ ಕೇಂದ್ರದಲ್ಲಿ ಹತ್ತು ಹಾಸಿಗೆಗಳು, ಸುಸಜ್ಜಿತ ಕಟ್ಟಡ, ವೈದ್ಯರಿಗೆ ಮತ್ತು ನರ್ಸ್‍ಗಳಿಗೆ ಎರಡು ವಸತಿ ನಿಲಯಗಳ ಸೌಲಭ್ಯ ಇತ್ತು. ಆದರೆ, ವೈದ್ಯರು ಇಲ್ಲಿ ಬಂದು ಕೆಲಸ ಮಾಡುವುದಿಲ್ಲ. ಬಸ್‌ ಸರಿಯಾದ ಸೌಕರ್ಯವಿಲ್ಲ ಎಂಬ ಕಾರಣ ನೀಡಿ ಆಸ್ಪತ್ರೆಯನ್ನು ಮುಚ್ಚಲಾಗಿತ್ತು ಎಂದು ಗ್ರಾಮದ ನಿವಾಸಿ ಮಹೇಶ್ ಹೇಳಿದರು.

ಚಲ್ಲಹಳ್ಳಿ, ಹನಿಯೂರು, ಚನ್ನಸಂದ್ರ, ಬ್ಯಾತ, ಕಾಮಾಕ್ಷಿಪುರ, ಸೊಣೇನಹಳ್ಳಿ, ಕಾಕೋಳು, ಬುಡವನಹಳ್ಳಿ, ಅರಕೆರೆ ಗ್ರಾಮದವರು ಹೆರಿಗೆಗಾಗಿ ಎಂಟು ಕಿ.ಮೀ. ದೂರವಿರುವ ಯಲಹಂಕ ಅಥವಾ ಐವರಕಂಡಪುರ ಹೆರಿಗೆ ಕೇಂದ್ರಗಳಿಗೆ ತೆರಳಬೇಕಾಗಿದೆ. ಸಮಯಕ್ಕೆ ಸರಿಯಾಗಿ ಬಸ್‌, ಆಂಬುಲೆನ್ಸ್‌ ಸಿಗದೇ ಇದ್ದರೆ ಪಡಿಪಾಟಲು ಪಡಬೇಕಾಗುತ್ತದೆ.

ಜನಪ್ರತಿನಿಧಿಗಳಿಗೆ ನಮ್ಮ ನೋವು ಅರ್ಥವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ವೈದ್ಯಾಧಿಕಾರಿ ಪ್ರಕಾಶ್ ಪ್ರತಿಕ್ರಿಯಿಸಿ, ‘ಹೆರಿಗೆ ಆಸ್ಪತ್ರೆಯನ್ನು ಮತ್ತೆ ಆರಂಭಿಸಲು ಅಗತ್ಯ ಕ್ರಮ ಕೈ ಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT