ದೊಡ್ಡಬಳ್ಳಾಪುರ: ತಾಲ್ಲೂಕಿನ ರಾಮಯ್ಯನಪಾಳ್ಯ,ವಡ್ಡರಪಾಳ್ಯ ಸಮೀಪದ ಖಾಸಗಿ ತೋಟದಲ್ಲಿ ಅಕ್ರಮವಾಗಿ ಬಾಂಗ್ಲದೇಶದ ವಲಸಿಗರು ಶೆಡ್ಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಮುಖಂಡರು ಭಾನುವಾರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಖಾಸಗಿ ತೋಟದಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು, ತಾತ್ಕಾಲಿಕ ಶೆಡ್ಗಳನ್ನು ಹಾಕಿಕೊಂಡು ವಾಸವಾಗಿರುವ ವಲಸಿಗರ ಬಳಿ ಬಾಂಗ್ಲದೇಶದ ನೋಟುಗಳು, ಗುರುತಿನ ಚೀಟಿಗಳು ಇವೆ. ಅಲ್ಲದೇ ಇಲ್ಲಿ ವಾಸವಾಗಿರುವ ನಿವಾಸಿಗಳೆ ಬಾಂಗ್ಲಾದೇಶದಿಂದ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಇಲ್ಲಿನ ಎಲ್ಲಾ ನಿವಾಸಿಗಳ ಬಳಿ ಭಾರತದ ನಕಲಿ ಆಧಾರ್ ಗುರುತಿನ ಚೀಟಿಗಳು ಸಹ ಇವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಲ್ಲೂಕಿನ ಮತ್ತಷ್ಟು ಕಡೆಗಳಲ್ಲಿ ಅಕ್ರಮವಾಗಿ ಬಂದು ಬಾಂಗ್ಲದೇಶದವರು ವಾಸವಾಗಿರುವ ಬಗ್ಗೆ ಅನುಮಾನಗಳು ಇವೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ರಂಜಿತ್ಗೌಡ, ಕಾರ್ಯದರ್ಶಿ ಉಮೇಶ್, ಬಜರಂಗದಳ ಸಂಯೋಜಕ್ ವಿರಾಜ್, ಕೋಲಾರ ವಿಭಾಗ ಸಹ ಕಾರ್ಯದರ್ಶಿ ರವಿಕುಮಾರ್ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.