ವಿಶ್ವಕರ್ಮ ವೇದಿಕೆ ಗುರುತಿನ ಚೀಟಿ ವಿತರಣೆ

ಮಂಗಳವಾರ, ಜೂಲೈ 16, 2019
25 °C

ವಿಶ್ವಕರ್ಮ ವೇದಿಕೆ ಗುರುತಿನ ಚೀಟಿ ವಿತರಣೆ

Published:
Updated:
Prajavani

ದೇವನಹಳ್ಳಿ: ಸಮುದಾಯದಲ್ಲಿನ ಸದಸ್ಯತ್ವ ನೋಂದಣಿ ಗುರುತಿಸುವಿಕೆಯಾಗಿದ್ದು ಸಂಘಟನೆ ಬಲಪಡಿಸಲು ಸಹಾಯಕವಾಗಲಿದೆ ಎಂದು ಸುವರ್ಣ ಕರ್ನಾಟಕ ರಾಜ್ಯ ವಿಶ್ವಕರ್ಮ ರಕ್ಷಣಾ ವೇದಿಕೆ ರಾಜ್ಯ ಘಟಕದ ಸಂಸ್ಥಾಪಕ ಅಧ್ಯಕ್ಷ ರಾಮಕೃಷ್ಣಚಾರ್ ಹೇಳಿದರು.

ಇಲ್ಲಿನ ನಾಗಮಂಗಲ ಗ್ರಾಮದಲ್ಲಿ ಸಮುದಾಯದ ಸದಸ್ಯರ ನೋಂದಣಿ ಮತ್ತು ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಂದು ಸಮುದಾಯ ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಜಾಗೃತಿಯಾಗುತ್ತಿದೆ, ವಿಶ್ವಕರ್ಮ ಸಮುದಾಯ ಸಂಘಟನಾತ್ಮಕವಾಗಿ ಬಲಗೊಳ್ಳದೆ ಗ್ರಾಮೀಣ ಪ್ರದೇಶದಲ್ಲಿ ಚದುರಿಹೋಗಿದೆ. ಒಗ್ಗಟ್ಟಾಗಿ ಪರಸ್ಪರ ಚರ್ಚಿಸಿ ಪರಿಹಾರಕ್ಕೆ ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದರು.

‘ಸಮುದಾಯದ ಮೂಲ ವೃತ್ತಿ ಕಡಿಮೆಯಾಗುತ್ತಿದೆ, ಸಿದ್ಧ ಆಭರಣಗಳ ಭರಾಟೆಯಲ್ಲಿ ಕೈಗೆ ಕೆಲಸವಿಲ್ಲ. ಪರ್ಯಾಯ ವ್ಯವಸ್ಥೆಗೆ ಆರ್ಥಿಕ ಸ್ಥಿತಿ ಬಲವಾಗಿಲ್ಲ. ಸಮಾಜದ ಮುಖ್ಯವಾಹಿನಿಗೆ ಬರಲು ಅನೇಕ ಮಾರ್ಗಗಳಿವೆ. ಬೇರೆಯವರ ಮೇಲೆ ಅವಲಂಬಿತರಾಗದೆ ನಮ್ಮ ಜೀವನ ನಾವೇ ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.

ವೇದಿಕೆ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಗೀತಾಂಜಲಿ, ತಾಲ್ಲೂಕು ಘಟಕ ಅಧ್ಯಕ್ಷ ಮೂರ್ತಿ ಆಚಾರ್, ಉಪಾಧ್ಯಕ್ಷ ಗಂಗಾಧರಾಚಾರ್, ಕಸಬ ಹೋಬಳಿ ಘಟಕ ಅಧ್ಯಕ್ಷ ಮೋಹನಾಚಾರ್, ಉಪಾಧ್ಯಕ್ಷ ನವೀನ್ ಚಾರ್, ಸದಸ್ಯರಾದ ಶ್ರೀನಿವಾಸಾಚಾರ್, ಸುಧಾಕರಾಚಾರ್, ಎಸ್. ಮಹೇಶ್ ಆಚಾರ್, ಹರೀಶ್ ಆಚಾರ್, ಅನಿಲ್ ಆಚಾರ್, ಗಗನ್ ಆಚಾರಿ, ಹರೀಶ್ ಆಚಾರ್, ಮುನಿರಾಜ ಆಚಾರ್, ಮುನಿಯಾಚಾರ್, ಮಹೇಶ್, ಕಿರಣ್ ಆಚಾರ್, ಶಶಿಕುಮಾರ್, ಶಿವಕುಮಾರ್, ರಾಮಾಂಜಿನಾಚಾರ್, ಶ್ರೀಧರಾಚಾರ್, ಮಹೇಶ್ ಆಚಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !