ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ-2 ತಂತ್ರಾಂಶ: ನೋಂದಣಿಯಲ್ಲಿ 2ನೇ ಸ್ಥಾನ

Published 20 ಜೂನ್ 2023, 6:18 IST
Last Updated 20 ಜೂನ್ 2023, 6:18 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಮಾರ್ಚ್‌ 29 ರಿಂದ ಕಾವೇರಿ-2 ತಂತ್ರಾಂಶ ಆಳವಡಿಕೆಯಾದ ನಂತರ ಹೆಚ್ಚಿನ ನೋಂದಣಿಗಳನ್ನು ನಡೆಸುವ ಮೂಲಕ 2ನೇ ಸ್ಥಾನ ಪಡೆದಿದೆ ಎಂದು ಉಪನೋಂದಣಿ ಅಧಿಕಾರಿ ಎಚ್‌.ಎಸ್‌.ಸತೀಶ್‌ ತಿಳಿಸಿದ್ದಾರೆ.

ಅವರು ಈ ಬಗ್ಗೆ ಮಾಹಿತಿ ನೀಡಿ, ಮೂರು ತಿಂಗಳಿಂದ ಇಲ್ಲಿಯವರೆಗೆ 3 ಸಾವಿರಕ್ಕೂ ಹೆಚ್ಚಿನ ಪತ್ರಗಳು ನೋಂದಣಿಯಾಗಿವೆ. ಈ ಮೂಲಕ ಸರ್ಕಾರದ ಖಜಾನೆಗೆ ಪ್ರತಿ ತಿಂಗಳು ₹10 ಕೋಟಿ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜೂನ್‌ 27ರ ಒಳಗೆ ಪಡಿತರ ಪಡೆಯಲು ಸೂಚನೆ

ಆಹಾರ ಇಲಾಖೆಯ ಸರ್ವರ್‌ ನಿರ್ವಹಣೆ ಜೂನ್‌ 28 ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಈ ಸಮಯದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಜೂನ್‌ 27ರ ಒಳಗಾಗಿ ಈ ತಿಂಗಳ ಆಹಾರ ಧಾನ್ಯಗಳನ್ನು ಪಡಿತರದಾರರು ಪಡೆದುಕೊಳ್ಳುವಂತೆ ದೊಡ್ಡಬಳ್ಳಾಪುರ ತಹಶೀಲ್ದಾರ್‌ ಮೋಹನಕುಮಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT