ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಕೃಷ್ಣ ವೇಷಭೂಷಣ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಯಾದವ ಸೇವಾ ಪ್ರತಿಷ್ಠಾನ ಹಾಗೂ ಬಾಲಗೋಕುಲ ವತಿಯಿಂದ ಶ್ರೀಕೃಷ್ಣ ವೇಷಧಾರಿ ಸ್ಪರ್ಧೆ ನಡೆಯಿತು.

ನಗರದ ಭಗತ್‌ಸಿಂಗ್ ಕ್ರೀಡಾಂಗಣ ಸಮೀಪದ ಶಿವಗಂಗಾ ಕಾರ್ಯಾಲಯದಲ್ಲಿ ಕೋವಿಡ್ ನಿಯಮದಡಿ ಸ್ಪರ್ಧೆ ಆಯೋಜಿಸಿದ್ದು, ಸುಮಾರು 70ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಮಕ್ಕಳು ರಾಧಾ ಹಾಗೂ ಶ್ರೀಕೃಷ್ಣನ ವೇಷಧರಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಈ ವೇಳೆ ಉತ್ತಮವಾಗಿ ವೇಷಭೂಷಣ ಧರಿಸಿದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಯಾದವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಬಾಬು, ಖಜಾಂಚಿ ಎನ್. ರಘು, ಬಾಲಗೋಕುಲ ಸಂಯೋಜಕ ಕಾರ್ತಿಕ್, ಆರ್.ಎಲ್. ಜಾಲಪ್ಪ ಕಾಲೇಜಿನ ಪ್ರಾಧ್ಯಾಪಕ ತಿರುಮಲೇಶ್, ಜಿಲ್ಲಾ ಸಂಯೋಜಕ ಕುಟುಂಬ ಪ್ರಬೋಧನ್‌, ಸನತ್‌ಮೂರ್ತಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.