ಗುರುವಾರ , ಮೇ 26, 2022
28 °C

ಎಚ್‌ಡಿಕೆ ವಿರುದ್ಧ ಶಾಸಕ ಜಮೀರ್‌ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಅಲ್ಪಸಂಖ್ಯಾತರ ಮತಗಳು ನಿರ್ಣಯವಾಗಿರುವುದರಿಂದ ಅಲ್ಪಸಂಖ್ಯಾತರ ಬಗ್ಗೆ ಮೃದುಧೋರಣೆ ತೋರಿಸುತ್ತಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಟೀಕಿಸಿದರು.

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾತನಾಡಿ, 2004ರಿಂದ ರಾಜ ಕೀಯಕ್ಕೆ ಬಂದ ಕುಮಾರಸ್ವಾಮಿ ಅವರು ಮುಸಲ್ಮಾನರಿಗೆ ಏನು ಮಾಡಿ ದ್ದಾರೆ ಎಂಬುದು ಗೊತ್ತಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಿದ್ದರಾಮಯ್ಯ ಮಾಡಿದಷ್ಟು ಯಾರೂ ಮಾಡಿಲ್ಲ ಎಂದರು.

ಜಾಫರ್ ಷರೀಫ್‌ ಅವರ ಮೊಮ್ಮಗನ ಮೇಲೆ ಅಷ್ಟೊಂದು ಪ್ರೀತಿ ಇದ್ರೆ  ಮಂಡ್ಯದಲ್ಲಿ ಮಗನ ಬದಲಾಗಿ ಜಾಫರ್ ಷರೀಫ್‌ ಅವರ ಮೊಮ್ಮಗನಿಗೆ ಟಿಕೆಟ್ ಕೊಡಬೇಕಿತ್ತು. ದೇವೇಗೌಡರಿಗೆ ಈಗಲೂ ಅಲ್ಪಅಸಂಖ್ಯಾತರ ಬಗ್ಗೆ ಕಾಳಜಿಯಿದೆ. ಆದರೆ, ಅದರಲ್ಲಿ ಒಂದು ಪರ್ಸೆಂಟ್ ಸಹ ಕುಮಾರಸ್ವಾಮಿಗೆ ಇಲ್ಲ ಎಂದು ಲೇವಡಿ ಮಾಡಿದರು.

ಫಾರೂಕ್ ಅವರು ಕುಮಾರಸ್ವಾಮಿ ಬಳಿ ಒಂದು ದಿನ ಆದ್ರು ಸಚಿವರನ್ನಾಗಿ ಮಾಡಿ ಅಂತ ಕೇಳಿದ್ರೂ ಮಾಡಲಿಲ್ಲ. ಯಾರು ಮುಸಲ್ಮಾನರ ವಿರೋಧಿ? ಅಲ್ಪಸಂಖ್ಯಾತರಿಗೆ ಸಿದ್ದರಾಮಯ್ಯ ಏನು ಮಾಡಿದ್ದಾರೆ, ಕುಮಾರಸ್ವಾಮಿ ಏನು ಮಾಡಿದ್ದಾರೆ ಎನ್ನುವ ಬಗ್ಗೆ ಬಹಿರಂಗವಾಗಿ ಚರ್ಚೆಗೆ ಬರಲಿ. ಆಗ ಕುಮಾರಸ್ವಾಮಿ ಬಂಡವಾಳ ಗೊತ್ತಾಗುತ್ತದೆ ಎಂದರು.

ಜೆಡಿಎಸ್‌ನಲ್ಲಿ ಅಲ್ಪಸಂಖ್ಯಾತರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡ್ತಾರಾ? ಅಲ್ಪಸಂಖ್ಯಾಂತರನ್ನು ಸಿ.ಎಂ ಮಾಡ್ತೀವಿ ಎಂದು ಹೇಳಲಿ. ಆಗ ನಮ್ಮ ಸಮುದಾಯದವರು ಜೆಡಿಎಸ್ ಬಗ್ಗೆ ಯೋಚನೆ ಮಾಡ್ತೀವಿ ಎಂದರು.

ಕುಮಾರಸ್ವಾಮಿ ಅವರು ಒಂದು ಬಾರಿಯಾದರೂ ಹಜ್ ಕಾರ್ಯಕ್ರಮ ಉದ್ಘಾಟನೆಗೆ ಬಂದಿದ್ದಾರೆಯೇ. ಈ ಬಗ್ಗೆ ಅವರೇ ಉತ್ತರ ಹೇಳಲಿ. ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಅವರೆಲ್ಲರೂ ಬಂದಿದ್ದಾರೆ. ಕುಮಾರಸ್ವಾಮಿ ಒಂದು ಬಾರಿಯೂ ಬಂದಿಲ್ಲ.‌ ನನ್ನ ರಾಜಕೀಯ ಗುರುಗಳು ದೇವೇಗೌಡ ಮತ್ತು ಸಿದ್ದರಾಮಯ್ಯ. ಕುಮಾರಸ್ವಾಮಿ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಎಷ್ಟು ಪ್ರೀತಿ ಇದೆ ಎನ್ನುವುದು ನನಗೆ ಗೊತ್ತಿದೆ ಎಂದರು.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು