ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಾಜ್ ರಾಜೀನಾಮೆಗೆ ಮುಖಂಡರ ಅತೃಪ್ತಿ

Last Updated 18 ಜುಲೈ 2019, 7:09 IST
ಅಕ್ಷರ ಗಾತ್ರ

ಹೊಸಕೋಟೆ:ವಸತಿ ಸಚಿವ ಎಂ.ಟಿ.ಬಿ. ನಾಗಾರಾಜ್ ಅವರು ಒಬ್ಬ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು ತಾಲ್ಲೂಕಿನಲ್ಲಿ ಪಕ್ಷವನ್ನು ಬೆಳೆಸಿದವರು, ಹಾಗಾಗಿ ಅವರು ನೀಡಿರುವ ರಾಜೀನಾಮೆಯನ್ನು ವಾಪಸ್‌ ಪಡೆಯಬೇಕು ಎಂದು ಹಲವು ಮುಖಂಡರು ಆಗ್ರಹಿಸಿದ್ದಾರೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ್ದ ಬೆಂಗಳೂರು ಗ್ರಾಮಾಂತರ ಹಾಗೂ ಹೊಸಕೋಟೆ ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಈ ಒತ್ತಾಯ ಮಾಡಿದರು.

‘ತಾಲ್ಲೂಕಿಗೆ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿ ಯಾವತ್ತೂ ತಮ್ಮ ಹೆಸರಿಗೆ ಕಳಂಕವನ್ನು ತರುವಂತಹ ಕೆಲಸವನ್ನು ಮಾಡಿದವರಲ್ಲ. ಅವರು ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿರುವುದು ಪಕ್ಷದ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ’ ಎಂದಿದ್ದಾರೆ.

‘ತಾಲ್ಲೂಕಿನಲ್ಲಿ ನಮ್ಮದು ಸೈದ್ಧಾಂತಿಕ ಹೋರಾಟವಾಗಿದೆ. ಕಳೆದ 20 ವರ್ಷದಿಂದ ಕಾಂಗ್ರೆಸ್ಸಿಗರ ಬೆಂಬಲವಾಗಿದ್ದ ಶಾಸಕರು ಯಾವುದೋ ಒತ್ತಡಕ್ಕೆ ಮಣಿದು ಪಕ್ಷ ಬಿಡುವ ಯೋಚನೆ ಮಾಡಿದ್ದರೆ ಪರಿಶೀಲಿಸಿ ತಕ್ಷಣ ನಿರ್ಧಾರವನ್ನು ಬದಲಿಸಬೇಕು’ ಎಂದಿದ್ದಾರೆ. ವಿಧಾನ ಸಭೆಯ ಕಲಾಪಕ್ಕೆ ಹಾಜರಾಗಿ ಸಮ್ಮಿಶ್ರ ಸರ್ಕಾರದ ಪರವಾಗಿ ಮತಚಲಾಯಿಸಬೇಕೆಂದು ಅವರು ಆಗ್ರಹಿಸಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಶಾಮಣ್ಣ, ತಾಲ್ಲೂಕು ಅಧ್ಯಕ್ಷ ಎನ್ ರವಿ, ಕೆಪಿಸಿಸಿ ಸದಸ್ಯ ಶಂಕರೇಗೌಡ, ಮುಖಂಡರಾದ ಪ್ರಸಾದ್, ತಿರುವರಂಗ ನಾರಾಯಣ ಸ್ವಾಮಿ, ನಾರಾಯಣ ಗೌಡ, ಖಾಜಿ ಹೊಸಹಳ್ಳಿ ಶಿವಕುಮಾರ್, ನಂಜಪ್ಪ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT