ಚಿರತೆ ದಾಳಿ: 4 ಕುರಿ ಬಲಿ
ದೊಡ್ಡಬಳ್ಳಾಪುರ: ತಾಲ್ಲೂಕಿನ ಮಾಕಳಿ ಬೆಟ್ಟದ ತಪ್ಪಲಿನ ಗ್ರಾಮಸ್ಥರು ಕಳೆದ ಹಲವು ತಿಂಗಳಿನಿಂದ ಚಿರತೆ ಆತಂಕದಿಂದ ಬಸವಳಿದಿದ್ದಾರೆ.
ಭಾನುವಾರ ರಾತ್ರಿ ಸೊಣ್ಣೇನಹಳ್ಳಿ ಗ್ರಾಮಕ್ಕೆ ನುಗ್ಗಿರುವ ಚಿರತೆ, ರೈತ ಚೆನ್ನರಾಯಪ್ಪ ಮನೆಯ ಪಕ್ಕದಲ್ಲಿ ನಿರ್ಮಿಸಿರುವ ಕೊಟ್ಟಿಗೆಯಲ್ಲಿದ್ದ 4 ಕುರಿಯನ್ನು ಕೊಂದು ಹಾಕಿದೆ. ಅಲ್ಲದೆ 8 ಕುರಿಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.
ಕುರಿಗಳ ಶಬ್ದಕ್ಕೆ ರೈತ ಚೆನ್ನರಾಯಪ್ಪ ಹಾಗೂ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ತೆರಳಿದಾಗ, ಚಿರತೆ ಸ್ಥಳದಿಂದ ಪರಾರಿಯಾಗಿದೆ. ಚಿರತೆ ಸೆರೆಹಿಡಿಯಲು ಮುಂದಾಗದ ಅರಣ್ಯ ಇಲಾಖೆ ನಡೆಯಿಂದಾಗಿ ಸಾಕು ಪ್ರಾಣಿಗಳಾದ ಹಸು, ಕುರಿ, ಮೇಕೆ, ನಾಯಿ, ಕೋಳಿಯಂತ ಪ್ರಾಣಿಗಳನ್ನು ಚಿರತೆ ಬಲಿಪಡೆಯುತ್ತಿರುವ ಘಟನೆ ಪದೇ ಪದೇ ನಡೆಯುತ್ತಿದ್ದರು, ರೈತರು ಅಸಹಾಯಕರಾಗಿ ನಷ್ಟವನ್ನು ಅನುಭವಿಸುವಂತಾಗಿದೆ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.