ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓರೆಕೋರೆ ತಿದ್ದಲು ಸಾಹಿತ್ಯ ಮಾಧ್ಯಮವಾಗಲಿ

ವಿಜಯ‍ಪುರ: ಜಿಲ್ಲಾ ಮಟ್ಟದ ಕವಿಗೋಷ್ಠಿ
Last Updated 21 ಮೇ 2019, 13:50 IST
ಅಕ್ಷರ ಗಾತ್ರ

ವಿಜಯಪುರ: ಸೇವೆ ಮಾಡುವ ಮೂಲಕ ಇತಿಹಾಸದ ಪುಟದಲ್ಲಿ ದಾಖಲಾಗಬೇಕು ಎಂದು ಪುರಸಭಾ ಸದಸ್ಯ ಎಂ.ಸತೀಶ್ ಕುಮಾರ್ ಅಭಿಪ್ರಾಯಪಟ್ಟರು.

ಅಯೋಧ್ಯಾ ಶಿವಾಚಾರ್ಯ ವೈಶ್ಯ ನಗರ್ತರ ಮಹಂತಿನ ಮಠ ಸಭಾಂಗಣದಲ್ಲಿ ರಾಜ್ಯ ಸಮಾನ ಮನಸ್ಕರ ಕ್ರೀಡೆ, ಸಾಹಿತ್ಯ, ಕಲೆ, ಸಂಗೀತ ಸಮಾಜ ಸ್ಪಂದನ ಸೇವಾ ಒಕ್ಕೂಟ, ಸ್ನೇಹ ಸಿಂಚನ ಗೆಳೆಯರ ಬಳಗ, ವೀರೇಶ ಚಾರಿಟೆಬಲ್ ಟ್ರಸ್ಟ್‌ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜದ ತಲ್ಲಣಗಳನ್ನು ಕವನದ ಮೂಲಕ ಕವಿಗಳು ಕಟ್ಟಿಕೊಡುವ ಪ್ರಯತ್ನ ಮಾಡಬೇಕಿದೆ. ಜಾತಿ, ಮತ, ಧರ್ಮ ಮೀರುವ ಶಕ್ತಿ ಕವಿತೆಗಳಿಗೆ ಇದೆ. ಈ ಹಾದಿಯಲ್ಲಿ ಸಾಗಬೇಕೆಂದು ಅಭಿಪ್ರಾಯಪಟ್ಟರು.

ಪುರಸಭಾ ಸದಸ್ಯ ಎಸ್.ಭಾಸ್ಕರ್ ಮಾತನಾಡಿ, ಕಾವ್ಯದಲ್ಲಿ ಛಂದಸ್ಸು, ಅಲಂಕಾರ ಪರಿಚಯ ಇರಬೇಕು. ಕಲೆ ಮತ್ತು ಸಾಹಿತ್ಯ ನಿಂತ ನೀರಾಗಬಾರದು ಎಂದು ಹೇಳಿದರು.

ಸಂಗೀತ ಸಮಾಜ ಸ್ಪಂದನ ಸೇವಾ ಒಕ್ಕೂಟದ ಸಂಚಾಲಕ ಮ.ಚಿ.ಕೃಷ್ಣ ಮಾತನಾಡಿ, ಸಮಾಜದ ಓರೆಕೋರೆ ತಿದ್ದಲು ಸಾಹಿತ್ಯ ಮಾಧ್ಯಮವಾಗಬೇಕು. ಕನ್ನಡ ಸಾಹಿತ್ಯ ಲೋಕಕ್ಕೆ ಸಾಹಿತಿ ಸಿ.ಎಂ.ವೀರಣ್ಣ ವಿರಚಿತ ‘ಶರಣದರ್ಶನ’, ‘ಬಸವ ದರ್ಶನ’ ಕೃತಿಗಳು ಅಮೂಲ್ಯ ಕೊಡುಗೆ ನೀಡಿವೆ ಎಂದು ತಿಳಿಸಿದರು. ‌

ಕವಿ ಮ.ಸುರೇಶ್‌ಬಾಬು ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಎಚ್.ಎಸ್.ರುದ್ರೇಶ್‌ಮೂರ್ತಿ, ಸಾಕ್ಷಿಮುರುಗನ್ ಸೇವಾ ಟ್ರಸ್ಟ್‌ನ ಅಧ್ಯಕ್ಷ ಚಿಕ್ಕವೀರಭದ್ರಪ್ಪ, ವೀರೇಶ್ವರ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ವಿ.ಅನಿಲ್‌ಕುಮಾರ್, ಕಾರ್ಯದರ್ಶಿ ವಿಮಲಾಂ, ಲಿಂಗರಾಜು, ಅಕ್ಕನ ಬಳಗದ ಉಪಾಧ್ಯಕ್ಷೆ ಕಾಮಾಕ್ಷಮ್ಮ, ಎಸ್.ಪಿ.ಕೃಷ್ಣಾನಂದ್, ಮಾತನಾಡಿದರು. ಅಕ್ಕನ ಬಳಗದ ಸದಸ್ಯರಿಂದ ವಚನ ಗಾಯನ ನಡೆಯಿತು.

ಆವತಿಯ ನಿವೃತ್ತ ಶಿಕ್ಷಕ ಎಚ್.ಗವಿಸಿದ್ಧಯ್ಯ, ಹಾರಗದ್ದೆ ಸತ್ಯನಾರಾಯಣ್, ದೊಡ್ಡಬಳ್ಳಾಪುರದ ಶಕೀಲಾಬಾನು, ಎ.ಲಿಂಗರಾಜು, ಚಿದಾನಂದ ಬಿರಾದಾರ್, ಭಾರತಿ ವಿಶ್ವನಾಥ್, ಭಾಗ್ಯಾಶಾಂ, ನಾಗರಾಜ ಅದ್ವೈತಿ, ಚಂದ್ರಶೇಖರ ಹಡಪದ್, ಶ್ರೀನಿವಾಸಮೂರ್ತಿ, ಮಾಗಡಿ ವಸಂತ ಸುರೇಂದ್ರನಾಥ್, ಚಿಕ್ಕಬಳ್ಳಾಪುರದ ರೂಪಾ ರಾಘವೇಂದ್ರ, ಮುನಿರಾಜು ಸೀಗೆಹಳ್ಳಿ, ಕೊಯಿರಾ ಕೃಷ್ಣಮೂರ್ತಿ, ಭಾರತಿ ಜಗದೀಶ್, ಅನ್ನಪೂರ್ಣ ಕೃಷ್ಣಕುಮಾರ್ ಕವನ ವಾಚಿಸಿದರು.

ನಿವೃತ್ತ ಪೌರಾಯುಕ್ತ ವಿ.ಶಿವಕುಮಾರ್, ಎಂ.ಕೃಷ್ಣಪ್ಪದಾಸ, ವಿ.ಆರ್.ಶ್ರೀನಾಥ್, ಅರಿವಿನ ಮನೆಯ ಭ್ರಮರಾ, ಮಹಾದೇವಮ್ಮ, ಮಹಂತಿನಮಠದ ಕಾರ್ಯದರ್ಶಿ ವಿ.ವಿಶ್ವನಾಥ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT