ಪೂಜೇನಅಗ್ರಹಾರ (ಹೊಸಕೋಟೆ): ಅಂತರಂಗದ ಶುದ್ಧಿಯಾಗದ ಹೊರತು ದೇವಾಲಯಕ್ಕೆ ಹೋದರೆ ಏನು ಪ್ರಯೋಜನ?. ಕಲ್ಲು ಮೂರ್ತಿಗಳಿಗೆ ಧೂಪ ದೀಪ ಹಚ್ಚಿ, ನಿಜ ಕಂಡು ಅನಿಷ್ಠ ಎಂದರೆ ಮನುಷ್ಯನ ಜೀವನಕ್ಕೆ ಎಲ್ಲಿ ಸಾರ್ಥಕತೆ ಸಿಗುತ್ತೆ ಎಂದು ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಮಹಾಸ್ವಾಮಿ ಹೇಳಿದರು.

ತಾಲ್ಲೂಕಿನ ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಜೆನ ಅಗ್ರಹಾರ ಗ್ರಾಮದಲ್ಲಿ ಕಲಾನಾಥೆಶ್ವರ, ವೇಣುಗೋಪಾಲ, ನಿಮಿಷಾಂಭದೇವಿ ದೇವಾಲಯ ಟ್ರಸ್ಟ್ ವತಿಯಿಂದ ನೂತನ ಕಲಾನಾಥೆಶ್ವರ, ವೇಣುಗೋಪಾಲ, ನಿಮಿಷಾಂಭದೇವಿ ಶಿಲಾ ವಿಗ್ರಹ ಪ್ರತಿಷ್ಠಾಪನೆ, ನೂತನ ವಿಮಾನ ಗೋಪುರ ಶಿಕರ ಕಳಶ ಪ್ರತಿಷ್ಠಾಪನೆ ಸಮಾರಂಭದಲ್ಲಿ ಮಾತನಾಡಿದರು.

ಜಗದ ನಿಯಮವೋ ಅಥವಾ ಮನುಷ್ಯ ಸೃಷ್ಟಿಸಿಕೊಂಡ ಪದ್ಧತಿಯೋ ತಿಳಿಯದು, ದೇವಾಲಯದಲ್ಲಿ ದೇವರ ವಾಹನ ಎಂದು ಹೇಳುವ ಕಲ್ಲಿನ ನಂದಿ, ಮೂಷಿಕ(ಇಲಿ), ಕಾಗೆ ಮೂರ್ತಿಗಳಿಗೆ ಧೂಪ. ದೀಪ ಹಚ್ಚುವವರು, ಅದೇ ಜೀವಂತ ಕಂಡರೆ ಹೊಡೆಯುತ್ತಾರೆ. ಇಲ್ಲವೇ ಅನಿಷ್ಠ ಎಂದು ಭಾವಿಸುತ್ತಾರೆ ಎಂದು ಹೇಳಿದರು.

‘ಶನಿಮಹಾತ್ಮನ ವಾಹನ ಕಾಗೆಯನ್ನು ದೇವಸ್ಥಾನಕ್ಕೆ ಹೋದಾಗ ಪವಿತ್ರವಾಗಿ ನೋಡುತ್ತೇವೆ. ಅದೇ ನಮ್ಮ ಮನೆ ಒಳಗೆ ಬಂದರೆ ಜ್ಯೋತಿಷಿ ಬಳಿ ತೆರಳಿ ಆರು ತಿಂಗಳು ಮನೆ ಖಾಲಿ ಮಾಡಿ, ಮನೆ ಶುದ್ಧಿ ಮಾಡಿಸಿಕೊಳ್ಳುವ ಮನುಷ್ಯನ ದ್ವಂದ್ವ ಮನಸ್ಥಿಗೆ ಏನೆಂದು ಹೇಳಬೇಕು’ ಎಂದರು.

ಶಾಸಕ ಶರತ್ ಬಚ್ಚೇಗೌಡ, ‘ನಮ್ಮ ಪರಂಪರೆಯೇ ನಮಗೆ ಜಾತ್ಯತೀತ ಮನೋಧರ್ಮ ಬೆಳೆಸಿದೆ. ಕೂಡಿಟ್ಟ ಕಾಸು ನನಗಲ್ಲ, ಸಮಾಜಕ್ಕೆ ನಾನೇನು ಬಿಟ್ಟು ಹೋಗುತ್ತಿದ್ದೇನೆ ಎಂಬ ಆಲೋಚನೆ ಇಂದಿನ ಯುವ ಪೀಳಿಗೆಯಲ್ಲಿ ಮೂಡಬೇಕಿದೆ’ ಎಂದರು.

ರಾಮಕೃಷ್ಣ ಮಠ ಬಸವನಗುಡಿ ಶಾಖೆಯ ಸೌಖ್ಯನಂದ ಮಹಾರಾಜ್ ಸ್ವಾಮಿ, ಮನುಷ್ಯನಲ್ಲಿ ದಾನಕ್ಕಿಂತ ತ್ಯಾಗ ಗುಣ ಇದ್ದಾಗ ಮಾತ್ರವೇ ಆತನ ಹೆಸರು ಚಿರಸ್ಥಾಯಿಯಾಗಿ ಇರಲು ಸಾಧ್ಯ. ದೇಶದಲ್ಲಿ ದೇವಸ್ಥಾನ ಕಟ್ಟುವುದು ದೊಡ್ಡ ಕೆಲಸ ಏನಲ್ಲ. ಆದರೆ ನಮ್ಮ ಸಂಸ್ಕೃತಿ ಸಂಸ್ಕಾರ ಬೆಳೆಸುವ ಕೇಂದ್ರವಾಗಿ ಅವುಗಳನ್ನು ಉಳಿಸಿಕೊಳ್ಳುವುದು ಕಷ್ಟದ ಕೆಲಸವಾಗುತ್ತಿದೆ ಎಂದು ಹೇಳಿದರು.

ನಾಗಲಾಪುರ ಸಂಸ್ಥಾನ ಮಠದ ಪೀಠಾಧಿಪತಿ ತೆಜೇಶಲಿಂಗ ಶಿವಾಚಾರ್ಯಸ್ವಾಮೀಜಿ, ಮನಸ್ಸಿನ ಕೊಳೆ ಶುಚಿ ಮತ್ತು ಅಂತರಂಗ ಶುದ್ಧಿಗೆ ದೇವ ಮಂದಿರಗಳು ಬೇಕು ಎಂದರು.

ದೇಗುಲ ನಿರ್ಮಾಣಕ್ಕೆ ದೇಣಿಗೆ ನೀಡಿದ 192 ಜನರನ್ನು ಸ್ಮರಿಸಲಾಯಿತು.

ದೇವಸ್ಥಾನದ ಪ್ರದಾನ ಅರ್ಚಕ ಚಂದ್ರಶೇಖರ್ ಶಾಸ್ತ್ರಿ, ಮೂರ್ತಿಯ ಶಿಲ್ಪಿ ಶಿವಾರು ಪಟ್ಟಣ ನರೇಂದ್ರನಾಥ ಭಟ್ಟಾಚಾರ್ಯ, ದೇವಸ್ಥಾನ ಸಮಿತಿಯ ಗೌರವಧ್ಯಕ್ಷ ಭಗವಂತಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಮುನೇಗೌಡ, ಬಮುಲ್ ನಿರ್ದೇಶಕರಾದ ಬಿ.ವಿ. ಸತೀಶ್ ಗೌಡ, ಕೊರಳೂರು ಸುರೇಶ್, ಬಚ್ಚೇಗೌಡ, ಗೋಪಾಲ್ ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.