ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿವಂತ ರೈತರಿಗೆ ತಿದ್ದುಪಡಿ ಕಾಯ್ದೆ ಅರ್ಥ ಆಗಿಲ್ಲ: ಎಂ.ಟಿ.ಬಿ.ನಾಗರಾಜ್

Last Updated 29 ಸೆಪ್ಟೆಂಬರ್ 2020, 6:37 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದು ರೈತರ ಹಿತಕ್ಕಾಗಿ ಬುದ್ಧವಂತ ರೈತರಿಗೆ ಇದು ಅರ್ಥವಾಗಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಟಿ.ಬಿ.ನಾಗರಾಜ್ ಹೇಳಿದರು.

ಇಲ್ಲಿನ ಹಳೆ ಬಸ್ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ‘ಪ್ರಸ್ತುತ ಗ್ರಾಮಾಂತರ ಜಿಲ್ಲೆಯಲ್ಲಿ ಭೂ ಸುಧಾರಣೆಗೆ ಸಂಬಂಧಿಸಿದಂತೆ 80 ಸಾವಿರ 79ಎ ಮತ್ತು ಬಿ ಪ್ರಕರಣಗಳಿವೆ. ನೂರಾರು ರೈತರು ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿ ಕಚೇರಿಗೆ ಅಲೆಯುತ್ತಿದ್ದಾರೆ. 79 ಎ.ಬಿ. ಒಂದು ಪ್ರಕರಣಕ್ಕೆ ಪುರಸಭೆ, ನಗರಸಭೆ, ಪಟ್ಟಣದ ಪಂಚಾಯಿತಿ ವ್ಯಾಪ್ತಿಯ ಪ್ರಕರಣಗಳಿದ್ದರೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಲಂಚ ನೀಡಬೇಕು ತಿದ್ದುಪಡಿ ಕಾಯ್ದೆಯಿಂದ ಲಂಚಕ್ಕೆ ಅವಕಾಶವಿಲ್ಲ. 79 ಎ.ಬಿ. ಎಂಬುದು ಒಂದು ದೊಡ್ಡ ದಂಧೆಯಾಗಿದೆ ಎಂದು ಹೇಳಿದರು.

ರೈತರಿಂದ ನೇರವಾಗಿ ಭೂಮಿ ಖರೀದಿಸುವುದರಿಂದ ‍ಮದ್ಯವರ್ತಿಗಳ ಹಾವಳಿ ತಪ್ಪಲಿದೆ. ಕೆ.ಐ.ಡಿ.ಬಿ ಮೂಲಕ ಈ ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ರೈತರಿಂದ ಭೂ ಸ್ವಾಧೀನ ಪಡೆದುಕೊಂಡು ಇಷ್ಟೇ ಪರಿಹಾರ ನೀಡುವುದಾಗಿ ತಿಳಿಸಿ ಸ್ವಾಧೀನ ಪಡೆದುಕೊಂಡ ಭೂಮಿಗೆ ಬರೀ ₹ 40 ಲಕ್ಷ, 70ಲಕ್ಷ ನೀಡಿ ರೈತರ ಮೂಗಿಗೆ ತುಪ್ಪ ಸವರುತ್ತಿತ್ತು. ಇದೇ ಇಲಾಖೆ ಸ್ವಾಧೀನಪಡಿಸಿಕೊಂಡ ರೈತರ ಭೂಮಿಯನ್ನು ಖಾಸಗಿ ಬಂಡವಾಳ ಕೈಗಾರಿಕೆಗಳಿಗೆ ಕೋಟಿ ಲೆಕ್ಕದಲ್ಲಿ ಮಾರಾಟ ಮಾಡುತ್ತದೆ. ಇದನ್ನು ತಪ್ಪಿಸಿ ನೇರವಾಗಿ ರೈತರಿಂದ ಖರೀದಿಸಿದರೆ ರೈತರಿಗೆ ಅನುಕೂಲ. ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ಸರ್ಕಾರ ನೀಡಿದ್ದು ಪ್ರತಿ ಎಕರೆಗೆ ₹ 5ರಿಂದ 8ಲಕ್ಷ, ಪ್ರಸ್ತುತ ಅಲ್ಲಿನ ಜಮೀನಗಳ ಮೌಲ್ಯವೆಷ್ಟು ಇದನ್ನು ರೈತರು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಇನ್ನೆರಡು ತಿಂಗಳು ಕಳೆದರೆ ತಿದ್ದುಪಡಿ ಕಾಯ್ದೆಯ ಸಾಧಕ ಭಾಧಕಗಳು ಗೊತ್ತಾಗಲಿದೆ ಎಂದು ಹೇಳಿದರು.

ಕೊಟ್ ಸುದ್ಧಿ: ವಿಜಯೇಂದ್ರ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂಬುದು ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT