ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಮುತ್ಯಾಲಮ್ಮ ದೇವಿ ರಥೋತ್ಸವ ಸಂಭ್ರಮ

Last Updated 27 ಏಪ್ರಿಲ್ 2022, 4:33 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ನಗರದಲ್ಲಿ ಮಂಗಳವಾರ ಗ್ರಾಮ ದೇವತೆ ಮುತ್ಯಾಲಮ್ಮ ದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ 10.30ಕ್ಕೆ ದೇವಾಲಯ ದಿಂದ ಹೊರಟ ದೇವಿಯ ರಥೋತ್ಸವ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರೋಜಿಪುರ ತಲುಪಿತು.

ಮೆರವಣಿಗೆಯಲ್ಲಿ ಮಂಗಳವಾದ್ಯಗಳೊಂದಿಗೆ ಭಾಗವಹಿಸಿದ್ದ ಡೊಳ್ಳು ಕುಣಿತ, ಪೂಜಾ ಕುಣಿತ, ಗಾರುಡಿ ಗೊಂಬೆ, ವೀರಗಾಸೆ ಕಲಾ ತಂಡಗಳು ಉತ್ಸವಕ್ಕೆ ಮೆರುಗು ನೀಡಿದ್ದವು. ಮುತ್ಯಾಲಮ್ಮ ಸೇವಾ ದತ್ತಿ ಜಾತ್ರಾ ಮಹೋತ್ಸವದ ನೇತೃತ್ವವಹಿಸಿತ್ತು.

ಜಾತ್ರೆ ಅಂಗವಾಗಿ ದೇವಾಲಯದ ಸುತ್ತಲಿನ ಗ್ರಾಮಗಳಾದ ದರ್ಗಾಜೋಗಿಹಳ್ಳಿ, ರೋಜಿಪುರ, ಕುರುಬರಹಳ್ಳಿ, ನಾಗಸಂದ್ರ, ಕೊಡಿಗೇಹಳ್ಳಿ ಸೇರಿದಂತೆ ನಗರ ಹಾಗೂ ತಾಲ್ಲೂಕಿನ ಗ್ರಾಮಸ್ಥರು ಹೊಂಬಾಳೆಯಲ್ಲಿ ಸಿಂಗರಿಸಿಕೊಂಡು ಬಂದಿದ್ದ ವಿವಿಧ ಮಾದರಿಯ ಆರತಿಗಳನ್ನು ದೇವಿಗೆ ಬೆಳಗಿದರು.

ನಾಗಸಂದ್ರ, ದರ್ಗಾಜೋಗಿಹಳ್ಳಿ, ರೋಜಿಪುರ ಗ್ರಾಮಗಳಿಂದ ಮಾತ್ರ ಜಾತ್ರೆಗೆ ವಿಶೇಷ ರಥಗಳೊಂದಿಗೆ ಮಹಿಳೆ ಯರು ಆರತಿಗಳೊಂದಿಗೆ ಆಗಮಿಸಿ ದ್ದರು. ಮುತ್ಯಾಲಮ್ಮ ದೇಗುಲದ ಸಮೀಪವಿರುವ ನವಗ್ರಹ ದೇವಾಲಯ ಹಾಗೂ ದೊಡ್ಡಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಏ. 27ರಂದು ಹಗಲು ಪರಿಷೆ ನಡೆಯಲಿದೆ. ಕೋವಿಡ್‌ ಪರಿಣಾಮ ಎರಡು ವರ್ಷಗಳಿಂದ ಜಾತ್ರೆ ನಡೆದಿರಲಿಲ್ಲ. ಹೀಗಾಗಿ, ಈ ಬಾರಿ ಜಾತ್ರೆಗೆ ಜನಸಾಗರವೇ ಹರಿದು ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT