ಭಾನುವಾರ, ಆಗಸ್ಟ್ 14, 2022
20 °C
ಹೊಸಕೋಟೆ: ಕೆಂಪೇಗೌಡರ ಜಯಂತಿ ಆಚರಣೆ

ನಾಡ‍ಪ್ರಭು ಕೊಡುಗೆ ಅನನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ‘ರಾಜ್ಯದಲ್ಲಿ ಹಲವಾರು ರಾಜರು ನಿರ್ಮಾಣ ಮಾಡಿದ ರಾಜಧಾನಿಗಳು ಅವನತಿ ಕಂಡಿವೆ. ಆದರೆ, ಕೆಂಪೇಗೌಡರು ಬೆಂಗಳೂರು ನಿರ್ಮಿಸುವ ಮೂಲಕ ವಿಶ್ವ ಪ್ರಸಿದ್ಧ ನಗರವನ್ನಾಗಿಸಿದ್ದಾರೆ’ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.  

ನಗರದ ಹಳೆಯ ಬಸ್ ನಿಲ್ದಾಣದ ಆವರಣದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದಿಂದ ಬುಧವಾರ ನಡೆದ ನಾಡಪ್ರಭು ಕೆಂಪೇ ಗೌಡರ ಜಯಂತಿ ಕಾರ್ಯ ಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಸಾಮಾನ್ಯವಾಗಿ ರಾಜ್ಯಗಳನ್ನು ನದಿ ಪಾತ್ರದಲ್ಲಿ ಕಟ್ಟಲಾಗುತ್ತದೆ.  ಕೆಂಪೇಗೌಡರು ಬೆಂಗಳೂರನ್ನು 550 ವರ್ಷಗಳ ಹಿಂದೆ ನಿರ್ಮಾಣ ಮಾಡುವ ವೇಳೆ ದೂರದೃಷ್ಟಿ ಹೊಂದಿದ್ದರು. ಸಾವಿರಾರು ಕೆರೆಗಳು, ವ್ಯಾಪಾರ ವಹಿವಾಟಿಗೆ ವಿಶೇಷವಾದ ಪೇಟೆಗಳು ನಿರ್ಮಿಸಿದ್ದು ಅವರ ಹೆಗ್ಗಳಿಕೆ ಎಂದರು.

ಬೆಂಗಳೂರು ಮಾದರಿ ಯಲ್ಲಿಯೇ ಹೊಸಕೋಟೆ ತಾಲ್ಲೂಕನ್ನು  ಅಭಿವೃದ್ಧಿಪಡಿಸಿ  ಒಕ್ಕಲಿಗರ ಜೊತೆ ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಮಾತ ನಾಡಿ, ಒಕ್ಕಲಿಗ ಸಮಾಜ ಕನ್ನಡ ನಾಡಿಗೆ ಹಲವಾರು ಕೊಡುಗೆಗಳನ್ನು ನೀಡಿದೆ. ಒಕ್ಕಲಿಗರು ಎಂದಿಗೂ ತಮ್ಮ ಒಗ್ಗಟ್ಟನ್ನು ಬಿಡಬಾರದು ಎಂದ  ಸಾಮಾಜಿಕ ಮತ್ತು  ರಾಜಕೀಯವಾಗಿ ಧ್ವನಿ ಎತ್ತಿದ್ದರಿಂದ ಜನಾಂಗದ ಅಭಿವೃದ್ಧಿ ನಿಗಮ ರಚನೆಯಾಗಿದೆ. ಶೋಷಿತರಿಗೆ ಸಹಾಯ ಮಾಡುವ ಮೂಲಕ ಹಾಗೂ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಒಕ್ಕಲಿಗ ಜನಾಂಗ ರೈತರಾಗಿ ಸಮಾಜದಲ್ಲಿ ಮನ್ನಣೆ ಪಡೆದಿದೆ. ನಾಲ್ಕನೇ ವರ್ಗವಾದ ಶೂದ್ರ ಜನಾಂಗವಾಗಿ ಗುರುತಿಸಿಕೊಂಡಿದ್ದು ಇತ್ತೀಚಿನ ದಿನಗಳಲ್ಲಿ ಸಮಾನತೆ ಕಾಣುತ್ತಿದೆ ಎಂದರು.

ಇತ್ತೀಚೆಗೆ ರಾಷ್ಟ್ರಕವಿ ಕುವೆಂಪು, ಡಾ.ಬಿ.ಆರ್‌. ಅಂಬೇಡ್ಕರ್, ನಾರಾಯಣ ಗುರು ಸೇರಿದಂತೆ ಹಲವು ಮಹನೀಯರಿಗೆ ಅವಮಾನ ಮಾಡುವ ಸಂಸ್ಕೃತಿ ಬೆಳೆಯುತ್ತಿದೆ. ಇದು ಸರಿಯಾದ ಬೆಳವಣಿಗೆಯಲ್ಲ. ಇದನ್ನು ಸರಿಪಡಿಸಲು ಒಗ್ಗಟ್ಟಾಗಿ ರಾಜಕೀಯ ಶಕ್ತಿಯನ್ನು ಬೆಳೆಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಸಂಸದ ಬಿ.ಎನ್‌. ಬಚ್ಚೇಗೌಡ ಮಾತನಾಡಿ, ಹೊಸಕೋಟೆ ಭಾಗದಲ್ಲಿ ಶ್ರೀಗಳು ಶಾಖಾ ಮಠ ನಿರ್ಮಿಸಬೇಕು. ಮಠ ಹಾಗೂ ವಿದ್ಯಾರ್ಜನೆಗೆ ಅಗತ್ಯವಿರುವ ಜಾಗದ ವ್ಯವಸ್ಥೆಯನ್ನು ತಾಲ್ಲೂಕಿನ ಒಕ್ಕಲಿಗ ಸಮುದಾಯದಿಂದ ಮಾಡಿಕೊಡ ಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ. ಸುರೇಶ್, ಕುಮಾರ ಚಂದ್ರಶೇಖರ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ  ಮಾತನಾಡಿದರು. ಒಕ್ಕಲಿಗರ ಸಂಘದ ನಿರ್ದೇಶಕರಾದ ರಾಜಶೇಖರ್ ಗೌಡ, ಕೋಡಿಹಳ್ಳಿ ಸುರೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೋಡಿಹಳ್ಳಿ ಸೊಣ್ಣಪ್ಪ, ಬಮೂಲ್ ನಿರ್ದೇಶಕ ಹುಲ್ಲೂರು ಸಿ. ಮಂಜುನಾಥ್, ವಿಧಾನ ಪರಿಷತ್ ಸದಸ್ಯ ರವಿ ಹಾಜರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಸುಂಕ ವಸೂಲಾತಿ ಕೇಂದ್ರದಿಂದ ಕೆಇಬಿ ವೃತ್ತದವರೆಗೆ ಬೈಕ್ ಮೆರವಣಿಗೆ ನಡೆಯಿತು. ಕೆಇಬಿ ವೃತ್ತದಿಂದ ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ 80ಕ್ಕೂ ಹೆಚ್ಚು ಕೆಂಪೇಗೌಡರ ಭಾವಚಿತ್ರ ಹೊತ್ತ ಬೆಳ್ಳಿ ರಥಗಳು, ವೀರಗಾಸೆ, ಡೊಳ್ಳುಕುಣಿತದ ತಂಡಗಳ ಮೆರವಣಿಗೆ ನಡೆಯಿತು. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 95ರಷ್ಟು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.