ಸೋಮವಾರ, ಫೆಬ್ರವರಿ 17, 2020
28 °C

ನಿಖಿಲ್‌ ವಿವಾಹ: ಜಾನಪದ ಲೋಕದ ಬಳಿ ಸ್ಥಳ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಶಾಸಕ ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್‌ ವಿವಾಹಕ್ಕಾಗಿ ಚನ್ನಪಟ್ಟಣ–ರಾಮನಗರ ನಡುವೆ ಜಾಗದ ಹುಡಕಾಟ ನಡೆದಿದೆ. ಜಾನಪದ ಲೋಕದ ಬಳಿ 54 ಎಕರೆ ಜಮೀನನ್ನು ಎಚ್‌ಡಿಕೆ ಪರಿಶೀಲಿಸಿದ್ದು, ಅದರ ಮಾಲೀಕರೊಂದಿಗೆ ಔಪಚಾರಿಕ ಮಾತುಕತೆಯನ್ನೂ ನಡೆಸಿದ್ದಾರೆ.

ಈ ಜಾಗವು ರಾಮನಗರದಿಂದ 5 ಕಿ.ಮೀ. ಹಾಗೂ ಚನ್ನಪಟ್ಟಣದಿಂದ 8 ಕಿ.ಮೀ. ದೂರದಲ್ಲಿ ಇದೆ. ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಇದೆ. ಇಲ್ಲಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್‌ಗೆ ಸೇರಿದ 22 ಎಕರೆ, ಉದ್ಯಮಿಗೆ ಸೇರಿದ 23 ಎಕರೆಯೂ ಸೇರಿದಂತೆ ಒಟ್ಟು 54 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ.

ಈ ಸ್ಥಳ ಅಂತಿಮಗೊಂಡಲ್ಲಿ ಇಲ್ಲಿಯೇ ಅದ್ಧೂರಿ ಸೆಟ್‌ ಹಾಕಿ ನಿಖಿಲ್‌–ರೇವತಿ ವಿವಾಹ ನಡೆಸಲು ಎಚ್‌ಡಿಕೆ ನಿರ್ಧರಿಸಿದ್ದಾರೆ. ಮಂಟಪ, ಭೋಜನಾಲಯ, ವಿಐಪಿ ಲಾಂಜ್‌, ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮೊದಲಾದ ಸೌಕರ್ಯಗಳು ನಿರ್ಮಾಣ ಆಗಲಿವೆ. ಇದೇ 10ರಂದು ನಿಖಿಲ್‌ ನಿಶ್ಚಿತಾರ್ಥ ನಡೆಯಲಿದ್ದು, ಬಳಿಕ ಎಚ್‌ಡಿಕೆ ದಂಪತಿ ಸ್ಥಳವನ್ನು ಅಂತಿಮಗೊಳಿಸಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು