ಗುರುವಾರ , ಮಾರ್ಚ್ 4, 2021
22 °C

ಬನ್ನೇರುಘಟ್ಟ: ಆನ್‌ಲೈನ್ ಟಿಕೆಟ್ ಬುಕಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕೋವಿಡ್‌ ಹರಡುವಿಕೆ ತಡೆಗಟ್ಟುವ ಸಲುವಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ. ಹೊಸ ವರ್ಷ ಮತ್ತು ರಜಾ ದಿನಗಳ ಹಿನ್ನೆಲೆಯಲ್ಲಿ ಜನದಟ್ಟಣೆ ತಡೆಯುವ ಸಲುವಾಗಿ ಆನ್‌ಲೈನ್‌ ಮೂಲಕ ಮುಂಗಡ ಟಿಕೆಟ್‌ ಕಾಯ್ಡಿರಿಸಲು ಪ್ರವಾಸಿಗರು ಆದ್ಯತೆ ನೀಡಬೇಕು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್‌ಸಿಂಗ್‌ ತಿಳಿಸಿದ್ದಾರೆ.

www.bannerghattabio*ogica*park.org ವೆಬ್‌ಸೈಟ್‌ ಮೂಲಕ ಮುಂಗಡ ಟಿಕೆಟ್‌ ಕಾಯ್ದಿರಿಸಿಕೊಳ್ಳಲು ಅವಕಾಶವಿದೆ. ಆನ್‌ಲೈನ್‌ ಮೂಲಕ ಟಿಕೆಟ್‌ ಕಾಯ್ದಿರಿಸಿದರೆ ಉದ್ಯಾನ ಬಳಿ ನೂಕುನುಗ್ಗಲು ಮತ್ತು ಜನದಟ್ಟಣೆ  ತಡೆಯಲು ಸಾಧ್ಯ. ಜನವರಿ 3ರವರೆಗೂ ಉದ್ಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆಯಿದೆ.

ಪ್ರವಾಸಿಗರು ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಉದ್ಯಾನ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು. ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಬ್ಯಾರಿಕೇಡ್‌ಗಳನ್ನು ಮುಟ್ಟಬಾರದು. ಕೈಗಳನ್ನು ಸ್ವಚ್ಛಗೊಳಿಸಬೇಕು, ತಾಪಮಾನ ಪರಿಶೀಲನೆಗೆ ಸಹಕರಿಸಬೇಕು. ಮಾರ್ಗಸೂಚಿ ಫಲಕಗಳಲ್ಲಿ ಸೂಚಿಸಿರುವ ನಿರ್ದೇಶನ ಪಾಲಿಸಬೇಕು. ಉದ್ಯಾನದಲ್ಲಿ ಉಗುಳಬಾರದು, ಪ್ರಾಣಿಗಳಿಗೆ ಕೀಟಲೆ ಮಾಡಬಾರದು ಸೇರಿದಂತೆ ಹಲವು ನಿಯಮ ಸೂಚಿಸಲಾಗಿದೆ ಎಂದು ತಿಳಿಸಿದರು.

ಪ್ರವಾಸಿಗರಿಗೆ ನಿಯಮ

* ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಬ್ಯಾರಿಕೇಡ್‌ಗಳನ್ನು ಮುಟ್ಟಬಾರದು.

* ಕೈಗಳನ್ನು ಸ್ವಚ್ಛಗೊಳಿಸಬೇಕು

* ತಾಪಮಾನ ಪರಿಶೀಲನೆಗೆ ಸಹಕರಿಸಬೇಕು

* ಮಾರ್ಗಸೂಚಿ ಫಲಕಗಳಲ್ಲಿ ಸೂಚಿಸಿರುವ ನಿರ್ದೇಶನ ಪಾಲಿಸಬೇಕು

* ಉದ್ಯಾನದಲ್ಲಿ ಉಗುಳಬಾರದು

* ಪ್ರಾಣಿಗಳಿಗೆ ಕೀಟಲೆ ಮಾಡಬಾರದು 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು