ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದೇ ಪಾಸ್ಪೋರ್ಟ್ ಮತ್ತು ವೀಸಾವನ್ನು ಇಬ್ಬರು ವ್ಯಕ್ತಿಗಳು ಬಳಸಿಕೊಂಡು ಇಂಗ್ಲೆಂಡ್ಗೆ ಪ್ರಯಾಣಿಸಲು ಯತ್ನಿಸಿದ ಘಟನೆ ಪತ್ತೆಯಾಗಿದೆ.

ಈ ಸಂಬಂಧ ಶ್ರೀಲಂಕಾ ಪ್ರಜೆ ಕಾಂದ್ಯ ರಾಜಗೋಪಾಲ್ ಅವರನ್ನು ವಿಮಾನ ನಿಲ್ದಾಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ರಾಜಗೋಪಾಲ್ ತನ್ನ ಪಾಸ್ಪೋರ್ಟ್ ಮತ್ತು ವೀಸಾವನ್ನು ತನ್ನ ಸ್ನೇಹಿತ ಶಾರುಷನ್ ಕುನಸೇಕರನ್ ಅವರಿಗೆ ನೀಡಿ ಅವರನ್ನು ಮೊದಲು ಇಂಗ್ಲೆಂಡ್ಗೆ ಕಳುಹಿಸಿದ್ದಾರೆ. ನಂತರ ತನ್ನ ಪಾಸ್ಪೋರ್ಟ್ ಕಳೆದು ಹೋಯಿತೆಂದು ಹೇಳಿ ಹೊಸ ದಾಖಲೆ ಪಡೆಯಲು ಯತ್ನಿಸಿದ್ದಾರೆ.

ತಪಾಸಣೆ ಸಮಯದಲ್ಲಿ ಅನುಮಾನ ಉಂಟಾಗಿ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ. ಇಬ್ಬರು ವ್ಯಕ್ತಿಗಳು ಒಂದೇ ದಾಖಲೆ ಬಳಸಿಕೊಂಡು ಹೇಗೆ ಪ್ರಯಾಣಿಸಲು ಯತ್ನಿಸಿದರು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.