ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಹೆಚ್ಚು ಪೆರಿಷಬಲ್ ಪದಾರ್ಥಗಳ ಸರಕು ಸಾಗಣೆ: ಕೆಂಪೇಗೌಡ ವಿಮಾನ ನಿಲ್ದಾಣ ನಂ.1

Last Updated 12 ಅಕ್ಟೋಬರ್ 2021, 3:09 IST
ಅಕ್ಷರ ಗಾತ್ರ

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅತಿಹೆಚ್ಚು ಪೆರಿಷಬಲ್ ಪದಾರ್ಥಗಳ ಸರಕು ಸಾಗಣೆ ಮಾಡಿದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಟಾರ್ಟಜಿ ಆಂಡ್ ಡೆವಲಪ್‌ಮೆಂಟ್ ಮುಖ್ಯಾಧಿಕಾರಿ ಸಾತ್ಯಕಿ ರಘುನಾಥ್ ತಿಳಿಸಿದ್ದಾರೆ.

ಕೃಷಿ ಮತ್ತು ಸಂಸ್ಕರಿಸಿದ ಉತ್ಪನ್ನಗಳ ರಫ್ತು ಅಭಿವೃದ್ಧಿ ಮಂಡಳಿ (ಎಪಿಇಡಿಎ) ಮಾಹಿತಿ ಪ್ರಕಾರ 2020-21 ಹಣಕಾಸು ವರ್ಷದಲ್ಲಿ 41,130 ಮೆಟ್ರಿಕ್ ಟನ್‌ನಷ್ಟು ಕಡಿಮೆ ಬಾಳಿಕೆ ಅವಧಿ ಹಣ್ಣು, ತರಕಾರಿಯಂಥ (ಪೆರಿಷಬಲ್) ಉತ್ಪನ್ನ ರಪ್ತು ಮಾಡಲಾಗಿದೆ. ಇದು ದೇಶದ ಪೆರಿಷಬಲ್ ಉತ್ಪನ್ನಗಳ ಪೈಕಿ ಶೇ31ರಷ್ಟು ಕೆಂಪೇಗೌಡ ವಿಮಾನ ನಿಲ್ದಾಣದಿಂದಲೇ ಹೋಗಿದೆ.

ಕೋಳಿ, ಹೂವು ರಫ್ತಿನಲ್ಲೂ ಕೆಂಪೇಗೌಡ ವಿಮಾನ ನಿಲ್ದಾಣ ಮುಂಚೂಣಿಯಲ್ಲಿದೆ. 28,182 ಮೆಟ್ರಿಕ್‌ ಟನ್‌ನಷ್ಟು ಕೋಳಿ ಹಾಗೂ 1,296 ಮೆಟ್ರಿಕ್‌ ಟನ್‌ ಹೂವು ರಫ್ತುಮಾಡಲಾಗಿದೆ.

24 ವಿಮಾನಯಾನ ಸಂಸ್ಥೆಗಳು 46 ವಿದೇಶಗಳಲ್ಲಿ ಪೆರಿಷಬಲ್ ಉತ್ಪನ್ನ ರಫ್ತು ಮಾಡುತ್ತಿದೆ. ಪೆರಿಷಬಲ್ ಉತ್ಪನ್ನ ಅತ್ಯಾಧುನಿಕ ತಂತ್ರಜ್ಞಾನದಿಂದ ಕೆಡದಂತೆ ಸಂಸ್ಕರಿಸಿ ವೇಗವಾಗಿ ರಫ್ತು ಮಾಡಲಾಗುತ್ತಿದೆ. ಇದರಿಂದ ರಪ್ತು ಬೇಡಿಕೆಯೂ ದಿನೇ ದಿನೇ ಹೆಚ್ಚುತ್ತಲೇ ಇದೆ ಎಂದು ತಿಳಿಸಿದರು.

ವಿಮಾನ ನಿಲ್ದಾಣ, ರಫ್ತು ಹಾಗೂ ಪಾಲುದಾರರ ಸಹಯೋಗದಲ್ಲಿ ಕೋಲ್ಡ್ ಸ್ಟೋರೇಜ್‌ ಮೇಲ್ದರ್ಜೆಗೇರಿಸಲು ಯೋಜಿಸಲಾಗಿದೆ ಎಂದು ಎಪಿಇಡಿಎ ಅಧ್ಯಕ್ಷ ಡಾ.ಎಂ.ಅಂಗಮುತ್ತು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT