ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಆಲ್ಫಾ ಕ್ಯಾಂಟೀನ್ನಲ್ಲಿ ಕಾಫಿ ಸೇವಿಸಿದ ಪೊಲೀಸರನ್ನು ಬಿಲ್ ಕೇಳಿದ ಸಿಬ್ಬಂದಿ ಮೇಲೆ ಮೂವರು ಪೊಲೀಸ್ ಕಾನ್ಸ್ಟೆಬಲ್ಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈಚೆಗೆ ರಾತ್ರಿ ಬೀಟ್ನಲ್ಲಿ ಇದ್ದ ಗಂಗರಾಜು, ಬಾಳಪ್ಪ ಹಾಗೂ ಕುಮಾರ್ ಅವರು ಕ್ಯಾಂಟೀನ್ನಲ್ಲಿ ಕಾಫಿ ಕುಡಿದಿದ್ದರು. ನಂತರ ಸಿಬ್ಬಂದಿ ಬಿಲ್ ಕೇಳಿದ್ದಾರೆ. ಈ ವೇಳೆ ‘ನಾವು ಪೊಲೀಸರು. ನಮಗೆ ಬಿಲ್ ಏಕೆ?’ ಎಂದು ದರ್ಪದಿಂದ ವರ್ತಿಸಿದ್ದಾರೆ’ ಎಂಬ ಆರೋಪ ಕೇಳಿಬಂದಿದೆ.

ವಾಗ್ವಾದ ತೀವ್ರಗೊಂಡು ಪೊಲೀಸರು, ಕ್ಯಾಂಟೀನ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಘಟನೆ ದೃಶ್ಯಗಳು ಕ್ಯಾಂಟೀನ್ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.