ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹಮ್ ಸಾಂಸ್ಕೃತಿಕ ವೈಭವದ ಸಂಭ್ರಮ

ಐಐಟಿಬಿ ರಜತ ಮಹೋತ್ಸವ ಸಂಭ್ರಮ
Last Updated 1 ನವೆಂಬರ್ 2022, 6:03 IST
ಅಕ್ಷರ ಗಾತ್ರ

ಆನೇಕಲ್:ತಾಲ್ಲೂಕಿನ ಎಲೆಕ್ಟ್ರಾನಿಕ್‌ಸಿಟಿಯ ಇಂಟರ್‌ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್ಫರ್‌ಮೇಷನ್‌ ಟೆಕ್ನಾಲಜಿ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ‘ಪ್ರವಾಹಮ್‌’ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಾರ್ಯಕ್ರಮವು ಸೋಮವಾರ ನಡಯಿತು.

ಡಾ.ಮಂಜು ಎಲಂಗ್ಬಾಮ್‌ ಮತ್ತು ತಂಡದಿಂದ ಆಕರ್ಷಕ ಮಣಿಪುರಿ ನೃತ್ಯ ನಡೆಯಿತು. ರಾಧ ಕೃಷ್ಣರ ನೃತ್ಯರೂಪಕ ಗಮನ ಸೆಳೆಯಿತು. ಡಾ.ಮಂಜು ಕೃಷ್ಣನ ಪಾತ್ರದಲ್ಲಿ ಮತ್ತು ನಂದೈಬಾಮ್‌ ಸುರ್ಜಾಬಾಲಾಚಾನು ರಾಧೆ ಪಾತ್ರದಲ್ಲಿ ಪ್ರೇಕ್ಷಕರ ಮನ ಸೆಳೆದರು. ಮಣಿಪುರಿ ನೃತ್ಯ ಮತ್ತು ಸಾಂಸ್ಕೃತಿಕ ಪರಂಪರೆ ಬಗ್ಗೆ ಡಾ.ಮಂಜು ಎಲಂಗ್ಬಾಮ್‌ ಅವರು ವಿದ್ಯಾರ್ಥಿಗಳು ಮತ್ತು ಪ್ರೇಕ್ಷಕರೊಂದಿಗೆ ಸಂವಾದ
ನಡೆಸಿದರು.

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸುಧಾ ರಘುನಾಥನ್‌ ಅವರು ಕರ್ನಾಟಿಕ್‌ ಗಾಯನ ನಡೆಸಿಕೊಟ್ಟರು. ಪಂಡಿತ್‌ ರೋನು ಮಜುಂದಾರ್‌ ಅವರು ಹಿಂದೂಸ್ತಾನಿ ಕೊಳಲು ವಾದನ ನಡೆಸಿಕೊಟ್ಟರು.

ಐಐಟಿಬಿಯ ಪ್ರೊ.ದೇಬಬ್ರತದಾಸ್‌ ಮಾತನಾಡಿ, ‘ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಯುವ ಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಭಾರತದ ವಿವಿಧ ಸಾಂಸ್ಕೃತಿಕ ಪ್ರಕಾರಗಳ ಪ್ರದರ್ಶನದಿಂದ ವಿದ್ಯಾರ್ಥಿಗಳಲ್ಲಿ ನೃತ್ಯ, ಸಂಗೀತ ಪರಂಪರೆ ಬಗ್ಗೆ ಅರಿವು ಮೂಡಿಸುವಲ್ಲಿ ಸಹಕಾರಿಯಾಗಲಿದೆ’ ಎಂದರು.

ಮಣಿಪುರಿ ನೃತ್ಯ ಸಂಯೋಜಕ ಡಾ.ಮಂಜು ಎಲಂಗ್ಬಾಮ್‌ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಭಾರತೀಯ ಕಲೆಗಳು ಅಳಿವಿನಂಚಿನಲ್ಲಿವೆ. ಯುವ ಸಮುದಾಯವು ಪ್ರಾಚೀನ ಕಲೆ, ಸಂಸ್ಕೃತಿ ಬಗ್ಗೆ ಜ್ಞಾನ ಹೊಂದಬೇಕು ಮತ್ತು ಸಂಶೋಧನೆ ನಡೆಸಬೇಕು. ಡಿಜೆ ಆರ್ಭಟದಲ್ಲಿ ಪಾರಂಪರಿಕ ಸಾಂಸ್ಕೃತಿಕ ವೈಭವ ಮರೆಯಾಗಿದೆ ಎಂದು
ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT