ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ |ಆಸ್ತಿ ತೆರಿಗೆ ಪಾವತಿ ಆಂದೋಲನ: 13ರಿಂದ ವಿವಿಧ ವಾರ್ಡ್‌ಗಳಲ್ಲಿ ವಸೂಲಿ

Published 11 ಮೇ 2024, 14:10 IST
Last Updated 11 ಮೇ 2024, 14:10 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಪುರಸಭೆಯು 2024-25ನೇ ಸಾಲಿನ ಹಾಗೂ ಹಿಂದಿನ ಸಾಲಿನ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸಲು ಅನುಕೂಲವಾಗುವಂತೆ ಎಲ್ಲಾ ವಾರ್ಡ್‌ಗಳಲ್ಲಿ ಮೇ 13ರಿಂದ ಆಸ್ತಿ ತೆರಿಗೆ ವಸೂಲಿ ಆಂದೋಲನ ಹಮ್ಮಿಕೊಂಡಿದೆ.

ಮೇ 13ರಂದು 1ನೇ ವಾರ್ಡ್ ಪ್ರವಾಸಿ ಮಂದಿರ ಮುಂಭಾಗ, ಮೇ 14‌ರಂದು 13ನೇ ವಾರ್ಡ್‌ ಗುರಪ್ಪನಮಠ ಜಿ.ಎಂ.ಸರ್ಕಲ್ ಬಳಿ, 15ರಂದು 2ನೇ ವಾರ್ಡ್ ಬಸವೇಶ್ವರ ಪಾರ್ಕ್ ಬಳಿ, 16ರಂದು 21ನೇ ವಾರ್ಡ್ ಪ್ರವಾಸಿ ಮಂದಿರ, 17ರಂದು 3ನೇ ವಾರ್ಡ್ ಅಂಗನವಾಡಿ ಕೇಂದ್ರ ಭರತ್ ನಗರ, 18ರಂದು 23ನೇ ವಾರ್ಡ್ ಮಸೀದಿ ಹತ್ತಿರ, 20ರಂದು 4ನೇ ವಾರ್ಡ್ ಅಂಗನವಾಡಿ ಕೇಂದ್ರ, 21ರಂದು 14ನೇ ವಾರ್ಡ್ ಎಲ್ಲಮ್ಮತಾಯಿ ದೇವಾಲಯದ ಬಳಿ, 22ರದು 6ನೇ ವಾರ್ಡ್ ಬ್ರಾಹ್ಮಣ ಕಲ್ಯಾಣ ಮಂದಿರ, 23ರಂದು 22ನೇ ವಾರ್ಡ್ ನೂರಾನಿ ಮಸೀದಿ ಹತ್ತಿರ, 24‌ರಂದು 7 ನೇ ವಾರ್ಡ್ ಆನೆಕಲ್ ಛತ್ರದ ಅಂಗನವಾಡಿ ಕೇಂದ್ರ, 27ರಂದು 20ನೇ ವಾರ್ಡ್ ಇಂದಿರಾನಗರ ಅಂಗನವಾಡಿ ಕೇಂದ್ರ, 29ರಂದು 18ನೇ ವಾರ್ಡ್ ಮಂಡಿಬೆಲೆ ರಸ್ತೆ ಅಂಗನವಾಡಿ ಕೇಂದ್ರ, 30ರಂದು 8ನೇ ವಾರ್ಡ್ ಪುರಸಭೆ ಸಮುದಾಯಭವನ, 31ರಂದು 19ನೇ ವಾರ್ಡ್ ಅಂಗನವಾಡಿ ಕೇಂದ್ರ ರಾಜೀವ್ ನಗರ.

ಜೂನ್‌ 1ರಂದು 9ನೇ ವಾರ್ಡ್ ವಾಲ್ಮೀಕಿ ಉದ್ಯಾನವನದ ಬಳಿ, ಜೂನ್‌ 3ರಂದು 17ನೇ ವಾರ್ಡ್ ಸೂಲಾಲ್ ದಿನ್ನೆ ಅಂಗನವಾಡಿ ಕೇಂದ್ರ, ಜೂನ್‌ 4ರಂದು 10ನೇ ವಾರ್ಡ್ ಬಾಬಾ ಸಾಬ್ ಸರ್ಕಲ್ ಬಳಿ, ಜೂನ್‌ 5ರಂದು 12 ಮತ್ತು 11ನೇ ವಾರ್ಡ್ ದುರ್ಗಾತಾಯಿ ಕಾಲೊನಿ, ಜೂನ್‌ 7 ರಂದು 15ನೇ ವಾರ್ಡ್ ಬಲಮುರಿ ದೇವಸ್ಥಾನ ಬಳಿ, ಜೂನ್‌10 ರಂದು 16 ನೇ ವಾರ್ಡ್ ಖೂಬಾ ಮಸೀದಿ ಹತ್ತಿರ, ಜೂನ್‌ 11 ರಂದು 5 ನೇ ವಾರ್ಡ್ ಧರ್ಮರಾಯಸ್ವಾಮಿ ದೇವಸ್ಥಾನ ಬಳಿ ತೆರಿಗೆ ಪಾವತಿಸಬಹುದಾಗಿದೆ.

ಈ ಸ್ಥಳಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಆಸ್ತಿ ತೆರಿಗೆ ವಸೂಲಿ ಆಂದೋಲನ ನಡೆಯಲಿದೆ. ಆಸ್ತಿಗಳ ಮಾಲೀಕರು ಈ ಅವಕಾಶ ಸದುಪಯೋಗ ಮಾಡಿಕೊಳ್ಳಬೇಕೆಂದು ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT