ಗುರುವಾರ , ಜೂಲೈ 9, 2020
28 °C

ರೈತರಿಂದ 1.86 ಲಕ್ಷ ಕ್ವಿಂಟಲ್ ರಾಗಿ ಖರೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಕಳೆದ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದಿರುವ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆಯಡಿ 1,86,524 ಕ್ವಿಂಟಲ್ ಖರೀದಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಿಲ್ಲಾ ಉಪನಿರ್ದೇಶಕ ಸುಬ್ರಹ್ಮಣ್ಯ ತಿಳಿಸಿದ್ದಾರೆ.

11,063 ರೈತರು ರಾಗಿ ಖರೀದಿಸಿ ಕೇಂದ್ರದಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 10,429 ರೈತರು ರಾಗಿ ಮಾರಾಟ ಮಾಡಿದ್ದಾರೆ. ದೊಡ್ಡಬಳ್ಳಾಪುರ 5,593 ರೈತರ ಪೈಕಿ 5,330 ರೈತರಿಂದ 95,635 ಕ್ವಿಂಟಲ್, ನೆಲಮಂಗಲ 2,274 ರೈತರ ಪೈಕಿ 2,148 ರೈತರಿಂದ 42,706 ಕ್ವಿಂಟಲ್, ದೇವನಹಳ್ಳಿ 2,627 ರೈತರ ಪೈಕಿ 2,417 ರೈತರಿಂದ 39,354 ಕ್ವಿಂಟಲ್, ಹೊಸಕೋಟೆ 569 ರೈತರ ಪೈಕಿ 534 ರೈತರಿಂದ 8,829 ಕ್ವಿಂಟಲ್ ರಾಗಿ ಖರೀದಿಸಲಾಗಿದೆ 2018–19ನೇ ಸಾಲಿಗೆ ಹೊಲಿಕೆ ಮಾಡಿದರೆ ಶೇ 7 ರಷ್ಟು ಹೆಚ್ಚು ಇಳುವರಿಯಾಗಿದೆ ಎಂದು ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.