ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ ನಡೆ ಎಲ್ಲರಿಗೂ ಮಾದರಿ

Last Updated 25 ಏಪ್ರಿಲ್ 2021, 4:05 IST
ಅಕ್ಷರ ಗಾತ್ರ

ಆನೇಕಲ್: ಡಾ.ರಾಜ್‌ಕುಮಾರ್ ಅವರ ಚಿತ್ರಗಳು ಜನರ ಜೀವನದ ಬದುಕನ್ನೇ ಬದಲಾಯಿಸಿದ ಪರಿವರ್ತನೆಯ ಚಲನಚಿತ್ರಗಳಾಗಿದ್ದವು. ಮೌಲ್ಯಗಳು ಅವರ ಚಲನಚಿತ್ರಗಳ ಹಾಗೂ ಜೀವನದ ಭಾಗಗಳಾಗಿದ್ದವು ಎಂದು ಪುರಸಭಾ ಅಧ್ಯಕ್ಷ ಎನ್‌.ಎಸ್‌.ಪದ್ಮನಾಭ ತಿಳಿಸಿದರು.

ಪಟ್ಟಣದಲ್ಲಿ ಡಾ.ರಾಜಕುಮಾರ್‌ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ರಾಜಕುಮಾರ್‌ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಡಾ.ರಾಜ್‌ಕುಮಾರ್‌ ಅವರ ಸರಳತೆ ಹಾಗೂ ಅವರ ನಾಯಕತ್ವದ ಗುಣಗಳು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಸದಾ ಜನರ ಮನಸ್ಸಿನಲ್ಲಿ ಉಳಿದಿರುವ ನಟಸಾರ್ವಭೌಮ ಡಾ.ರಾಜ್‌ಕುಮಾರ್. ಅವರ ನಡೆ, ನುಡಿ ಎಲ್ಲರಿಗೂ ಮಾದರಿಯಾಗಿದೆ. ಡಾ.ರಾಜ್‌ಕುಮಾರ್ ಅವರು ಅಭಿನಯಿಸಿದ ಚಲನಚಿತ್ರಗಳು ಮಾನವೀಯ ಮೌಲ್ಯಗಳನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದವು. ಜನರಲ್ಲಿ ನೈತಿಕತೆ, ಮೌಲ್ಯಗಳು ಬೆಳೆಯಲು ಮಾದರಿಯಾಗಿ ಡಾ.ರಾಜ್‌ಕುಮಾರ್‌ ಅಭಿನಯದ ಮೂಲಕ ಕೆಲಸ ಮಾಡಿದ್ದರು ಎಂದರು.

ಡಾ.ರಾಜ್‌ ಕುಮಾರ್ ಅಭಿಮಾನಿಗಳ ಸಂಘದ ಪ್ರಸಾದ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT