ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈಜ್ಞಾನಿಕ ಮನೋಭಾವ ಪ್ರಗತಿಗೆ ಪೂರಕ’: ಎಸ್.ಕೃಪಾಶಂಕರ್

Last Updated 29 ಫೆಬ್ರುವರಿ 2020, 13:15 IST
ಅಕ್ಷರ ಗಾತ್ರ

ವಿಜಯಪುರ: ಜೀವನದ ಪ್ರತೀ ಘಟ್ಟದಲ್ಲಿಯೂ ವಿಜ್ಞಾನ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಪ್ರಗತಿಶೀಲರಾಗಬೇಕು ಎಂದು ಪ್ರಗತಿ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಎಸ್.ಕೃಪಾಶಂಕರ್ ಹೇಳಿದರು.

ಇಲ್ಲಿನ ಪ್ರಗತಿ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಜ್ಞಾನವು ವಿಸ್ಮಯಗಳ ಸಮುದ್ರವಿದ್ದಂತೆ.ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬೆಳವಣಿಗೆಯಲ್ಲಿ ವಿಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ. ವಿಜ್ಞಾನ ಲೋಕದಲ್ಲಿದಿನೇ ದಿನೇ ಹೊಸ ಆವಿಷ್ಕಾರಗಳು ಆಗುತ್ತಿವೆ. ಈ ವಿದ್ಯಮಾನಗಳನ್ನುವಿದ್ಯಾರ್ಥಿಗಳು ಗಮನಿಸಬೇಕು. ಶಾಲೆಯ ವಿಜ್ಞಾನ ಚಟುವಟಿಕೆಗಳಲ್ಲಿ ನಿರಂತರವಾಗಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಶಾಲೆಯ ಮುಖ್ಯಶಿಕ್ಷಕ ವಿ.ಬಸವರಾಜು ಮಾತನಾಡಿ, ವಿಭಿನ್ನ ಆವಿಷ್ಕಾರಗಳಿಂದ ವಿಶ್ವವೇ ನಮಗೆ ಇಂದು ಹತ್ತಿರವಾಗಿದೆ. ವಿಜ್ಞಾನ ಮಾನವನ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದೆ. ಇದರಿಂದಾಗಿಯೇ ಅಸಾಧ್ಯವಾದದ್ದು ಸಾಧ್ಯವಾಗಿದೆ. ವಿಜ್ಞಾನದಿಂದ ಸಮಾಜದ ಪ್ರಗತಿಗೆ ಹಾಗೂ ಮನುಷ್ಯನ ಶ್ರಮ, ಸಮಯದ ಉಳಿತಾಯಕ್ಕೂ ಕಾರಣವಾಗಿದೆ. ಪ್ರತಿಭೆ ಯಾರ ಸ್ವತ್ತೂ ಅಲ್ಲ. ಪ್ರತಿಭೆ ಅನಾವರಣಕ್ಕೆ ವಿಜ್ಞಾನ ವಸ್ತು ಪ್ರದರ್ಶನ ಅಗತ್ಯ. ಮೂಢನಂಬಿಕೆಗಳನ್ನು ತೊಲಗಿಸಿ ಎಲ್ಲರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಲು ವಿಜ್ಞಾನವು ಸಹಕಾರಿ ಆಗಿದೆ ಎಂದರು.

ವಿದ್ಯಾರ್ಥಿಗಳಾದ ಚಂದನ, ನೂರ್‌ಆಫ್ಸಾಖಾನಂ ಅವರು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಸರ್.ಸಿ.ವಿ.ರಾಮನ್‌ ಅವರ ಕುರಿತು ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳು ತಾಜ್ಯ ವಸ್ತುಗಳನ್ನು ಉಪಯೋಗಿಸಿ ತಯಾರಿಸಿದ್ದ ವಿವಿಧ ರೀತಿಯ ವಿಜ್ಞಾನ ಮಾದರಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಶಾಲೆಯ ವಿಜ್ಞಾನ ಶಿಕ್ಷಕ ಗಿರಿಧರ್ ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT