ಹೊಸಕೋಟೆ:'ಸರ್ಕಾರ ನಮ್ಮ ವಿರುದ್ಧ ಇದ್ದರೂ ಅಧಿಕಾರಿಗಳು ನಮ್ಮ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ತಾಲ್ಲೂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು'ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ನಗರದ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ನಡೆದ ಸ್ವಾಭಿಮಾನಿ ಪಕ್ಷದ ಟೌನ್ ಕೋ ಆಪರೇಟೀವ್ ಬ್ಯಾಂಕ್ ಚುನಾವಣೆ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಕಾರ್ಯಕರ್ತರು ತಾವೇ ಶರತ್ ಬಚ್ಚೇಗೌಡ ಎಂದು ಭಾವಿಸಿ ಕೆಲಸ ಮಾಡಿ ಗೆಲುವಿಗೆ ಕಾರಣರಾಗಿದ್ದಾರೆ. ಮುಂದಿನ ಎಲ್ಲ ಸ್ಥಳೀಯ ಚುನಾವಣೆ ನನ್ನದೆಂದು ಭಾವಿಸಿ ಗೆಲುವಿಗೆ ಹೋರಾಟ ಮಾಡುವುದಾಗಿ ಭರವಸೆ ನೀಡಿದರು.

ಮುಂಬರುವ ಬ್ಯಾಂಕ್ ಚುನಾವಣೆ, ನಗರಸಭೆ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಸಂಘಟನೆ ಬಲಪಡಿಸಬೇಕಾಗಿದೆ. ಷೇರುದಾರರ ಹಿತರಕ್ಷಣೆ ಕಾಪಾಡಬೇಕಿದೆ ಎಂದು ಹೇಳಿದರು.

ಸಭೆಯಲ್ಲಿ ಬ್ಯಾಂಕ್ ಮಾಜಿ ಅಧ್ಯಕ್ಷ ನಟರಾಜ್, ನಾಗರಾಜ್, ಸೋಮಸುಂದರ್, ಜಿಲ್ಲಾ ಪಂಚಾಯತಿ ಸದಸ್ಯರಾದ ಕೃಷ್ಣಮೂರ್ತಿ ಮಾತನಾಡಿದರು. ವೇದಿಕೆಯಲ್ಲಿ ಬೈರೇಗೌಡ, ರುದ್ರಾರಾಧ್ಯ, ಇಂತಿಯಾಜ್ ಪಾಷ, ಕ್ಯಾಸೆಟ್ ನಾಗರಾಜ್, ವಕೀಲ ಮಂಜುನಾಥ್, ಜಿಲ್ಲಾ ಪಂಚಾಯತಿ ಸದಸ್ಯ ಮಂಜುನಾಥ್ ವಾಸು, ಮುನಿನಂಜಪ್ಪ ಇದ್ದರು.

ಮೇಲ್ಸುತೇವೆ ನಿರ್ಮಾಣಕ್ಕ ಕ್ರಮ: ನಗರದ ಗೌತಮ್ ಕಾಲೊನಿ ಮತ್ತು ಕೋರ್ಟ್ ಸರ್ಕಲ್‌ಗಳಲ್ಲಿ ಜನರು ರಸ್ತೆ ದಾಟಲು ಸರಿಯಾದ ವ್ಯವಸ್ಥೆ ಇಲ್ಲ. ಗೌತಮ್ ಕಾಲೊನಿ ಬಳಿ ಅಪಘಾತ ಹೆಚ್ಚು ಸಂಭವಿಸುತ್ತಿದ್ದು ಎರಡು ಕಡೆ ಸುಸಜ್ಜಿತವಾದ ಮೇಲೇತ್ಸುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.