ದೊಡ್ಡಬಳ್ಳಾಪುರ: ನಗರದ ಸೋಮೇಶ್ವರಸ್ವಾಮಿ ದೇವಾಲಯ ಸಮೀಪದ ಶ್ರೀಮದ್ ದಾಸೋಹ ಸಂಸ್ಥಾನ ಜಗದ್ಗುರು ಬಸವೇಶ್ವರ ಮಹಾಮಠದಲ್ಲಿ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ 118ನೇ ಜಯಂತಿ, ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಪಾದಪೂಜಾ ಕಾರ್ಯಕ್ರಮ ನಡೆಯಿತು.

ಕೊಡಗು ಜಿಲ್ಲೆ ಶನಿವಾರಸಂತೆಯ ಮುಳ್ಳುರಿನ ಸ್ವತಂತ್ರಬಸವಲಿಂಗ ಸ್ವಾಮೀಜಿ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.

ಶಿವಕುಮಾರಸ್ವಾಮೀಜಿ ಅನ್ನ, ಅಕ್ಷರ ಮತ್ತು ಆಶ್ರಯ ಮೂಲಕ ತ್ರಿವಿಧ ದಾಸೋಹಿಗಳಾಗಿದ್ದರು. ತಮ್ಮ ದಿನಚರಿಯಲ್ಲಿ ಇಷ್ಟಲಿಂಗ ಪೂಜೆ, ಧಾರ್ಮಿಕ ಆಚರಣೆಗಳನ್ನು ತಪ್ಪದೇ ನೆರವೇರಿಸುತ್ತಿದ್ದರು. ಇಂತಹ ಮಹಾಮಹಿಮರನ್ನು ಸ್ಮರಣೆ ಮಾಡುವುದರೊಂದಿಗೆ ಅವರ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದರು.

ಮಹಾದೇವಣ್ಣ ಮತ್ತು ಸಂಗಡಿಗರಿಂದ ದಾಸೋಹ ಸೇವೆ ನಡೆಯಿತು.

ಬಸವೇಶ್ವರ ಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಮಹಾಸ್ವಾಮಿ, ಮಠ ಭಕ್ತರಾದ ಕೊನಘಟ್ಟ ಬಸವರಾಜು, ರೇಣುಕಾಬಸವರಾಜು, ಪ್ರೇಮಕುಮಾರಿ, ಶ್ವೇತ, ಗಿರೀಶ, ಗಗನ್ ಕಿಚಿಡಿ, ಪ್ರಭಾಕರ್ ಸೋಣಪ್ಪನಹಳ್ಳಿ, ಪದ್ಮವೆಂಕಟೇಶ, ರಾಜಶೇಖರ್, ಪ್ರಭುದೇವ, ಮುತ್ತಣ್ಣ, ಬಸವಲಿಂಗಯ್ಯ, ನಟರಾಜ, ರೇಣುಕಾಪ್ರಸಾದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.