ಬುಧವಾರ, ಮಾರ್ಚ್ 3, 2021
23 °C

ತಾಲ್ಲೂಕನ್ನು ಕ್ವಾರಂಟೈನ್‌ ಬಂದಿಖಾನೆ ಮಾಡಲು ಬಿಡುವುದಿಲ್ಲ: ಆನಂದ್‌ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ತಾಲ್ಲೂಕನ್ನು ಬಿಬಿಎಂಪಿ ಕಸದ ತೊಟ್ಟಿಯನ್ನಾಗಿ ಮಾಡಿದ ನಂತರ ಈಗ ತಾಲ್ಲೂಕನ್ನು ಕೊರೊನಾ ಪೀಡಿತರ ಕ್ವಾರಂಟೈನ್‌ ಮಾಡುವ ಬಂದಿಖಾನೆ ಮಾಡಲು ಹೊರಟಿದ್ದಾರೆ. ಸರ್ಕಾರದ ಈ ನಿರ್ಧಾರವನ್ನು ಕೂಡಲೇ ಕೈಬಿಡಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು ಎಂದು ಕೆಎಂಎಫ್‌ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಅವರು ಈ ಬಗ್ಗೆ ಮಾಹಿತಿ ನೀಡಿ, ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಗೆ ಬಿಬಿಎಂಪಿ ಕಸ ತಂದು ಸುರಿಯುತ್ತಿರುವುದರಿಂದ ಈ ಭಾಗದ ಜನರ ಬದಕು ನರಕಮಯವಾಗಿದೆ. ಇದರ ವಿರುದ್ಧ ಸಾಕಷ್ಟು ಹೋರಾಟ ನಡೆಸುತ್ತಲೇ ಬರುತ್ತಿದ್ದರೂ ಕೂಡ ಕಸ ಬರುವುದು ಮಾತ್ರ ನಿಂತಿಲ್ಲ. ಇಂತಹ ಕಷ್ಟವನ್ನು ತಾಲ್ಲೂಕಿನ ಜನರು ಅನುಭವಿಸುತ್ತಿರುವಾಗಲೇ ವಿದೇಶಗಳಲ್ಲಿ ಇರುವ ರಾಜ್ಯದ ಜನರನ್ನು ಕರೆತಂದು ತಾಲ್ಲೂಕಿನ ಸಮುದಾಯ ಭವನ, ಆಸ್ಪತ್ರೆ, ಕಲ್ಯಾಣ ಮಂದಿರಗಳಲ್ಲಿ 14 ದಿನಗಳ ಕ್ವಾರಂಟೈನ್‌ ಮಾಡುತ್ತಿರುವುದು ಖಂಡನೀಯ. ತಾಲ್ಲೂಕಿನ ಜನರನ್ನು ಮಾತ್ರ ಇಲ್ಲಿ ಕ್ವಾರಂಟೈನ್‌ ಮಾಡಬೇಕು. ಇತರ ಜಿಲ್ಲೆ ಜನರನ್ನು ಅವರ ಜಿಲ್ಲೆ, ತಾಲ್ಲೂಕುಗಳಿಗೆ ಕಳುಹಿಸಿ ಅಲ್ಲಿಯೇ ಕ್ವಾರಂಟೈನ್‌ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು