ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ರಂಗೇರಿದ ಟಿಎಪಿಸಿಎಂಎಸ್‌ ಚುನಾವಣೆ ಕಣ

ಪಹಣಿ ಹೊಂದಿರುವ ರೈತರು ಮಾತ್ರ ಸದಸ್ಯತ್ವ ಹೊಂದಲು ಅರ್ಹರು
Last Updated 6 ನವೆಂಬರ್ 2020, 1:36 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್‌) ಚುನಾವಣ ಪ್ರಚಾರದ ಭರಾಟೆ ಜೋರಾಗಿದ್ದು ಅಭ್ಯರ್ಥಿಗಳು ಮತದಾರರ ಮನೆಗಳಿಗೆ ಭೇಟಿ ನೀಡಿ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಜಮೀನಿನ ಪಹಣಿ ಹೊಂದಿರುವ ರೈತರು ಮಾತ್ರ ಟಿಎಪಿಸಿಎಂಎಸ್‌ನಲ್ಲಿ ಸದಸ್ಯತ್ವ ಹೊಂದಲು ಅರ್ಹರು. ಸದಸ್ಯತ್ವ ಹೊಂದಿರುವ ರೈತರು ಟಿಎಪಿಸಿಎಂಎಸ್‌ನಲ್ಲಿ ನಡೆಯುವ ಸರ್ವ ಸದಸ್ಯರ ಸಭೆಗಳಲ್ಲಿ ಕನಿಷ್ಠ ಮೂರು ಸಭೆಗಳಲ್ಲಿ ಭಾಗವಹಿಸಿದ್ದರೆ ಮಾತ್ರ ಮತ ಚಲಾಯಿಸಲು ಹಕ್ಕು ಹೊಂದಿರುತ್ತಾರೆ.

ಟಿಎಪಿಸಿಎಂಎಸ್‌ನ 4,200 ಸದಸ್ಯರ ಪೈಕಿ 2,163 ಜನ ಸದಸ್ಯರು ಮಾತ್ರ ಮತ ಚಲಾಯಿಸುವ ಹಕ್ಕು ಹೊಂದಿದ್ದರು. ಸರ್ವ ಸದಸ್ಯರ ಸಭೆಗಳಲ್ಲಿ ಭಾಗವಹಿಸದೆ ಮತದಾನದ ಹಕ್ಕು ಕಳೆದುಕೊಂಡಿದ್ದವರಲ್ಲಿ 1,500 ಜನ ಸದಸ್ಯರು ನ್ಯಾಯಾಲಯದ ಮೊರೆ ಹೋಗಿ ಮತ ಚಲಾಯಿಸುವ ಹಕ್ಕು ಪಡೆದುಕೊಂಡು ಬಂದಿದ್ದಾರೆ. ಈ ಸಂಖ್ಯೆ ಇನ್ನು ಹೆಚ್ಚಾಗಲಿದೆ.

13 ಸ್ಥಾನಗಳನ್ನು ಹೊಂದಿರುವ ಟಿಎಪಿಸಿಎಂಎಸ್‌ನಲ್ಲಿ ‘ಎ’ತರಗತಿಯಿಂದ 4 (ವಿಎಸ್‌ಎಸ್‌ಎನ್‌ಗಳಿಂದ), ‘ಬಿ’ ತರಗತಿಯಿಂದ 9 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 13 ಜನ ನಿರ್ದೇಶಕರ ಸ್ಥಾನಗಳನ್ನು ಹೊಂದಿರುವ ಟಿಎಪಿಸಿಎಂಎಸ್‌ನಲ್ಲಿ ‘ಎ’ ತಗತಿಯ 4 ಸ್ಥಾನಗಳಿಗೆ 7 ಜನ ಅಂತಿಮ ಕಣದಲ್ಲಿ ಉಳಿದಿದ್ದಾರೆ. ಬಿಸಿಎಂ ‘ಎ’ 1 ನಿರ್ದೇಶಕ ಸ್ಥಾನಕ್ಕೆ 4 ಜನ, ಬಿಸಿಎಂ ‘ಬಿ’ 1 ನಿರ್ದೇಶಕ ಸ್ಥಾನಕ್ಕೆ 3 ಜನ, ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾದ 2 ನಿರ್ದೇಶಕ ಸ್ಥಾನಗಳಿಗೆ 5 ಜನ, ಸಾಮಾನ್ಯ ಅಭ್ಯರ್ಥಿಗಳಿಗೆ ಮೀಸಲಾಗಿರುವ 3 ಸ್ಥಾನಗಳಿಗೆ 9 ಜನ, ಪರಿಶಿಷ್ಟ ಜಾತಿ ಅಭ್ಯರ್ಥಿಗೆ ಮೀಸಲಾಗಿರುವ 1 ಸ್ಥಾನಕ್ಕೆ 4 ಜನ, ಪರಿಶಿಷ್ಟ ಜಾತಿ ಪಂಗಡದ ಅಭ್ಯರ್ಥಿಗೆ ಮೀಸಲಾದ 1 ಸ್ಥಾನಕ್ಕೆ 3 ಜನ ಅಭ್ಯರ್ಥಿಗಳು ಅಂತಿಮ ಚುನಾವಣ ಕಣದಲ್ಲಿದ್ದಾರೆ. ನ.8 ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ನಡೆಯಲಿದ್ದು, ಅಂತಿಮ ಚುನಾವಣ ಕಣದಲ್ಲಿ 35 ಜನ ಅಭ್ಯರ್ಥಿಗಳು ಉಳಿದಿದ್ದಾರೆ.

ಬಹಿರಂಗವಾದ ಭಿನ್ನಮತ: ಟಿಎಪಿಸಿಎಂಎಸ್‌ ಚುನಾವಣೆ ಜೆಡಿಎಸ್‌ ಪಕ್ಷದೊಳಗೆ ಇದ್ದ ಭಿನ್ನಮತ ಈಗ ಬಹಿರಂಗವಾಗಿದೆ. ಜಿಲ್ಲಾ ಜೆಡಿಎಸ್‌ ಘಟಕದ ಅಧ್ಯಕ್ಷ ಬಿ.ಮುನೇಗೌಡ ಅವರು ಎಲ್ಲ 9 ಸ್ಥಾನಗಳಿಗೂ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳನ್ನು ಚುನಾವಣ ಕಣಕ್ಕೆ ಇಳಿಸಿದ್ದಾರೆ. ಆದರೆ, ಜೆಡಿಎಸ್‌ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಅಪ್ಪಯ್ಯ ಅವರು ಐದು ಸ್ಥಾನಗಳಿಗೆ ಮಾತ್ರ ಜೆಡಿಎಸ್‌ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಚುನಾವಣ ಕಣಕ್ಕೆ ಇಳಿಸಿದ್ದು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ನಾಲ್ಕು ಸ್ಥಾನ ಬಿಟ್ಟುಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT